Home News ತನ್ನದೇ ಮಗುವನ್ನು ಮಹಡಿಯಿಂದ ಬಿಸಾಡಿ ಕೊಂದ ತಾಯಿಯ ಪ್ರಕರಣ : ದೋಷಾರೋಪಣೆ ಪಟ್ಟಿಯಲ್ಲಿ ಹೆತ್ತಮ್ಮಳ ಹೇಳಿಕೆ...

ತನ್ನದೇ ಮಗುವನ್ನು ಮಹಡಿಯಿಂದ ಬಿಸಾಡಿ ಕೊಂದ ತಾಯಿಯ ಪ್ರಕರಣ : ದೋಷಾರೋಪಣೆ ಪಟ್ಟಿಯಲ್ಲಿ ಹೆತ್ತಮ್ಮಳ ಹೇಳಿಕೆ ಸಲ್ಲಿಕೆ!!!

Hindu neighbor gifts plot of land

Hindu neighbour gifts land to Muslim journalist

ಲೈಫ್ ಎಂಜಾಯ್ ಮಾಡಲು ಹೆತ್ತ ತಾಯಿಯೇ ತನ್ನ ನಾಲ್ಕೈದು ವರ್ಷದ ಮಗುವನ್ನು ನಾಲ್ಕನೇ ಮಹಡಿ ಮೇಲಿಂದ ಬಿಸಾಕಿ ಕೊಂದಿರುವ ಘಟನೆಯೊಂದು ಆಗಸ್ಟ್ 4ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಸಂಪಂಗಿ ರಾಮನಗರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ.

ಮೃತ ಮಗು ಆಟಿಸಂ(AUTISM) ಎಂಬ ಖಾಯಿಲೆಯಿಂದ ಬಳಲುತ್ತಿತ್ತು. ಹೀಗಾಗಿ ಪ್ರತಿನಿತ್ಯ ಥೆರಫಿ ಮಾಡಿಸಲು ಮಗುವನ್ನು ತಾಯಿ ಸುಷ್ಮ ಕರೆದೊಯ್ಯುತ್ತಿದ್ದರು. ಮಗುವನ್ನು ನೋಡಿಕೊಳ್ಳುವುದರಲ್ಲೇ ಜೀವನ ಕಳೆದರೆ ಆಗುವುದಿಲ್ಲ ಎಂದು ನಿರ್ಧಾರ ಮಾಡಿದ ಆರೋಪಿ ಸುಷ್ಮಾ ಮಗುವನ್ನು ಕೊಲ್ಲಲು ಮುಂದಾಗಿದ್ದಾಳೆ.

ಮಗು ಬಿಸಾಡಲು ಹೊರಗಡೆ ಬಂದು ಎರಡು ಬಾರಿ ನೋಡಿದ್ದಾಳೆ. ಬಳಿಕ ಅಡ್ಡಲಾಗಿದ್ದ ಮರವನ್ನು ಗಮನಿಸಿ ಅಲ್ಲಿಂದ ದೂರ ಬಂದು ಕಲ್ಲಿನ ಗಟ್ಟಿ ನೆಲದ ಸ್ಥಳವನ್ನು ನೋಡಿ ಮಗುವನ್ನು ಬಿಸಾಡಿರುವ ಘಟನೆ ಸಿಸಿ ಟಿವಿಯಲ್ಲೂ ಸೆರೆಯಾಗಿದೆ.

ಪೊಲೀಸರ ಚಾರ್ಜ್ ಶೀಟ್‌ನಲ್ಲಿ ಈ ಕೊಲೆಗಡುಕಿ ತಾಯಿಯ ಕಳ್ಳಾಟದ ರಹಸ್ಯ ಬಯಲಾಗಿದ್ದೂ, ಸದ್ಯ ಸಂಪಂಗಿ ರಾಮನಗರ ಪೊಲೀಸರು ಪ್ರಕರಣ ಸಂಬಂಧ ತನಿಖೆ ನಡೆಸಿದ್ದಾರೆ. ಬರೋಬ್ಬರಿ 193 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಮತ್ತು ಮಗುವನ್ನು ಬಿಸಾಡಿದ್ದನ್ನ ಪ್ರತ್ಯಕ್ಷವಾಗಿ ಕಂಡಿದ್ದ ಮೂವರು ಐ ವಿಟೈಸ್‌ಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಕೇಸ್ ಸಂಬಂಧ ಬರೋಬ್ಬರಿ 34 ಸಾಕ್ಷಿಗಳ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಚಾರ್ಜ್ ಶೀಟ್ ನಲ್ಲಿ ಮಗುವಿನ ಖಾಯಿಲೆ ಬಗ್ಗೆಯೂ ಉಲ್ಲೇಖಿಸಲಾಗಿದೆ.

ಘಟನೆ ಬಳಿಕ ಸುಷ್ಮಾಳನ್ನು ಪೊಲೀಸರು ನಿಮಾನ್ಸ್ ಗೆ ಕರೆದೊಯ್ದು ತಪಾಸಣೆ ಮಾಡಿಸಿದ್ದು, ರಿಪೋರ್ಟ್‌ನಲ್ಲಿ ಸುಷ್ಮಾ ಮಾನಸಿಕವಾಗಿ ಕುಗ್ಗಿದ್ರು, ಖಿನ್ನತೆ ಎಂಬುದು ಸುಳ್ಳು. ಆಕೆ ಆರೋಗ್ಯವಾಗಿದ್ದಾಳೆ. ಸುಷ್ಮಾ ಫಿಟ್ ಅಂಡ್ ಟ್ರಯಲ್ ಎಂದು ನಿಮಾನ್ಸ್ ರಿಪೋರ್ಟ್ ನೀಡಿದೆ.

ಎಲ್ಲಾದ್ರು ಕಾರ್ಯಕ್ರಮಗಳಿಗೆ ಹೋದಾಗ ಮಗುವನ್ನು ನೋಡಿ ಸಂಬಂಧಿಕರು ನುಡಿಯುತ್ತಿದ್ದ ಕೊಂಕಿನ ಮಾತಿಂದ ಬೇಸತ್ತಿದ್ದ ಸುಷ್ಮಾ, ಸುಖ ಜೀವನದ ಆಸೆಯಲ್ಲಿ ಉದ್ದೇಶಪೂರ್ವಕವಾಗಿ ಮಗುವನ್ನು ಕೊಂದದ್ದು ತನಿಖೆಯಲ್ಲಿ ಸಾಬೀತಾಗಿದೆ.