Home News Uttar Pradesh: ಗೆಳತಿಯರ ಜೊತೆ ಸೇರಿ ಗಂಡನ ಖಾಸಗಿ ಅಂಗವನ್ನೇ ಕತ್ತರಿಸಿ ಹಾಕಿದ ಸುಂದರಿ ಪತ್ನಿ!

Uttar Pradesh: ಗೆಳತಿಯರ ಜೊತೆ ಸೇರಿ ಗಂಡನ ಖಾಸಗಿ ಅಂಗವನ್ನೇ ಕತ್ತರಿಸಿ ಹಾಕಿದ ಸುಂದರಿ ಪತ್ನಿ!

Hindu neighbor gifts plot of land

Hindu neighbour gifts land to Muslim journalist

Uttar Pradesh: ಪತಿ ಪತ್ನಿಯ ಜಗಳಗಳು ಉಂಡು ಮಲಗುವ ತನಕ ಅನ್ನೋದು ಕೇಳಿದ್ದೇವೆ. ಆದರೆ ಜಗಳವು ತಾರಕಕ್ಕೆ ಏರಿದಾಗ ಅಲ್ಲಿ ನಡೆಯುವುದು ಅನಾಹುತವೇ ಸರಿ. ಹೌದು, ಉತ್ತರ ಪ್ರದೇಶದ (Uttar Pradesh) ಗೋರಖ್‌ಪುರದಲ್ಲಿ ಮಹಿಳೆಯೊಬ್ಬರು ತನ್ನ ಇಬ್ಬರು ಸ್ನೇಹಿತೆಯರೊಂದಿಗೆ ಸೇರಿ ತನ್ನ ಪತಿಯ ಖಾಸಗಿ ಭಾಗಕ್ಕೆ ಕತ್ತರಿ ಹಾಕುವ ಮೂಲಕ ತನ್ನ ಕೋಪವನ್ನು ತೀರಿಸಿಕೊಂಡ ಆಘಾತಕಾರಿ ಘಟನೆ  ನಡೆದಿದೆ.

ಪತ್ನಿ ಸುಂದರವಾಗಿದ್ದಾಳೆ ಅನ್ನೋದು ಗಂಡನ ಪ್ರಾಬ್ಲಮ್. ಅಲ್ಲದೆ ಮನೆಯಿಂದ ಹೊರಗೆ ಕಾರಣ ಇಲ್ಲದೇ ಪತ್ನಿ ಬೇಕಾಬಿಟ್ಟಿ ಓಡಾಡುತ್ತಿದ್ದಲು. ಆಕೆಯನ್ನು ಎಲ್ಲಿಗೆ ಹೋಗಿದ್ದೆ ಎಂದು ಕೇಳಿದರೆ ಉತ್ತರ ನೀಡದೆ ಅವಳಿಗೆ ಇಷ್ಟ ಬಂದಂತೆ ಇರುತ್ತಿದ್ದಳು. ಈ ಕಾರಣದಿಂದಾಗಿ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು.

ಈ ಜಗಳದಿಂದ ರೋಸಿ ಹೋದ ಪತ್ನಿ ತನ್ನ ಸ್ನೇಹಿತೆಯರಿಗೆ ತಾನು ತುಂಬಾ ತೊಂದರೆಗೀಡಾಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದಾನೆ ಎಂದಿದ್ದಾಳೆ.. ಇದಾದ ಬಳಿಕ ಮೂವರು ಸೇರಿ ಪತಿಗೆ ಪಾಠ ಕಲಿಸಲು ಪ್ಲಾನ್ ಮಾಡಿದ್ದಾರೆ.

ಬಳಿಕ ತನ್ನ ಇಬ್ಬರು ಸ್ನೇಹಿತೆಯರೊಂದಿಗೆ ಸೇರಿ ಪತಿಗೆ ಮುಖ ತೋರಿಸಲಾಗದಂತಹ ಶಿಕ್ಷೆ ನೀಡಿದ್ದಾಳೆ. ಮೂವರು ಸೇರಿ ಮೊದಲು ಪತಿಯನ್ನು ಹಾಸಿಗೆಯ ಮೇಲೆ ತಳ್ಳಿ, ನಂತರ ವಿವಸ್ತ್ರ ಗೊಳಿಸಿ ನಂತರ ಅವನ ಗುಪ್ತಾಂಗವನ್ನು ಕತ್ತರಿಯಿಂದ ಕತ್ತರಿಸಿದ್ದಾರೆ. ಇದರಿಂದ ರಕ್ತದ ಮಡುವಿನಲ್ಲಿ ಬಿದ್ದ ಪತಿ ನೋವಿನಿಂದ ಕಿರುಚಲು ಆರಂಭಿಸಿದ್ದಾನೆ. ಕಿರುಚಾಟ ಕೇಳಿದ ಊರಿನವರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಸಂತ್ರಸ್ತನ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಮಹಿಳೆಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಠಾಣೆಯಲ್ಲಿ ಒತ್ತಾಯಿಸಿದ್ದಾರೆ.