

Puttur: ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ನಡೆದ ಪುತ್ತೂರು (Puttur) ತಾಲೂಕು ಮಟ್ಟದ ಯೋಗ ಸ್ಪರ್ಧೆಯಲ್ಲಿ, ಪಿಎಂಶ್ರೀ ವೀರಮಂಗಲ ಶಾಲಾ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ.

ಆರ್ಟಿಸ್ಟಿಕ್ ಸಿಂಗಲ್ ಯೋಗದಲ್ಲಿ ಕು. ಇಶಾನಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಹಾಗೂ ವರ್ಷಾ ಟ್ರೆಡಿಷನಲ್ ಯೋಗದಲ್ಲಿ ದ್ವಿತೀಯ, ರಿದಮಿಕ್ ಜೋಡಿ ಯೋಗದಲ್ಲಿ ಚಿಂತನ ಮತ್ತು ಅಮೂಲ್ಯ ದ್ವಿತೀಯ, ಆರ್ಟಿಷ್ಟಿಕ್ ಜೋಡಿ ಯೋಗದಲ್ಲಿ ಪ್ರನ್ವಿತ್,ಚಿರಾಗ್ ದ್ವಿತೀಯ, ಆರ್ಟಿಷ್ಟಿಕ್ ಜೋಡಿ ಯೋಗದಲ್ಲಿ ಶ್ರೀದೇವಿ,ವರ್ಷಾ ತೃತೀಯ,ಸ್ಥಾನಪಡೆದಿದ್ದಾರೆ.


















