Home News East India Company: 200 ವರ್ಷ ಭಾರತವನ್ನಾಳಿದ ಈಸ್ಟ್ ಇಂಡಿಯಾ ಕಂಪನಿಗೆ ಈಗ ಭಾರತೀಯನೇ ಮಾಲೀಕ!!

East India Company: 200 ವರ್ಷ ಭಾರತವನ್ನಾಳಿದ ಈಸ್ಟ್ ಇಂಡಿಯಾ ಕಂಪನಿಗೆ ಈಗ ಭಾರತೀಯನೇ ಮಾಲೀಕ!!

Hindu neighbor gifts plot of land

Hindu neighbour gifts land to Muslim journalist

East India Company : ಸುಮಾರು 200 ವರ್ಷಗಳ ಕಾಲ ಭಾರತವನ್ನಾಳಿ, ಭಾರತದಲ್ಲಿ ಇದ್ದಂತಹ ಎಲ್ಲವನ್ನು ಲೂಟಿ ಮಾಡಿದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಇದೀಗ ಭಾರತೀಯ ಮೂಲದ ಉದ್ಯಮಿಯೇ ಮಾಲೀಕರಾಗಿರಾಗಿದ್ದಾರೆ.

ಹೌದು, ಕಳೆದ ಶತಮಾನಗಳಲ್ಲಿ ಭಾರತವನ್ನು ಆಳಿದ ಈಸ್ಟ್ ಇಂಡಿಯಾ ಕಂಪನಿಯ ಪ್ರಸ್ತುತ ಮಾಲೀಕರು ಒಬ್ಬ ಭಾರತೀಯ ಮೂಲದ ವ್ಯಕ್ತಿ ಎಂಬುದು ವಿಪರ್ಯಾಸ. ಭಾರತೀಯ ಮೂಲದ ಬ್ರಿಟಿಷ್ ಉದ್ಯಮಿ ಸಂಜೀವ್ ಮೆಹ್ತಾ ಅವರು ಈಗ ಈಸ್ಟ್ ಇಂಡಿಯಾ ಕಂಪನಿಯ ಮುಖ್ಯಸ್ಥರಾಗಿದ್ದಾರೆ.

ಅಂದಹಾಗೆ 2000ರ ದಶಕದ ಆರಂಭದಲ್ಲಿ, “ದಿ ಈಸ್ಟ್ ಇಂಡಿಯಾ ಕಂಪನಿ” ಎಂಬ ಐತಿಹಾಸಿಕ ಹೆಸರಿನ ಹೊಸ ಘಟಕವನ್ನು ಹೂಡಿಕೆದಾರರ ಗುಂಪು ಪುನರುಜ್ಜೀವನಗೊಳಿಸಿತು. ಸಂಜೀವ್ ಮೆಹ್ತಾ ಕ್ರಮೇಣ ಈ ಹೊಸ ಕಂಪನಿಯಲ್ಲಿ ಷೇರುಗಳನ್ನು ಪಡೆದುಕೊಂಡರು ಮತ್ತು 2005ರ ಸುಮಾರಿಗೆ ಅದರ ಏಕೈಕ ಮಾಲೀಕರಾದರು. ಪ್ರಸ್ತುತ, ಸಂಜೀವ್ ಮೆಹ್ತಾ ಅವರು ಈಸ್ಟ್ ಇಂಡಿಯಾ ಕಂಪನಿಯ ಸಿಇಒ ಆಗಿದ್ದಾರೆ. ಈ ಕಂಪನಿಯು ಈಗ ಐಷಾರಾಮಿ ಸರಕುಗಳ ವಲಯದಲ್ಲಿ ವ್ಯಾಪಾರ ಆಸಕ್ತಿಗಳನ್ನು ಹೊಂದಿದೆ.

ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ :

ಈಸ್ಟ್ ಇಂಡಿಯಾ ಕಂಪನಿಯನ್ನು 1600ರ ಡಿಸೆಂಬರ್ 31 ರಂದು ಇಂಗ್ಲೆಂಡ್‌ನಲ್ಲಿ ಬ್ರಿಟಿಷ್ ಸಾಮ್ರಾಜ್ಞಿಯ ವಿಶೇಷ ಸನ್ನದಿನೊಂದಿಗೆ ವ್ಯಾಪಾರ ಕಂಪನಿಯಾಗಿ ಸ್ಥಾಪಿಸಲಾಯಿತು. ಈ ಸನ್ನದು ಕಂಪನಿಗೆ ವಿಶ್ವದ ಇತರ ಭಾಗಗಳಲ್ಲಿ, ವಿಶೇಷವಾಗಿ ಭಾರತ ಮತ್ತು ಪೂರ್ವ ಏಷ್ಯಾದಲ್ಲಿ ಬ್ರಿಟಿಷ್ ಪ್ರಾಬಲ್ಯವನ್ನು ಸ್ಥಾಪಿಸಲು ಅಸಾಮಾನ್ಯ ಅಧಿಕಾರ ಮತ್ತು ಸವಲತ್ತುಗಳನ್ನು ನೀಡಿತು.

ಆರಂಭದಲ್ಲಿ, ಕಂಪನಿಯು ಭಾರತೀಯ ಆಡಳಿತಗಾರರೊಂದಿಗೆ ವ್ಯಾಪಾರ ಸಂಬಂಧಗಳನ್ನು ಸ್ಥಾಪಿಸಿತು. ಆದರೆ ಕ್ರಮೇಣ ತನ್ನ ಬೆಳೆಯುತ್ತಿರುವ ಮಿಲಿಟರಿ ಮತ್ತು ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಪ್ರದೇಶಗಳನ್ನು ವಶಪಡಿಸಿಕೊಂಡಿತು. 1757ರ ಜೂನ್ 23 ರಂದು ನಡೆದ ಪ್ಲಾಸಿ ಕದನವು ಬಂಗಾಳದಲ್ಲಿ ಬ್ರಿಟಿಷ್ ಪ್ರಾಬಲ್ಯವನ್ನು ಸ್ಥಾಪಿಸಲು ಕಾರಣವಾಯಿತು ಮತ್ತು ನಂತರ ಇಡೀ ಭಾರತದ ಮೇಲೆ ಕಂಪನಿಯ ನಿಯಂತ್ರಣಕ್ಕೆ ಅಡಿಪಾಯ ಹಾಕಿತು.

ಇದನ್ನೂ ಓದಿ: Teacher Romance: ಸ್ಟಾಫ್‌ ರೂಮಿನಲ್ಲಿ ವಿದ್ಯಾರ್ಥಿನಿ ಜೊತೆ ಸರಸ ಸಲ್ಲಾಪ ಮಾಡಿದ ಶಿಕ್ಷಕ: ವಿಡಿಯೋ ವೈರಲ್