Home News Tata Sierra: ಅತೀ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಟಾಟಾ ಸಿಯೆರಾ – ಇಡೀ...

Tata Sierra: ಅತೀ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಟಾಟಾ ಸಿಯೆರಾ – ಇಡೀ ಅಟೋಮೊಬೈಲ್ ಮಾರ್ಕೆಟ್ ಶೇಕ್…

Hindu neighbor gifts plot of land

Hindu neighbour gifts land to Muslim journalist

Tata Sierra: ಟಾಟಾ ಕಂಪನಿ ಇದೀಗ(TATA Motors) ತನ್ನ ಹೊಸ ಎಸ್‌ಯುವಿ ಸಿಯೆರಾವನ್ನು ಅನಾವರಣಗೊಳಿಸಿ ಇಡೀ ಆಟೋಮೊಬೈಲ್ ಕ್ಷೇತ್ರವನ್ನು ಶೇಕ್ ಮಾಡಿದೆ.

ಹೌದು, ಗ್ರಾಹಕರು ಈ ಎಸ್​ಯುವಿ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಟಾಟಾ ಸಿಯೆರಾ 90 ರ ದಶಕದ ಅತ್ಯಂತ ಜನಪ್ರಿಯ ವಾಹನಗಳಲ್ಲಿ ಒಂದಾಗಿದೆ. ನಂತರ ಇದನ್ನು ಸ್ಥಗಿತಗೊಳಿಸಲಾಯಿತು. ದೀರ್ಘ ಕಾಯುವಿಕೆಯ ನಂತರ, ಟಾಟಾ ಮೋಟಾರ್ಸ್ ((TATA Car)) ಅಂತಿಮವಾಗಿ ತನ್ನ ಐಕಾನಿಕ್ SUV ಸಿಯೆರಾವನ್ನು ಭಾರತೀಯ ರಸ್ತೆಗಳಿಗೆ ಮರಳಿ ತಂದಿದೆ. ಹೊಸ ತಲೆಮಾರಿನ ಟಾಟಾ ಸಿಯೆರಾವನ್ನು ಕೇವಲ 11.49 ಲಕ್ಷದ ಆರಂಭಿಕ ಎಕ್ಸ್-ಶೋರೂಂ ಬೆಲೆಯೊಂದಿಗೆ ಬಿಡುಗಡೆ ಮಾಡಲಾಗಿದೆ.

ಎಂಜಿನ್ ಆಯ್ಕೆ :
ಹೊಸ ಸಿಯೆರಾವನ್ನು ಮೂರು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುವುದು: ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ (EV).
ಪೆಟ್ರೋಲ್ – ಇದು ಟಾಟಾದ ಹೊಸ 1.5L ಟರ್ಬೊ GDI ಎಂಜಿನ್‌ನೊಂದಿಗೆ ಬರಬಹುದು, ಇದು 170 PS ಪವರ್ ಮತ್ತು 280 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಡೀಸೆಲ್ – ಇದು ಕರ್ವ್‌ನ 1.5L ಯೂನಿಟ್ ಅಥವಾ ಹ್ಯಾರಿಯರ್‌ನ 2.0L ಸ್ಟೆಲ್ಲಾಂಟಿಸ್ ಮೂಲದ ಎಂಜಿನ್ (ಸ್ವಲ್ಪ ಕಡಿಮೆ ಶಕ್ತಿಯೊಂದಿಗೆ) ಪಡೆಯಬಹುದು.
EV – ಮೂಲಗಳ ಪ್ರಕಾರ ICE (ಪೆಟ್ರೋಲ್/ಡೀಸೆಲ್) ಮಾದರಿಯನ್ನು ಮೊದಲು ಬಿಡುಗಡೆ ಮಾಡಲಾಗುವುದು, ನಂತರ ಸಿಯೆರಾ EV ಬಿಡುಗಡೆಯಾಗಲಿದೆ. ಸಿಯೆರಾ EV ಹ್ಯಾರಿಯರ್ EV ಯಂತೆಯೇ ಬ್ಯಾಟರಿ ಮತ್ತು ಡ್ಯುಯಲ್-ಮೋಟಾರ್ ಆಯ್ಕೆಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ, ಇದು ಆಫ್-ರೋಡಿಂಗ್‌ಗೆ ಹೆಚ್ಚು ಸೂಕ್ತವಾಗಿದೆ.

ಟಾಟಾ ಸಿಯೆರಾದ ಪ್ರಮುಖ ಫೀಚರ್ಸ್:
ಸ್ನಾಪ್‌ಡ್ರಾಗನ್ ಚಿಪ್ ಮತ್ತು 5G ಬೆಂಬಲದೊಂದಿಗೆ iRA ಕನೆಕ್ಟೆಡ್ ಟೆಕ್
OTA ಅಪ್ಡೇಟ್ ಸೌಲಭ್ಯ
12.3-ಇಂಚಿನ ಪ್ರಯಾಣಿಕರ ಡಿಸ್​ಪ್ಲೇ
10.5-ಇಂಚಿನ ಕೇಂದ್ರ ಟಚ್‌ಸ್ಕ್ರೀನ್
ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
12-ಸ್ಪೀಕರ್ JBL ಸೌಂಡ್ ಸಿಸ್ಟಮ್ ಸೌಂಡ್ ಬಾರ್, ಡಾಲ್ಬಿ ಅಟ್ಮಾಸ್ ಮತ್ತು 18 ಸೌಂಡ್ ಮೋಡ್‌ಗಳೊಂದಿಗೆ
ಆರ್ಕೇಡ್ ಅಪ್ಲಿಕೇಶನ್ ಬೆಂಬಲ
ಹೈಪರ್ ಹೆಡ್-ಅಪ್ ಡಿಸ್​ಪ್ಲೇ
ಡುಯೆಲ್ ಟೋನ್ ಕ್ಲೈಮೆಟ್ ಕಂಟ್ರೋಲ್
ಪನೋರಮಿಕ್ ಸನ್‌ರೂಫ್
ಮೂಡ್ ಲೈಟಿಂಗ್
ವೈರ್‌ಲೆಸ್ ಚಾರ್ಜಿಂಗ್
ಹಿಂಭಾಗದ ಸನ್‌ಶೇಡ್‌ಗಳು
360-ಡಿಗ್ರಿ ಕ್ಯಾಮೆರಾ