Home News KSRTC : ಆಯುಧ ಪೂಜೆಗೂ ಸರ್ಕಾರದ ಬಳಿ ಹಣವಿಲ್ಲ? ಒಂದು ಬಸ್ ಪೂಜೆಗೆ ರೂ.150 ಮಾತ್ರ...

KSRTC : ಆಯುಧ ಪೂಜೆಗೂ ಸರ್ಕಾರದ ಬಳಿ ಹಣವಿಲ್ಲ? ಒಂದು ಬಸ್ ಪೂಜೆಗೆ ರೂ.150 ಮಾತ್ರ !!

Hindu neighbor gifts plot of land

Hindu neighbour gifts land to Muslim journalist

KSRTC : ರಾಜ್ಯ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆಯಿಂದಾಗಿ ಕೆಎಸ್ಆರ್ಟಿಸಿ ಸಂಸ್ಥೆಯು ಅತೀವ ನಷ್ಟದಲ್ಲಿ ಮುನ್ನಡೆಯುತ್ತಿದೆ. ಇದರ ಫಲವಾಗಿ ಈಗ ಆಯುಧಪೂಜೆಯಂದು ಬಸ್ಗಳಿಗೆ ಪೂಜೆ ಮಾಡಿಸಲು ಸರ್ಕಾರವು ಕೇವಲ 150 ರೂಪಾಯಿಗಳನ್ನು ಮಾತ್ರ ಬಿಡುಗಡೆ ಮಾಡಿದೆ..

ಹೌದು, ರಾಜ್ಯ ಸರ್ಕಾರ ಆಯುಧ ಪೂಜೆಗೆ ಸರ್ಕಾರಿ ಬಸ್‌ಗಳಿಗೆ (KSRTC) ಪೂಜೆ ಸಲ್ಲಿಸಲು ಸಾರಿಗೆ ಇಲಾಖೆಯಿಂದ ಹಣ ಬಿಡುಗಡೆ ಮಾಡಿದ್ದು, ಪ್ರತಿ ಬಸ್‌ಗೆ ಕೇವಲ 150 ರೂ. (150rs) ನೀಡಲಾಗಿದೆ. ಇದಕ್ಕೆ ಸಿಬ್ಬಂದಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಹಬ್ಬದ ದಿನಗಳಲ್ಲಿ ಹೂವಿನ ಬೆಲೆ ಗಗನಕ್ಕೇರುತ್ತದೆ. ಒಂದು ಮಾರು ಹೂವಿನ ಹಾರವೇ 100 ರೂ. ಇರುತ್ತದೆ. ಸರ್ಕಾರ ನೀಡಿರುವ 150 ರೂಪಾಯಿಯಲ್ಲಿ ಒಂದು ಬಸ್ ಪೂಜೆ ಮಾಡಲು ಸಾಧ್ಯವೇ ಇಲ್ಲ. ಹೀಗಾಗಿ ಬೆವೆ ವಿಧಿಯಿಲ್ಲದೆ ಸಾರಿಗೆ ಸಿಬ್ಬಂದಿಯೇ ತಮ್ಮ ಕೈಯಿಂದ ಹಣ ಹಾಕಿ ಆಯುಧ ಪೂಜೆ ಹಬ್ಬ ಮಾಡುವ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ.