Home News WTC Points: ಹೀನಾಯ ಸೋಲು ಕಂಡ ಟೀಂ ಇಂಡಿಯಾ! ಸೋಲಿನ ಬೆನ್ನಲ್ಲೇ ನಂ.1 ಪಟ್ಟ ಕಳೆದುಕೊಂಡ...

WTC Points: ಹೀನಾಯ ಸೋಲು ಕಂಡ ಟೀಂ ಇಂಡಿಯಾ! ಸೋಲಿನ ಬೆನ್ನಲ್ಲೇ ನಂ.1 ಪಟ್ಟ ಕಳೆದುಕೊಂಡ ಭಾರತ! ಅಗ್ರಸ್ಥಾನ ಯಾರಿಗೆ?

Hindu neighbor gifts plot of land

Hindu neighbour gifts land to Muslim journalist

WTC Points: ನ್ಯೂಜಿಲೆಂಡ್‌ (New Zealand) ವಿರುದ್ಧ ನಡೆದ ಟೆಸ್ಟ್‌ ಸರಣಿಯಲ್ಲಿ ಹೀನಾಯ ಸೋಲು ಕಂಡ ಟೀಂ ಇಂಡಿಯಾ ಇದೀಗ ತನ್ನ ಪಾಲಿಗಿದ್ದ ನಂ.1 ಪಟ್ಟ ಕಳೆದುಕೊಂಡಿದೆ.

ಹೌದು, ಹೀನಾಯ ಸೋಲು ಕಂಡ ಬೆನ್ನಲ್ಲೇ ಟೀಂ ಇಂಡಿಯಾ (Team India) ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ (WTC Points Table) ನಂ.1 ಸ್ಥಾನ ಕಳೆದುಕೊಂಡಿದೆ.

ಈಗಾಗಲೇ 12 ಪಂದ್ಯಗಳಲ್ಲಿ 62.50 ಪಿಸಿಟಿ (Percentage Of Points Earned) ಪಡೆದಿರುವ ಆಸ್ಟ್ರೇಲಿಯಾ ತಂಡ ಮತ್ತೆ ಅಗ್ರಸ್ಥಾನಕ್ಕೆ ಏರಿದ್ದು, 14 ಪಂದ್ಯಗಳಲ್ಲಿ 58.33 ಪಿಸಿಟಿ ಪಡೆದಿರುವ ಟೀಂ ಇಂಡಿಯಾ 2ನೇ ಸ್ಥಾನಕ್ಕೆ ಕುಸಿದಿದೆ. ಇನ್ನೂ 3, 4 ಮತ್ತು 5ನೇ ಸ್ಥಾನಗಳಲ್ಲಿ ಕ್ರಮವಾಗಿ ಶ್ರೀಲಂಕಾ, ನ್ಯೂಜಿಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದುಕೊಂಡಿವೆ.

WTC ಟಾಪ್‌-5 ತಂಡಗಳು:

ಆಸ್ಟ್ರೇಲಿಯಾ – 12 – 62.50 ಪಿಸಿಟಿ

ಭಾರತ – 14 – 58.33 ಪಿಸಿಟಿ

ಶ್ರೀಲಂಕಾ – 9 – 55.56 ಪಿಸಿಟಿ

ನ್ಯೂಜಿಲೆಂಡ್‌ – 11 – 54.55 ಪಿಸಿಟಿ

ದಕ್ಷಿಣ ಆಫ್ರಿಕಾ – 8 – 54.17 ಪಿಸಿಟಿ

ನ್ಯೂಜಿಲೆಂಡ್‌ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಈ ಸೋಲಿನೊಂದಿಗೆ 24 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋತ ಅಪಖ್ಯಾತಿಯನ್ನು ಹೆಗಲಿಗೇರಿಸಿಕೊಂಡಿದೆ.