Home News Mangaluru : ತಾಯಿ – ಮಗಳ ನಡುವೆ ಭೀಕರ ಹೊಡೆದಾಟ!! ವಿಡಿಯೋ ವೈರಲ್

Mangaluru : ತಾಯಿ – ಮಗಳ ನಡುವೆ ಭೀಕರ ಹೊಡೆದಾಟ!! ವಿಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

Mangaluru: ಹೊರವಲಯದ ಮೂಡುಶೆಡ್ಡೆ ಗ್ರಾ.ಪಂ. ಆವರಣದಲ್ಲಿ ಮಗಳು ತನ್ನ ತಾಯಿಗೆ ಅಮಾನವೀಯವಾಗಿ ಹಲ್ಲೆ ನಡೆಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರು ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮೂಡುಶೆಡ್ಡೆ ಗ್ರಾಮ ಪಂಚಾಯತ್ ಆವರಣದಲ್ಲಿ ತಾಯಿ-ಮಗಳ ಸಂಬಂಧವನ್ನೇ ನಾಚಿಸುವಂತಹ ಅಮಾನವೀಯ ಘಟನೆ ನಡೆದಿದೆ. ಉತ್ತರ ಕರ್ನಾಟಕ ಮೂಲದ ಮಗಳೊಬ್ಬಳು ವಯಸ್ಸಾದ ತನ್ನ ತಾಯಿಗೆ ಸಾರ್ವಜನಿಕವಾಗಿ, ಕುತ್ತಿಗೆ ಹಿಡಿದು ತಳ್ಳಿ ಹಾಕಿದ ಬಳಿಕ, ಚಪ್ಪಲಿಯಿಂದ ಹಲ್ಲೆ ಮಾಡಿರುವ ದಾರುಣ ಘಟನೆ ವರದಿಯಾಗಿದೆ.

ಮೂಡುಶೆಡ್ಡೆಯ ಶಿವನಗರ ಎಂಬಲ್ಲಿ ತಾಯಿ ಮತ್ತು ಮಗಳು ವಾಸಿಸುತ್ತಿದ್ದು, ಇವರ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಈ ಬಗ್ಗೆ ತಾಯಿ ಕಾವೂರು ಠಾಣೆಗೆ ತೆರಳಿ ದೂರುತ್ತಿದ್ದರು ಎಂದು ತಿಳಿದು ಬಂದಿದೆ. ಪೊಲೀಸರು ತಾಯಿ ಮತ್ತು ಮಗಳಿಗೆ ಬುದ್ಧಿ ಹೇಳಿ ಕಳುಹಿಸಿಕೊಡುತ್ತಿದ್ದರು ಎನ್ನಲಾಗಿದೆ.

ಘಟನೆಗೆ ಕಾರಣ ಮತ್ತು ನಡೆದ ರೀತಿ

ಈ ತಾಯಿ ಮತ್ತು ಮಗಳು ಪಂಚಾಯತ್‌ಗೆ ತಮ್ಮ ಆಸ್ತಿ ತೆರಿಗೆ (ಟ್ಯಾಕ್ಸ್) ಪಾವತಿಸಲು ಬಂದಿದ್ದರು. ಈ ಸಂದರ್ಭದಲ್ಲಿ ತಾಯಿಯು ಮಗಳಿಗೆ ಯಾವುದೋ ವಿಷಯದ ಕುರಿತು ಹೇಳಿದ್ದಾಳೆ ಎನ್ನಲಾಗಿದೆ. ಇದರಿಂದ ತೀವ್ರ ಕೋಪಗೊಂಡ ಮಗಳು, ತಕ್ಷಣವೇ ತಾಯಿಯ ಕುತ್ತಿಗೆ ಹಿಡಿದು ತಳ್ಳಿದ್ದಾಳೆ. ತಳ್ಳಿದ ರಭಸಕ್ಕೆ ಆ ವಯಸ್ಸಾದ ತಾಯಿ ನೆಲದ ಮೇಲೆ ಬಿದ್ದು ನೋವಿನಿಂದ ಕೂಗಿಕೊಂಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಆ ಮಗಳು, ಚಪ್ಪಲಿಯನ್ನು ತೆಗೆದುಕೊಂಡು ಕೆಳಗೆ ಬಿದ್ದಿದ್ದ ತಾಯಿಯ ಕೆನ್ನೆಗೆ ಮನಬಂದಂತೆ ಹಲ್ಲೆ ಮಾಡಿದ್ದಾಳೆ.

ವೀಡಿಯೋದಲ್ಲಿ ಗ್ರಾ.ಪಂ.ನ ಕೆಲವು ಜನಪ್ರತಿನಿಧಿಗಳು, ಸಿಬ್ಬಂದಿಗಳು ಕಂಡು ಬರುತ್ತಿದೆ. ಇವರು ವೀಡಿಯೋ ಮಾಡಿದರೇ ವಿನಃ ತಾಯಿಗೆ ಹಲ್ಲೆ ನಡೆಸದಂತೆ ಮಗಳನ್ನು ತಡೆಯಲಿಲ್ಲ ಮತ್ತು ಪೊಲೀಸರಿಗೂ ದೂರು ನೀಡಲಿಲ್ಲ ಎಂದು ಜನರು ಆರೋಪಿಸಿದ್ದಾರೆ. ಪೊಲೀಸರು ತಾಯಿ ಮತ್ತು ಮಗಳನ್ನು ಕರೆದು ವಿಚಾರಣೆ ನಡೆಸಬೇಕು ಮತ್ತು ಸಾರ್ವಜನಿಕವಾಗಿ ತಾಯಿಗೆ ಹಲ್ಲೆ ನಡೆಸಿದ ಮಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕಿತ್ತು ಎಂಬ ಮಾತು ಕೇಳಿ ಬಂದಿದೆ.