Home News Taj Mahal: ತಾಜ್ ಮಹಲ್ ನಲ್ಲಿ ಬೀಗ ಹಾಕಿದ ಕೋಣೆಗಳ ರಹಸ್ಯವೇನು? ಕೊನೆಗೂ ಬಯಲಯ್ತು ನೋಡಿ...

Taj Mahal: ತಾಜ್ ಮಹಲ್ ನಲ್ಲಿ ಬೀಗ ಹಾಕಿದ ಕೋಣೆಗಳ ರಹಸ್ಯವೇನು? ಕೊನೆಗೂ ಬಯಲಯ್ತು ನೋಡಿ ಅಸಲಿ ಸತ್ಯ

Hindu neighbor gifts plot of land

Hindu neighbour gifts land to Muslim journalist

Taj Mahal : ದೆಹಲಿಯ ಆಗ್ರಾ ನದಿಯ ದಡದಲ್ಲಿರುವ, ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್, ಇಡೀ ವಿಶ್ವದ ಜನರ ಮೆಚ್ಚಿನ ತಾಣವಾಗಿದೆ. 17 ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಪ್ರೀತಿಯ ಪತ್ನಿ ಮುಮ್ತಾಜ್ ಮಹಲ್ ಗಾಗಿ ನಿರ್ಮಿಸಿದ ತಾಜ್, ಪ್ರೀತಿ ಮತ್ತು ನಿಗೂಢತೆಯ ಸ್ಮಾರಕವಾಗಿದೆ. ಈ ತಾಜ್ಮಹಲ್ ನಲ್ಲಿ ಕೆಲವು ಕೋಣೆಗಳ ಬೀಗ ಹಾಕಿದ್ದು, ಇದೀಗ ಅವುಗಳ ರಹಸ್ಯ ಬಯಲಾಗಿದೆ.

ಹೌದು, ತಾಜ್ ಮಹಲ್ ನ ಕೆಲವು ದ್ವಾರಗಳು ಬಹಳ ಕಾಲದಿಂದ ಮುಚ್ಚಿರುವುದನ್ನು ನಾವು ನೋಡಬಹುದು. ಆದರೆ ಈ ರೀತಿ ಬಂದ್‌ ಆಗಿರುವ ಕೋಣೆಗಳ ಒಳಗಡೆ ನಿಜವಾಗಿಯೂ ಏನಿರಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಏಕೆಂದರೆ ಇಲ್ಲಿರುವುದು ಕೇವಲ ಒಂದೆರಡು ಮುಚ್ಚಿದ ಬಾಗಿಲುಗಳಲ್ಲ, ಬರೊಬ್ಬರಿ ಇಪ್ಪತ್ತಕ್ಕೂ ಹೆಚ್ಚು ಬಾಗಿಲುಗಳು ಈ ರೀತಿ ಇರುವುದನ್ನು ಕಾಣಬಹುದಾಗಿದೆ. ಅಷ್ಟಕ್ಕೂ ಇವುಗಳ ಹಿಂದೆ ಏನಿರಬಹುದು..? ನಿಜವಾಗಿಯೂ ಇದರಲ್ಲಿ ಏನಿವೆ ಎಂಬುದನ್ನು ಇದುವರೆಗೂ ಯಾರೂ ಕಂಡುಹಿಡಿದಿದ್ದಿಲ್ಲ. ಈಗ ಅಸಲಿ ಸತ್ಯ ಬಯಲಾಗಿದೆ.

ಈ ತಾಜ್‌ಮಹಲ್‌ನ ಅಮೃತಶಿಲೆಯ ಸೌಂದರ್ಯದ ಕೆಳಗೆ ತಹ್ಖಾನಾ ಇದೆ, ಇದು ರಾಜಮನೆತನದ ಸೌಕರ್ಯಕ್ಕಾಗಿ ವಿನ್ಯಾಸಗೊಳಿಸಲಾದ ಭೂಗತ ಕೊಠಡಿಗಳ ಜಾಲವಾಗಿದೆ. ಈ ಕೋಣೆಗಳು ಒಮ್ಮೆ ಚಕ್ರವರ್ತಿ, ಅವನ ಕುಟುಂಬ ಮತ್ತು ಪರಿವಾರಕ್ಕೆ ಬೇಸಿಗೆಯ ಸುಡುವ ಶಾಖದಿಂದ ತಂಪಾದ ವಿಶ್ರಾಂತಿ ತಾಣಗಳಾಗಿದ್ದವು. ಈ ವಿಶಾಲವಾದ ಕೊಠಡಿಗಳನ್ನು ಜ್ಯಾಮಿತೀಯ ಮತ್ತು ನಕ್ಷತ್ರ ಮಾದರಿಯ ವಿನ್ಯಾಸಗಳಿಂದ ಅಲಂಕರಿಸಲಾಗಿತ್ತು ಎಂದು ಮೊಘಲ್ ವಾಸ್ತುಶಿಲ್ಪದ ಪ್ರಮುಖ ತಜ್ಞರಿಂದ ತಿಳಿದುಬಂದಿದೆ.

ಕೊಠಡಿ ಮುಚ್ಚಿದ್ದೇಕೆ?
ನೈಸರ್ಗಿಕ ವಿಕೋಪಗಳು ಮತ್ತು 1978 ರಲ್ಲಿ ಸಂಭವಿಸಿದ ಪ್ರವಾಹದಿಂದ ಭೂಗತ ಪ್ರದೇಶಗಳಿಗೆ ಗಂಭೀರ ಹಾನಿಯನ್ನುಂಟಾಯಿತು ಆದ ಕಾರಣ ಈ ಕೋಣೆಗಳನ್ನು ಮುಚ್ಚಲಾಯಿತು. 1978 ರಲ್ಲಿ ಯಮುನಾ ನದಿಯ ಪ್ರವಾಹವು ಕೆಲವು ಭೂಗತ ಕೋಣೆಗಳಲ್ಲಿ ಹೂಳು ತುಂಬಿ ರಚನಾತ್ಮಕ ಬಿರುಕುಗಳನ್ನು ಉಂಟುಮಾಡಿತು ಎಂದು ದೆಹಲಿ ಮೂಲದ ಇತಿಹಾಸಕಾರರಿಂದ ತಿಳಿದುಬಂದಿದೆ. ಇದರಿಂದಾಗಿ ಸ್ಮಾರಕದ ಸ್ಥಿರತೆಯನ್ನು ಕಾಪಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಕೊಠಡಿಗಳನ್ನು ಮುಚ್ಚಬೇಕಾಯಿತು.