Home News ಮಾತನಾಡುವ ನೆಪವೊಡ್ಡಿ ಯುವತಿಯನ್ನು ಲಾಡ್ಜ್ ಗೆ ಆಹ್ವಾನಿಸಿದ್ದ ಯುವಕ !! ರೂಮ್ ಒಳಗಿನಿಂದ ಚೀರಾಟ-ಕಿರುಚಾಟ...

ಮಾತನಾಡುವ ನೆಪವೊಡ್ಡಿ ಯುವತಿಯನ್ನು ಲಾಡ್ಜ್ ಗೆ ಆಹ್ವಾನಿಸಿದ್ದ ಯುವಕ !! ರೂಮ್ ಒಳಗಿನಿಂದ ಚೀರಾಟ-ಕಿರುಚಾಟ ಕೇಳಿದ ಸಿಬ್ಬಂದಿ ಬಾಗಿಲು ಒಡೆದು ಒಳಪ್ರವೇಶಿಸಿದಾಗ ಕಾದಿತ್ತು ಶಾಕ್

Hindu neighbor gifts plot of land

Hindu neighbour gifts land to Muslim journalist

ಮಾತನಾಡುವ ನೆಪವೊಡ್ಡಿ ಯುವತಿಯೊರ್ವಳನ್ನು ಖಾಸಗಿ ಲಾಡ್ಜ್ ಒಂದಕ್ಕೆ ಕರೆಸಿಕೊಂಡ ಯುವಕನೋರ್ವ ಆಕೆಯ ಮುಂದೆ ತನ್ನ ಪ್ರೇಮವನ್ನು ಪ್ರಸ್ತಾಪಿಸಿದ್ದು, ಆಕೆ ನಿರಾಕರಿಸಿದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈಯ್ಯಲು ಯತ್ನಿಸಿ ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆಯೊಂದು ಬೆಳಕಿಗೆ ಬಂದಿದ್ದು ಲಾಡ್ಜ್ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಪ್ರಣಾಪಾಯದಿಂದ ಪಾರುಮಾಡಲಾಗಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದ ಯುವತಿ ಹಾಗೂ ತೆಲಂಗಾಣ ಭೂಪಾಲಪಲ್ಲೆ ನಿವಾಸಿ ಹರ್ಷವರ್ಧನ್ ನಗರದ ಖಾಸಗಿ ಲಾಡ್ಜ್ ನಲ್ಲಿ ತಂಗಿದ್ದರು. ಇಬ್ಬರೂ ವಿದ್ಯಾರ್ಥಿಗಳಾಗಿದ್ದು ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ನಡೆಸುತ್ತಿದ್ದರು. ಘಟನೆ ನಡೆದ ದಿನ ಯುವಕನು ಯುವತಿಯನ್ನು ಒತ್ತಾಯಪೂರ್ವಕವಾಗಿ ಲಾಡ್ಜ್ ಗೆ ಬರಹೇಳಿ, ತಾನು ಪ್ರೀತಿಸುತ್ತಿರುವ ವಿಷಯ ಆಕೆಯ ಮುಂದಿಡುತ್ತಾನೆ.

ಇದಕ್ಕೆ ಸಮ್ಮತಿಸದ ಆಕೆ ಆತನನ್ನು ವಿರೋಧಿಸಿದಾಗ ಕೋಪಗೊಂಡ ಆತ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಆತನೂ ಕೂಡಾ ಬೆಂಕಿ ಹಚ್ಚಿಕೊಂಡಿದ್ದಾನೆ. ಇಬ್ಬರ ಚಿರಾಟ ಕಿರುಚಾಟ ಕೇಳಿದ ಲಾಡ್ಜ್ ಸಿಬ್ಬಂದಿಗಳು ಬಾಗಿಲು ಒಡೆದು ಒಳಪ್ರವೇಶಿಸಿದಾಗ ಘಟನೆ ಬೆಳಕಿಗೆ ಬಂದಿದ್ದು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ.

ಸದ್ಯ ಪ್ರಕರಣ ಠಾಣೆಯ ಮೆಟ್ಟಿಲೇರಿದ್ದು ಇಬ್ಬರ ಹೇಳಿಕೆಯನ್ನೂ ಪೊಲೀಸರು ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.