Home News Karnataka: ಇವತ್ತಿನಿಂದ ದುಬಾರಿ ದುನಿಯಾ ಆರಂಭ: ಇವೆಲ್ಲಾ ಇಂದಿನಿಂದ ಕಾಸ್ಟ್ಲಿ

Karnataka: ಇವತ್ತಿನಿಂದ ದುಬಾರಿ ದುನಿಯಾ ಆರಂಭ: ಇವೆಲ್ಲಾ ಇಂದಿನಿಂದ ಕಾಸ್ಟ್ಲಿ

Hindu neighbor gifts plot of land

Hindu neighbour gifts land to Muslim journalist

Karnataka: ದೇಶಾದ್ಯಂತ ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭವಾಗುತ್ತಿರುವುದು ಜನರಿಗೆ ಒಂದು ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಯಾಕೆಂದರೆ ಇಂದಿನಿಂದ ರಾಜ್ಯದಲ್ಲಿ (Karnataka) ನಂದಿನಿ ಹಾಲಿನ ದರ, ವಿದ್ಯುತ್ ದರ, ಜೊತೆಗೆ ದೇಶದಲ್ಲಿ ಹೊಸ ಟೋಲ್ ದರಗಳು ಜಾರಿಗೆ ಬರಲಿವೆ.

ಹಾಲಿನ ದರ 4 ರೂಪಾಯಿ, ಮೊಸರು ದರ 4 ರೂಪಾಯಿ, ವಿದ್ಯುತ್ ದರ ಪ್ರತಿ ಯೂನಿಟ್‌ಗೆ 36 ಪೈಸೆ, ಅಲ್ಲದೇ ಮಾಸಿಕ ಶುಲ್ಕ 20 ರೂ ಏರಿಕೆ ಆಗಲಿದ್ದು, ದೇಶದಲ್ಲಿ ಟೋಲ್‌ ದರ ಶೇಕಡ 5ರಷ್ಟು ಹೆಚ್ಚಳವಾಗಲಿದೆ.

ಇನ್ನು ಹೊಸ ವಾಹನ ಖರೀದಿಸಬೇಕು ಎಂದು ಕನಸು ಕಾಣುತ್ತಿರುವ ಗ್ರಾಹಕರಿಗೂ ಶಾಕ್ ಎದುರಾಗಿದೆ. ಉಕ್ಕು ಬಿಡಿ ಭಾಗ ದುಬಾರಿಯಾಗಲಿದ್ದು, ಇದರ ಜೊತೆಗೆ ಬಿಡಿ ಭಾಗ ಉಕ್ಕುಗಳ ಆಮದು ದರ ಇಂದಿನಿಂದ ಏರಿಕೆಯಾಗುತ್ತದೆ. ಇದರಿಂದಾಗಿ ವಾಹನಗಳ ಬೆಲೆಯೂ ಗಗನಕ್ಕೇರಲಿದೆ.