Home News Telangana: ‘ಕರಿಮಣಿ ಮಾಲಿಕ ನೀನಲ್ಲ’ ಎಂದ ಪ್ರೇಯಸಿ – ಕೊಡಲಿಯಿಂದ ಕೊಚ್ಚಿ ಕೊಂದೇಬಿಟ್ಟ ಪ್ರಿಯತಮ !!

Telangana: ‘ಕರಿಮಣಿ ಮಾಲಿಕ ನೀನಲ್ಲ’ ಎಂದ ಪ್ರೇಯಸಿ – ಕೊಡಲಿಯಿಂದ ಕೊಚ್ಚಿ ಕೊಂದೇಬಿಟ್ಟ ಪ್ರಿಯತಮ !!

Hindu neighbor gifts plot of land

Hindu neighbour gifts land to Muslim journalist

Telangana: ಪ್ರೀತಿಸಿದ ಎಲ್ಲರಿಗೂ ತಮ್ಮ ಪ್ರೀತಿ ದಕ್ಕದು. ದಕ್ಕಿದರೂ ಎಲ್ಲೋ ಅಪರೂಪ. ಕೆಲವರು ಮೋಸ ಮಾಡಿ ಹೋಗುವುದೂ ಉಂಟು. ಹೀಗಾದಾಗ ಕೆಲವರು ಅವರು ಎಂದಿಗೂ ಚೆನ್ನಾಗಿರಲಿ, ಯಾರೊಂದಿಗಿದ್ದರೂ ಸುಂದರವಾಗಿರಲಿ ಎಂದು ಬಯಸುತ್ತಾರೆ. ಆದರೆ ಇನ್ನು ಕೆಲವರು ಸೇಡು ತೀರಿಸಿಕೊಳ್ಳಲು ವಿಕೃತಿ ಮೆರೆಯುತ್ತಾರೆ. ಅಂತೆಯೇ ಇಂತಹ ಒಂದು ಘಟನೆ ಇದೀಗ ಬೆಳಕಿಗೆ ಬಂದಿದೆ.

ಹೌದು, ತೆಲಂಗಾಣದಲ್ಲಿ(Telangana) ಇಂತಹ ಒಂದು ಮನಮಿಡಿಯುವ ಘಟನೆ ನಡೆದಿದೆ. ನಿರ್ಮಲ್‌ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ಜುಕಾಂಟಿ ಶ್ರೀಕಾಂತ್‌ ಎಂಬ ಯುವಕ ಅಲೇಖ್ಯಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಯೂ ಪ್ರೀತಿಸುತ್ತಿದ್ದಳು. ಸ್ವಲ್ಪ ದಿನ ಹೋಗಲಿ, ನಿಮ್ಮ ಮನೆಯಲ್ಲಿ ಬಂದು ಮದುವೆ ಕುರಿತು ಮಾತನಾಡುತ್ತೇನೆ ಎಂದು ಶ್ರೀಕಾಂತ್‌ ಹೇಳಿದ್ದ. ಆದರೆ, ಅಲೇಖ್ಯಾ ಮನೆಯಲ್ಲಿ ಇವರ ಪ್ರೀತಿ ಒಪ್ಪದೆ, ಮನೆಯಲ್ಲಿ ನೋಡಿದ ಹುಡುಗನನ್ನೇ ಮದುವೆಯಾಗಬೇಕು ಎಂದು ಆಕೆಯ ತಂದೆ-ತಾಯಿ ಆಗ್ರಹಿಸಿದ್ದರು. ಹೀಗಾಗಿ ಆಕೆ ಬೇರೆ ಮದುವೆಯಾಗಲು (Arranged Marriage) ಒಪ್ಪಿದಳು. ಇದನ್ನು ತಿಳಿದ ಬಾಯ್‌ಫ್ರೆಂಡ್ ಆಕೆಯನ್ನು ಅಡ್ಡಗಟ್ಟಿ ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ.

ಅಲೇಖ್ಯಾ ಹಾಗೂ ಆಕೆಯ ಸಹೋದರಿಯು ಟೇಲರಿಂಗ್‌ ಇನ್‌ಸ್ಟಿಟ್ಯೂಟ್‌ನಿಂದ ಮನೆಗೆ ತೆರಳುವಾಗ ಅಡ್ಡಗಟ್ಟಿದ ಶ್ರೀಕಾಂತ್‌, ಇಬ್ಬರ ಮೇಲೂ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ಕೊಡಲಿಯಿಂದ ಕೊಚ್ಚಿದ ಕಾರಣ ಅಲೇಖ್ಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲೇಖ್ಯಾ ಸಹೋದರಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹತ್ಯೆಗೈದ ಆರೋಪ ಶ್ರೀಕಾಂತ್‌ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.