Home News 17 ವರ್ಷದ ಅಪ್ರಾಪ್ತ ಬಾಲಕನನ್ನು ತನ್ನ ಪ್ರೀತಿಯ ಬಲೆಗೆ ಬೀಳಿಸಿ ಓಡಿ ಹೋಗಿ ಮದುವೆಯಾದ ಮಹಿಳಾ...

17 ವರ್ಷದ ಅಪ್ರಾಪ್ತ ಬಾಲಕನನ್ನು ತನ್ನ ಪ್ರೀತಿಯ ಬಲೆಗೆ ಬೀಳಿಸಿ ಓಡಿ ಹೋಗಿ ಮದುವೆಯಾದ ಮಹಿಳಾ ಶಿಕ್ಷಕಿ !!

Hindu neighbor gifts plot of land

Hindu neighbour gifts land to Muslim journalist

ಪ್ರೀತಿ ಕುರುಡು ಅಂತಾರೆ. ಪ್ರೀತಿ ಎದುರು ಜಾತಿ, ವಯಸ್ಸು, ಅಂತಸ್ತು ಎಲ್ಲಾ ಲೆಕ್ಕಕ್ಕೆ ಬರುವುದಿಲ್ಲ ಎಂದು ಕೂಡ ಹೇಳುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ವಯಸ್ಸು ಬರೀ ಸಂಖ್ಯೆಯಾಗಿದೆ. ಇದಕ್ಕೆ ನಿದರ್ಶನದಂತೆ ಅನೇಕರು ವಯಸ್ಸಿನ ಅಂತರದಲ್ಲಿ ಮದುವೆಯಾಗಿ ಸುಖವಾಗಿರುವುದನ್ನು ನೋಡಿದ್ದೇವೆ.

ಆದರೆ, ಇಲ್ಲಿ ಯಾವ ಮಟ್ಟಿಗೆ ಪ್ರೀತಿ ಕುರುಡಾಗಿದೆ ಎಂದರೆ ಮಹಿಳಾ ಶಿಕ್ಷಕಿಯೊಬ್ಬರು ತಾವು ಕಲಿಸುತ್ತಿದ್ದ 17 ವರ್ಷದ ಅಪ್ರಾಪ್ತ ಬಾಲಕನನ್ನೇ ಮದುವೆಯಾಗಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಅದಲ್ಲದೆ, ಅಪ್ರಾಪ್ತನ ಮದುವೆಯಾದಕ್ಕಾಗಿ ಶಿಕ್ಷಕಿ ವಿರುದ್ಧ ಪೊಲೀಸರು ಇದೀಗೆ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ಕೂಡ ದಾಖಲಿಸಿದ್ದಾರೆ.

ತಮಿಳುನಾಡಿನ ನಲ್ಲೂರು ಬಳಿಕ ಅರಿಯಲೂರಿನಲ್ಲಿ ಟ್ರೈನಿ ಶಿಕ್ಷಕಿಯೊಬ್ಬರು 10ನೇ ತರಗತಿ ವಿದ್ಯಾರ್ಥಿಯನ್ನು ವಿವಾಹವಾಗಿದ್ದಾರೆ. ತಾವು ಪಾಠ ಹೇಳಿಕೊಡುತ್ತಿದ್ದ ವಿದ್ಯಾರ್ಥಿಯ ಮೋಹದ ಬಲೆಗೆ ಶಿಕ್ಷಕಿ ಬಿದ್ದಿದ್ದಾರೆ. ಅವರ ಪ್ರೀತಿಗೆ ಬಿದ್ದ ವಿದ್ಯಾರ್ಥಿ ಕೂಡ ಅವರು ಮಾತಿಗೆ ಮರುಳಾಗಿ ಪ್ರೇಮ ಪಾಶಕ್ಕೆ ಗುರಿಯಾಗಿದ್ದಾನೆ. ಇಬ್ಬರು ಪ್ರೀತಿಯಲ್ಲಿ ತೇಲಾಡಿದ ಬಳಿಕ ಮದುವೆಗೆ ಮುಂದಾಗಿದ್ದಾರೆ. ಆದರೆ, ಈ ವಿಷಯ ತಿಳಿದು ಮನೆಯವರು ವಿರೋಧಿಸಿದ್ದಾರೆ. ಕಡೆಗೆ ಏನು ಮಾಡಲು ತೋಚದ ಶಿಕ್ಷಕಿ ಅಪ್ರಾಪ್ತ ಬಾಲಕನೊಂದಿಗೆ ಗ್ರಾಮ ಬಿಟ್ಟು ಓಡಿ ಹೋಗಿ ಕಳೆದ ಅಕ್ಟೋಬರ್​ನಲ್ಲಿ ಮದುವೆಯಾಗಿದ್ದಾರೆ.

ಆತ್ಮಹತ್ಯೆಗೆ ಮುಂದಾಗಿದ್ದ ಜೋಡಿ

ಈ ರೀತಿ ಮದುವೆಯಾದ ಬಳಿಕ ಈ ವಿಷಯ ತಿಳಿದು ಇಬ್ಬರು ಮನೆಯ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಬಳಿಕ ದಿಕ್ಕು ತೋಚದ ಶಿಕ್ಷಕಿ ಮತ್ತು ವಿದ್ಯಾರ್ಥಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಬಳಿಕ ನೆರೆಹೊರೆಯ ಸಮಯ ಪ್ರಜ್ಞೆಯಿಂದ ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬದುಕುಳಿದಿದ್ದಾರೆ.

ಇದಾದ ಬಳಿಕ ವಿದ್ಯಾರ್ಥಿ ಪೋಷಕರು ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಗ ನಾಪತ್ತೆಯಾಗಿದ್ದು, ಅಪ್ರಾಪ್ತನನ್ನು ಮದುವೆಯಾಗಿರುವ ಸಂಬಂಧ ತಿಳಿಸಿದ್ದಾರೆ. ಈ ವಿಷಯ ತಿಳಿದ ಪೊಲೀಸರು ಕಳೆದೆರಡು ದಿನಗಳ ಹಿಂದೆ ಶಿಕ್ಷಕಿಯನ್ನು ಪೋಕ್ಸೋ ಕಾಯ್ದೆ ಅಡಿ ಬಂಧಿಸಿದ್ದಾರೆ.