Home News Mangalore: ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ; ಮೂವರು ಆರೋಪಿಗಳ ಸೆರೆ, ಪೊಲೀಸರಿಂದ ಮಹತ್ವದ ಮಾಹಿತಿ

Mangalore: ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ; ಮೂವರು ಆರೋಪಿಗಳ ಸೆರೆ, ಪೊಲೀಸರಿಂದ ಮಹತ್ವದ ಮಾಹಿತಿ

Hindu neighbor gifts plot of land

Hindu neighbour gifts land to Muslim journalist

Mangalore: ಬಜ್ಪೆ ಬಳಿ ನಡೆದ ಹಿಂದೂ ಸಂಘಟನೆಗೆ ಸೇರಿದ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಕುರಿತಂತೆ ಮೂವರು ಆರೋಪಿಗಳನ್ನು ಬಜ್ಪೆ ಪೊಲೀಸರು ಬಂಧನ ಈಗಾಗಲೇ ಮಾಡಲಾಗಿದೆ. ಈ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಈಗಾಗಲೇ ಎಂಟು ಜನರನ್ನು ಬಂಧನ ಮಾಡಿದ್ದಾರೆ.

ಕಳವಾರು ನಿವಾಸಿ ಅಜರುದ್ದೀನ್‌ ಅಲಿಯಾಸ್‌ ಅಜರ್‌ ಅಲಿಯಾಸ್‌ ಅಜ್ಜು (29), ಬಜಪೆ ನಿವಾಸಿ ಅಬ್ದುಲ್‌ ಖಾದರ್‌ ಅಲಿಯಾಸ್‌ (24), ವಾಮಂಜೂರು ನೌಷದ್‌ ಅಲಿಯಾಸ್‌ ಚೊಟ್ಟೆ ನೌಷದ್‌ (39) ಬಂಧಿತ ಆರೋಪಿಗಳು.

ಅಜರುದ್ದೀನ್‌ ವಿರುದ್ಧ ಈ ಹಿಂದೆ ಪಣಂಬೂರು, ಸುರತ್ಕಲ್‌, ಮುಲ್ಕಿ ಪೊಲೀಸ್‌ ಠಾಣೆಗಳಲ್ಲಿ ಮೂರು ಕಳವು ಪ್ರಕರಣ ದಾಖಲಾಗಿದ್ದವು. ಈತನೇ ಸುಹಾಸ್‌ ಶೆಟ್ಟಿಯ ಚಲನವಲನದ ಕುರಿತು ಮಾಹಿತಿ ನೀಡಿದ್ದು, ಹಾಗೂ ಕೊಲೆಗೆ ಸಹಕರಿಸಿದ್ದಾನೆ. ಆರೋಪಿಗಳು ಕೊಲೆ ಮಾಡಿದ ನಂತರ ಕಾರಿನಲ್ಲಿ ಪರಾರಿಯಾಗಲು ಆರೋಪಿ ಅಬ್ದುಲ್‌ ಖಾದರ್‌ ಸಹಾಯ ಮಾಡಿದ್ದಾನೆ. ನೌಷದ್‌ ಉಳಿದ ಆರೋಪಿಗಳ ಜೊತೆ ಸೇರಿ ಕೊಲೆಗೆ ಸಂಚು ರೂಪಿಸಿರುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.

ಆರೋಪಿ ನೌಷದ್‌ ವಿರುದ್ಧ ಕೂಡಾ ಸುರತ್ಕಲ್‌, ಬಜ್ಪೆ, ಮೂಡಬಿದ್ರಿ, ಮಂಗಳೂರು ಉತ್ತರ, ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ 6 ಪ್ರಕರಣಗಳು ಈಗಾಗಲೇ ದಾಖಲಾಗಿದೆ. ಇದರಲ್ಲಿ ಕೊಲೆ, ಕೊಲೆಯತ್ನ, ದರೋಡೆಗೆ ಸಂಚು ಸೇರಿದೆ. ಪೊಲೀಸರು ನೌಷಾದ್‌ನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಇದೀಗ ಆರೋಪಿಗಳ ಪೈಕಿ ಅಜರುದ್ದೀನ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಬ್ದುಲ್‌ ಖಾದರ್‌, ನೌಷದ್‌ ಗೆ 7 ದಿನಗಳ ಪೊಲೀಸ್‌ ಕಸ್ಟಡಿ ನೀಡಲಾಗಿದೆ.