Home News ದೇವಳ ಸ್ವಾಯತ್ತ ಮಾಡಿದ್ರೆ ಕಾಂಗ್ರೇಸ್ ಗೆ ಯಾಕೆ ಭಯನೋ ?! | ವ್ಯಂಗ್ಯವಾಗಿ ಕೇಳಿದ ಸಚಿವ...

ದೇವಳ ಸ್ವಾಯತ್ತ ಮಾಡಿದ್ರೆ ಕಾಂಗ್ರೇಸ್ ಗೆ ಯಾಕೆ ಭಯನೋ ?! | ವ್ಯಂಗ್ಯವಾಗಿ ಕೇಳಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ

Hindu neighbor gifts plot of land

Hindu neighbour gifts land to Muslim journalist

ಬಿಜೆಪಿಯ ಹಿಂದುತ್ವದ ಸ್ಪಿನ್ ದಾಳಿಗೆ ಕಾಂಗ್ರೆಸ್ ಕಕ್ಕಾ ಬಿಕ್ಕಿಯಾಗಿದೆ. ಒಂದರ ಮೇಲೊಂದು ದಾಳವನ್ನು ಜರುಗಿಸುತ್ತಿರುವ ಬಿಜೆಪಿಯ ಮತ ಬ್ಯಾಂಕ್ ಭದ್ರ ಪಡಿಸುತ್ತಿರುವ ತಂತ್ರಕ್ಕೆ ಏನೂ ಮಾಡಲು ತೋಚದೆ ಕೂತಿದೆ ಕಾಂಗ್ರೆಸ್. ಕೇವಲ ಹೇಳಿಕೆ ನೀಡಿ ಇರೋ ಬರೋ ಹಿಂದೂಗಳ ವಿರೋಧ ಕಟ್ಟಿಕೊಳ್ಳುತ್ತಿದೆ 100 ವರ್ಷ ಇತಿಹಾಸ ಇರುವ ಪಕ್ಷ.

ಈ ಸನ್ನಿವೇಶದಲ್ಲಿ, ಕಾಂಗ್ರೆಸ್ ಹೇಳಿಕೆಗೆ ಬಿಜೆಪಿ ನಾಯಕರುಗಳು ಸಮರ್ಥ ಉತ್ತರ ನೀಡಿದ್ದಾರೆ. ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾದಾಗ, ಆರ್ಥಿಕ ಅಪರಾಧಗಳಾದಾಗ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳುತ್ತದೆ. ಆದರೆ ಕಾಂಗ್ರೆಸ್‌ನವರು ದೇವಾಲಯದ ಸ್ವತಂತ್ರತೆಗೆ ಯಾಕೆ ಭಯಗೊಳ್ಳುತ್ತಿದ್ದಾರೋ ಗೊತ್ತಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು..

ಇಂದಿಗೂ ಅದೆಷ್ಟೋ ಹಿಂದೂ ದೇವಾಲಯಗಳಲ್ಲಿ ಎಣ್ಣೆ – ಬತ್ತಿಗೂ ಹಣದ ಸಂಗ್ರಹಣೆ ಇಲ್ಲ. ದೇವಾಲಯಗಳನ್ನು ಭಕ್ತರ ಕೈಗೆ ಕೊಡುವುದರಲ್ಲಿ ಏನೂ ತಪ್ಪಿಲ್ಲ. ದೇವಸ್ಥಾನಗಳನ್ನು ಸ್ವತಂತ್ರಗೊಳಿಸಿದರೆ ಒಂದಿಷ್ಟು ಅಭಿವೃದ್ಧಿಗೊಳ್ಳುತ್ತದೆ ಎಂದರು ಸಚಿವ ಕೋಟಾ.

ಅವರು ಕೊಡಗಿನ ಪಾಲಿಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ಹಿಂದೂ ದೇವಾಲಯಗಳ ಆಸ್ತಿಯನ್ನು ಖಾಸಗೀಕರಣ ಮಾಡುವ ಉದ್ದೇಶದಿಂದ, ಸರ್ಕಾರದ ಹಿಡಿತದಿಂದ ಸ್ವಾತಂತ್ರಗೊಳಿಸಲಾಗುತ್ತಿದೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿದರು. ಹಿಂದೂ ದೇವಾಲಯಗಳನ್ನು ಸ್ವಾತಂತ್ರಗೊಳಿಸಿ ಎಂದು ಸಿದ್ದರಾಮಯ್ಯನವರು ಕೇಳಬೇಕಿತ್ತು. ಆದರೆ ಅವರು ಯಾಕೆ ವಿರೋಧ ಮಾಡುತ್ತಿದ್ದಾರೋ ತಿಳಿಯುತ್ತಿಲ್ಲ. ಮಸೀದಿ ಹಾಗೂ ಚರ್ಚ್ಗಳು ಆಯಾ ಸಮುದಾಯಗಳ ಆಡಳಿತದಲ್ಲಿದೆ. ಆದರೆ ಹಿಂದೂ ದೇವಾಲಯಗಳು ಸರ್ಕಾರದ ಆಡಳಿತದಲ್ಲಿದೆ ಎಂದರು.