Home News Kolara: ಪಾಕಿಸ್ತಾನಕ್ಕೆ ಮಾಸ್ಟರ್ ಸ್ಟ್ರೋಕ್ ಕೊಟ್ಟ ಕೋಲಾರದ ರೈತರು!!

Kolara: ಪಾಕಿಸ್ತಾನಕ್ಕೆ ಮಾಸ್ಟರ್ ಸ್ಟ್ರೋಕ್ ಕೊಟ್ಟ ಕೋಲಾರದ ರೈತರು!!

Hindu neighbor gifts plot of land

Hindu neighbour gifts land to Muslim journalist

Kolara: ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನಕ್ಕೆ ಭಾರತ ಸರ್ಕಾರವು ಒಂದಲ್ಲ ಒಂದು ರೀತಿಯ ಶಾಕ್ ನೀಡುತ್ತಲೇ ಬಂದಿದೆ. ಈಗ ಕೋಲಾರದ ರೈತರೆಲ್ಲರೂ ಸೇರಿ ಪಾಕಿಸ್ತಾನಕ್ಕೆ ದೊಡ್ಡ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ.

ಹೌದು, ಈಗಾಗಲೇ ಕೇಂದ್ರ ಸರ್ಕಾರ ರಾಜತಾಂತ್ರಿಕವಾಗಿ ಪಾಕಿಸ್ತಾನದ ವಿರುದ್ದ ಪ್ರತೀಕಾರವನ್ನು ತೀರಿಸಿಕೊಳ್ಳಲು ಮುಂದಾಗಿದ್ದು,ಇದರ ಬೆನ್ನಲೇ ಕೋಲಾರದ ರೈತರು ಮತ್ತು ವರ್ತಕರು ಪಾಕಿಸ್ತಾನಕ್ಕೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಘೋಷಣೆ ಮಾಡಿದ್ದಾರೆ. ಅದೇನೆಂದರೆ ಜೂನ್ ಮತ್ತು ಜುಲೈ ತಿಂಗಳಲ್ಲಿ ಟೊಮ್ಯಾಟೊ ಸುಗ್ಗಿಯ ಕಾಲ. ಈ ಸಂದರ್ಭದಲ್ಲಿ ವಿಶ್ವದ ಅತಿ ದೊಡ್ಡ ಟೊಮೋಟೊ ಮಾರುಕಟ್ಟೆಗಳಲ್ಲಿ ಒಂದಾದ ಕೋಲಾರದ ಟೊಮೆಟೊ ಮಾರುಕಟ್ಟೆಯಿಂದ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ,ದುಬೈ ಸೇರಿದಂತೆ ವಿವಿಧ ದೇಶಗಳಿಗೆ ಇಲ್ಲಿನ ರೈತರು ರಪ್ತು ಮಾಡುತ್ತಾರೆ. ಆದರೆ ಈಗ ಕೋಲಾರದ ರೈತರು ತಮ್ಮ ಟೊಮೆಟೊವನ್ನು ಪಾಕಿಸ್ತಾನಕ್ಕೆ (Pakistan) ರಪ್ತು ಮಾಡುವುದನ್ನ ನಿಲ್ಲಿಸಿದ್ದಾರೆ. ಈ ಮೂಲಕ ಕೋಲಾರದ ರೈತರು ಸಹ ಪಾಕಿಸ್ತಾನಕ್ಕೆ ಶಾಕ್ ಕೊಟ್ಟಿದ್ದಾರೆ.

ಪ್ರತಿ ವಾರ್ಷಿಕವಾಗಿ 800 ರಿಂದ 900 ಟನ್ ಟೊಮೆಟೊವನ್ನು ಕೋಲಾರಿಂದ ಪಾಕಿಸ್ತಾನಕ್ಕೆ ಸರಬರಾಜು ಮಾಡಲಾಗುತ್ತಿತ್ತು. ಆದ್ರೆ, ಪೆಹಲ್ಗಾಮ್​ ದಾಳಿ ಬೆನ್ನಲ್ಲೇ ವರ್ತಕರು ಇನ್ನು ಮುಂದೆ ಪಾಕಿಸ್ತಾನಕ್ಕೆ ಒಂದೇ ಒಂದು ಟೊಮೆಟೊವನ್ನು ಕಳುಹಿಸದಿರಲು ತೀರ್ಮಾನಿಸಿದ್ದಾರೆ. ತಮಗೆ ನಷ್ಟವಾದರೂ ಪರವಾಗಿಲ್ಲ ಪಾಕಿಸ್ತಾನಕ್ಕೆ ಮಾತ್ರ ಟೊಮೆಟೊ ಕಳುಹಿಸುವುದಿಲ್ಲ, 2013ರಲ್ಲಿ ಪುಲ್ವಾಮ ದಾಳಿ ಸಂದರ್ಭದಲ್ಲಿ ಕೂಡಾ ಇದೇ ರೀತಿ ಪಾಕಿಸ್ತಾನ ಕ್ಯಾತೆ ತೆಗೆದಾಗ ಕೋಲಾರದ ರೈತರು ಇಂತಹದ್ದೇ ನಿರ್ಧಾರ ಮಾಡಿದ್ದರು, ಈಗ ಮತ್ತೆ ಪಾಕ್ ಅಂಥಹದ್ದೇ ಕ್ಯಾತೆ ತೆಗೆದಿರುವ ಹಿನ್ನೆಲೆ ಕೋಲಾರದಿಂದ ಮಾಡಲಾಗುತ್ತಿದ್ದ ಟೊಮೆಟೊ ರಪ್ತು ಈಗ ಮತ್ತೆ ನಿಲ್ಲಿಸುತ್ತೇವೆ ಎಂದಿದ್ದಾರೆ.

ಇಷ್ಟೇ ಅಲ್ಲದೆ ಪಾಕಿಸ್ತಾನದ ಜೊತೆ ಇಲ್ಲಿನ ವರ್ತಕರು ಅವಿನಾಭಾವ ‌ಸಂಬಂಧವನ್ನು ಹೊಂದಿದ್ದಾರೆ.‌ ಟೊಮೆಟೊ ಜೊತೆ ತರಕಾರಿಯನ್ನು‌ ಸಹ ಕಳುಹಿಸುತ್ತಿದ್ದರು. ಈ ಮೂಲಕ ಕೋಟ್ಯಾಂತರ ರೂಪಾಯಿ ವ್ಯವಹಾರವನ್ನು ಇಲ್ಲಿನ ರೈತರು ವರ್ತಕರು ಪಾಕಿಸ್ತಾನದ ಜೊತೆ ವಹಿವಾಟು ಮಾಡುತ್ತಿದ್ದರು. ಆದ್ರೆ ನರಮೇಧ ನಡೆಸಿ ಕ್ಯಾತೆ ತೆಗೆದ ಹಿನ್ನಲೆಯಲ್ಲಿ ರೈತರು ಪಾಕಿಸ್ತಾನದ ವಿರುದ್ದ ತಿರುಗಿ ಬಿದಿದ್ದಾರೆ.

ಇನ್ನು ಕೋಲಾರದ ಎಪಿಎಂಸಿ ಮಾರುಕಟ್ಟೆ (Kolar APMC) ಇಡೀ ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ (tomato Market) ಎನ್ನುವ ಹೆಗ್ಗಳಿಕೆ ಹೊಂದಿದೆ. ಅದೇ ಕಾರಣಕ್ಕೆ ಕೋಲಾರ ಜಿಲ್ಲೆಯಲ್ಲಿ ಬೆಳೆಯುವ ಗುಣಮಟ್ಟದ ಟೊಮೆಟೊ ದೇಶದ ಬಹುತೇಕ ರಾಜ್ಯಗಳಿಗೆ ಹಾಗೂ ಹೊರ ದೇಶಗಳಿಗೂ ರಫ್ತಾಗುತ್ತದೆ.