Home latest ದೇವಸ್ಥಾನದೊಳಗೆ “ಮಾಂಸ” ದ ತುಂಡು ಎಸೆದ ದುಷ್ಕರ್ಮಿಗಳು, ಪ್ರತೀಕಾರವಾಗಿ ಆಕ್ರೋಶಗೊಂಡ ಜನ ಮಾಡಿದ್ದೇನು ಗೊತ್ತೇ?

ದೇವಸ್ಥಾನದೊಳಗೆ “ಮಾಂಸ” ದ ತುಂಡು ಎಸೆದ ದುಷ್ಕರ್ಮಿಗಳು, ಪ್ರತೀಕಾರವಾಗಿ ಆಕ್ರೋಶಗೊಂಡ ಜನ ಮಾಡಿದ್ದೇನು ಗೊತ್ತೇ?

Hindu neighbor gifts plot of land

Hindu neighbour gifts land to Muslim journalist

ದೇವಸ್ಥಾನದ ಕಂಪೌಂಡ್ ನಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಮಾಂಸದ ತುಂಡನ್ನು ಎಸೆದಿದ್ದಾರೆ. ಇದರ ಪರಿಣಾಮವಾಗಿ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿರುವ ಮಾಂಸದ ಅಂಗಡಿಗೆ ಕೋಪಗೊಂಡ ಉದ್ರಿಕ್ತ ಜನರು ಬೆಂಕಿ ಹಚ್ಚಿದ್ದಾರೆ.

ಈ ಸೇಡಿನ, ಮುಯ್ಯಿಗೆ ಮುಯ್ಯಿ ತೀರಿಸೋ ಘಟನೆ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ. ಯಾರೋ ದೇವಸ್ಥಾನದ ಕಾಂಪೌಂಡ್‌ನಲ್ಲಿ ಮಾಂಸದ ತುಂಡುಗಳನ್ನು ಎಸೆದಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಗುಂಪೊಂದು ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿರುವ ಮೂರು ಮಾಂಸದ ಅಂಗಡಿಗಳಿಗೆ ಬೆಂಕಿ ಹಚ್ಚಿ ಪ್ರತಿಕಾರ ತೀರಿಸಿಕೊಂಡಿರುವ ಘಟನೆ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ತಾಲ್ಟಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ರಸೂಲಾಬಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೇವಸ್ಥಾನದ ಅರ್ಚಕ ಜಗದೀಶ್ ಜಾತವ್ ಅವರು ಮುಂಜಾನೆ 4 ಗಂಟೆ ಸುಮಾರಿಗೆ ದೇವಸ್ಥಾನದೊಳಗೆ ಮಾಂಸದ ತುಂಡುಗಳನ್ನು ಕಂಡು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಪೊಲೀಸರು ಕೂಡಲೇ ಬಂದಿದ್ದಾರೆ.

ಸ್ಥಳೀಯ ಆಡಳಿತದ ಅಧಿಕಾರಿಗಳು ಮತ್ತು ಪೊಲೀಸರು
ಸ್ಥಳಕ್ಕೆ ಧಾವಿಸಿ ದೇವಾಲಯದ ಆವರಣದಿಂದ ಮಾಂಸದ ತುಂಡುಗಳನ್ನು ತೆಗೆದು ಕಾಂಪೌಂಡ್ ಅನ್ನು
ಸ್ವಚ್ಛಗೊಳಿಸಿದರೂ, ಸ್ಥಳೀಯ ಹಿಂದೂ ಸಂಘಟನೆಗಳ ಸದಸ್ಯರು ಈ ಘಟನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನಾಕಾರರಿಗೆ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದಾಗ ಅವರು ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ಕೂಡಾ ಆರಂಭ ಮಾಡಿದ್ದರು.

ಆದರೆ, ಮಧ್ಯಾಹ್ನದ ವೇಳೆಗೆ ಪ್ರತಿಭಟನಾಕಾರರ ಗುಂಪು ಮೂರು ಮಾಂಸದ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಹೀಗಾಗಿ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹಿರಿಯ ಅಧಿಕಾರಿಗಳು ಹೆಚ್ಚುವರಿ ಪೊಲೀಸರೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ.

ಪ್ರದೇಶದಲ್ಲಿ ಪೊಲೀಸ್ ತಂಡವನ್ನು ನಿಯೋಜಿಸಲಾಗಿದ್ದು, ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮಿಶ್ರಾ ಹೇಳಿದ್ದಾರೆ.