Home News Court: ಅಂಗವಿಕಲರು ಮತ್ತು ಆ್ಯಸಿಡ್ ದಾಳಿಗೊಳಗಾದವರ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರಕ್ಕೆ ಸೂಚನೆ ನೀಡಿದ ಸುಪ್ರೀಂ ಕೋರ್ಟ್!

Court: ಅಂಗವಿಕಲರು ಮತ್ತು ಆ್ಯಸಿಡ್ ದಾಳಿಗೊಳಗಾದವರ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರಕ್ಕೆ ಸೂಚನೆ ನೀಡಿದ ಸುಪ್ರೀಂ ಕೋರ್ಟ್!

Hindu neighbor gifts plot of land

Hindu neighbour gifts land to Muslim journalist

Court: ಸುಪ್ರೀಂ ಕೋರ್ಟ್ ನಲ್ಲಿ ಎ. 30 ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ವೇಳೆ ನ್ಯಾ.ಜೆ.ಬಿ.ಪರ್ದಿವಾಲ ಮತ್ತು ಆ‌ರ್.ಮಹದೇವನ್‌ ಅವರಿದ್ದ ಪೀಠವು, ಅಂಗವಿಕಲರು ಅದರಲ್ಲೂ ಮುಖ್ಯವಾಗಿ ಅಂಧರು ಮತ್ತು ವಿರೂಪಗೊಂಡ ಮುಖ ಹೊಂದಿರುವವರು ಕೆವೈಸಿ ಪ್ರಕ್ರಿಯೆ ವೇಳೆ ಮುಖದ ಸರಿಹೊಂದಾಣಿಕೆ ಅಥವಾ ಕಣ್ಣು ಮಿಟುಕಿಸುವ ವೇಳೆ ಎದುರಿಸುತ್ತಿರುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಕೆವೈಸಿ ನಿಯಮಾವಳಿಗಳಲ್ಲಿ ಕೆಲ ಬದಲಾವಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಅಂಧರು ಮತ್ತು ಆ್ಯಸಿಡ್ ದಾಳಿಗೊಳಗಾದವರು ಕೆವೈಸಿ ಪೂರ್ಣಗೊಳಿಸಲು ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದ್ದು ಸಂವಿಧಾನದ 21ನೇ ವಿಧಿ ಪ್ರಕಾರ ನೀಡಲಾದ ಬದುಕಿನ ಹಕ್ಕಿನಲ್ಲಿ ಡಿಜಿಟಲ್ ಸೌಲಭ್ಯ ಪಡೆಯುವುದು ಕೂಡ ಪ್ರಮುಖ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಎಲ್ಲರನ್ನೂ ಒಳಗೊಳ್ಳುವ ಕೆವೈಸಿ ನಿಯಮಗಳನ್ನು ರೂಪಿಸಲು 20 ನಿರ್ದೇಶನಗಳನ್ನೂ ಹೊರಡಿಸಿದೆ.