Home News ದೇವಸ್ಥಾನದಿಂದ ಕದ್ದ ಕಾಣಿಕೆ ಹುಂಡಿಯನ್ನು ವಾಪಸ್ ತಂದಿಟ್ಟ ಕಳ್ಳರು !! | ಈ ಕೆಲಸ ದೇವರ...

ದೇವಸ್ಥಾನದಿಂದ ಕದ್ದ ಕಾಣಿಕೆ ಹುಂಡಿಯನ್ನು ವಾಪಸ್ ತಂದಿಟ್ಟ ಕಳ್ಳರು !! | ಈ ಕೆಲಸ ದೇವರ ಭಯಕ್ಕೋ?? ಪೊಲೀಸರ ಭಯಕ್ಕೋ??

Hindu neighbor gifts plot of land

Hindu neighbour gifts land to Muslim journalist

ದೇವಾಲಯಗಳಿಂದ ಹುಂಡಿ ಕಳ್ಳತವಾಗುವಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಹಾಗೆಯೇ ಇಲ್ಲೊಂದು ಕಡೆ ಕಳ್ಳರು ಕದ್ದ ಹುಂಡಿಯನ್ನು ವಾಪಸ್ ತಂದಿಟ್ಟಿರುವ ವಿಚಿತ್ರ ಘಟನೆ ತುಮಕೂರಿನಲ್ಲಿ ನಡೆದಿದೆ.

ಕುಣಿಗಲ್ ತಾಲೂಕು ರಂಗಸ್ವಾಮಿ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿದ್ದ ಎರಡು ಹುಂಡಿಗಳನ್ನು ಕಳ್ಳರು ಕದ್ದಿದ್ದರು. ಆದರೆ ಕದ್ದಿದ್ದ ಹುಂಡಿಗಳನ್ನು ದೇವರು ಮತ್ತು ಪೊಲೀಸರ ಭಯಕ್ಕೆ ಕಳ್ಳರು ವಾಪಸ್ ತಂದಿಟ್ಟಿದ್ದಾರೆ.

ರಂಗಸ್ವಾಮಿ ಬೆಟ್ಟದ ಮೇಲಿರುವ ರಂಗನಾಥ ಸ್ವಾಮಿ ದೇವಾಲಯಕ್ಕೆ ಸೇರಿದ್ದ 2 ಹುಂಡಿಗಳನ್ನು ಕಳ್ಳರು ಶನಿವಾರ ರಾತ್ರಿ ಕಳವು ಮಾಡಿದ್ದರು. ಸುಮಾರು 2 ಲಕ್ಷ ರೂ. ಹಣವಿದ್ದ ಹುಂಡಿ ಕಳುವಾಗಿರುವ ಬಗ್ಗೆ ದೇವಾಲಯದ ಧರ್ಮದರ್ಶಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಿ ದುಷ್ಕರ್ಮಿಗಳ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸಿದ್ದರು. ಆದರೆ ಸೋಮವಾರ ಕಳುವಾಗಿದ್ದ ಹುಂಡಿಗಳು ದೇವಾಲಯದ ಬಳಿ ಪ್ರತ್ಯಕ್ಷವಾಗಿದೆ.

ಕಳ್ಳರು ಹುಂಡಿಯನ್ನು ಕದ್ದುಕೊಂಡು ಹೋಗಿದ್ದರೂ ಅದರ ಬೀಗ ತೆಗೆಯದೇ ಯಥಾಸ್ಥಿತಿಯಲ್ಲಿ ತಂದಿಟ್ಟು ಪರಾರಿಯಾಗಿದ್ದಾರೆ. ಇದೀಗ ಪೊಲೀಸರು ಹುಂಡಿಗಳನ್ನು ವಶಕ್ಕೆ ಪಡೆದಿದ್ದಾರೆ.