Home News Tata Nano: ರತನ್ ಟಾಟಾ ಅವರ ಕನಸಿನ ಕೇವಲ 1 ಲಕ್ಷದ ಕಾರು ಯಾಕೆ ಕಣ್ಮರೆ...

Tata Nano: ರತನ್ ಟಾಟಾ ಅವರ ಕನಸಿನ ಕೇವಲ 1 ಲಕ್ಷದ ಕಾರು ಯಾಕೆ ಕಣ್ಮರೆ ಆಯ್ತು ಗೊತ್ತಾ ?

Tata Nano

Hindu neighbor gifts plot of land

Hindu neighbour gifts land to Muslim journalist

Tata nano: ದೇಶದ ಖ್ಯಾತ, ಉದಾರ ಉದ್ಯಮಿ ರತನ್ ಟಾಟಾ (Ratan Tata) ಯಾರಿಗೆ ಗೊತ್ತಿಲ್ಲ ಹೇಳಿ. ರತನ್​ ಟಾಟಾ ಕೇವಲ ಉದ್ಯಮಿಯಷ್ಟೇ ಅಲ್ಲ, ತತ್ವಜ್ಞಾನಿಯೂ ಹೌದು. ಕೋವಿಡ್​ ಸಂಕಷ್ಟದಲ್ಲಿ ಸಿಲುಕಿದ್ದಾಗ ಕೋಟಿ ರೂಪಾಯಿಗಳಷ್ಟು ದೇಣಿಗೆ ನೀಡಿದ ಮಹಾನ್​ ವ್ಯಕ್ತಿ. ನಿಮಗೆ ಗೊತ್ತಾ? ಟಾಟಾ ಅಂದು ಮಧ್ಯಮ ಹಾಗೂ ಬಡವರ್ಗದ ಕುಟುಂಬಗಳಿಗೆ ಒಂದು ಲಕ್ಷ ರೂಪಾಯಿ ಕಾರು (Tata nano) ಕೊಡಿಸುವಂತಹ ಕನಸು ಕಂಡಿದ್ದರು ಎನ್ನಲಾಗಿದೆ.

ಯಾರಾದರೂ ಕಷ್ಟದಲ್ಲಿದ್ದರೆ ಅವರಿಗೆ ಏನಾದರು ಸಹಾಯ‌ ಮಾಡಬೇಕು ಎಂಬ ಭಾವನೆ ಬರುತ್ತದೆ. ಅಂತೆಯೇ ಟಾಟಾ ಅವರಿಗೂ ಒಂದು ಘಟನೆಯಿಂದ ಈ ರೀತಿ ಅನಿಸಿದೆ. ಒಮ್ಮೆ
ಟಾಟಾ ಅವರು ಕಾರಿನಲ್ಲಿ ಹೋಗುತ್ತಿರಬೇಕಾದರೆ ಮಳೆಯು ಜೋರಾಗಿ ಸುರಿಯುತ್ತಿತ್ತಂತೆ. ಆ ವೇಳೆ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಧೋ!! ಎಂದು ಹರಿಯುವ ಮಳೆಯಲ್ಲಿ ಒಂದು ಕುಟುಂಬ ನೆನೆದುಕೊಂಡು ಹೋಗುವುದನ್ನು ಕಂಡಿದ್ದರು.

ಮಧ್ಯಮ, ಬಡವರ್ಗದ ಕುಟುಂಬ ಅಂದರೆ ಹೀಗೇ ಕಷ್ಟಗಳು ಇರುತ್ತವೆ. ಇದನ್ನು ಕಂಡು ಕರಗಿದ ರತನ್ ಟಾಟಾ ಮಧ್ಯಮ ವರ್ಗದ ಕುಟುಂಬಗಳಿಗಾಗಿ ನಾನು ಒಂದು ಕಾರನ್ನು ಹೊರತರಬೇಕು ಎಂದು ಯೋಚಿಸಿ, ಅದರಂತೆ ಒಂದು ಲಕ್ಷ ರೂಪಾಯಿ ಒಳಗೆ ನ್ಯಾನೋ (Nano) ಕಾರನ್ನು ಮಾರುಕಟ್ಟೆಗೆ ಬಿಡುತ್ತಾರೆ.

ಸದ್ಯ ಕಡಿಮೆ ಬೆಲೆಗೆ ಕಾರು ಸಿಗೋದು ತುಂಬಾ ವಿರಳ. ಸಿಕ್ಕಿದರೂ ಜನರು ಸಾವಿರಾರು ಅನುಮಾನಗಳಿಂದ ನೋಡುತ್ತಾರೆ. ನ್ಯಾನೋ ಕಾರಿಗೂ ಹಾಗೆಯೇ ಆಯಿತು. ಜನರು ಅದನ್ನು ಬೇರೆ ದೃಷ್ಟಿಯಿಂದ ನೋಡಿದರು. ಒಂದು ಲಕ್ಷ ರೂಪಾಯಿ ಒಳಗೆ, ಕಡಿಮೆ ಬೆಲೆಗೆ ಸಿಗುತ್ತದೆ ಎಂದರೆ ಅದರ ಗುಣಮಟ್ಟ ಸರಿಯಿರಲಿಕ್ಕಿಲ್ಲ ಎಂದುಕೊಂಡರು. ಇದರಿಂದ ಈ ಕಾರು ಮಾರುಕಟ್ಟೆಯಲ್ಲಿ ಸದ್ದು ಮಾಡಲಿಲ್ಲ. ಹಾಗಾಗಿ ರತನ್ ಟಾಟಾ ಅವರ ಕನಸಿನ ಕೇವಲ 1 ಲಕ್ಷದ ನ್ಯಾನೋ ಕಾರು ಕೆಲವೇ ವರ್ಷಗಳಲ್ಲಿ ಕಣ್ಮರೆಯಾಯಿತು.

ಇದನ್ನೂ ಓದಿ: ಉಪೇಂದ್ರ ಜತೆಗಿನ ಲವ್ ಸ್ಟೋರಿ ಬಗ್ಗೆ ಪ್ರೇಮಾ ಏನಂದ್ರು ?