Home News Suhas Shetty Murder Case: ಸುಹಾಸ್‌ ಶೆಟ್ಟೆ ಹತ್ಯೆಗೆ ಫಾಜಿಲ್‌ ಪರಿಹಾರ ಹಣ ಬಳಕೆ ಆರೋಪ-...

Suhas Shetty Murder Case: ಸುಹಾಸ್‌ ಶೆಟ್ಟೆ ಹತ್ಯೆಗೆ ಫಾಜಿಲ್‌ ಪರಿಹಾರ ಹಣ ಬಳಕೆ ಆರೋಪ- ಸಿಎಂ ಹೇಳಿದ್ದೇನು?

CM Post

Hindu neighbor gifts plot of land

Hindu neighbour gifts land to Muslim journalist

Suhas Shetty Murder Case: ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಪ್ರಕರಣದಲ್ಲಿ ಬಂಧಿತರಾಗಿರುವ ಗುತ್ತಿಗೆ ಹಂತಕರನ್ನು ನೇಮಿಸಿಕೊಳ್ಳಲು ಫಾಜಿಲ್‌ ಕುಟುಂಬಕ್ಕೆ ನೀಡಿದ ಪರಿಹಾರದ ಹಣವನ್ನು ಬಳಸಲಾಗಿದೆ ಎಂಬ ವರದಿಗಳ ಕುರಿತು ನನಗೆ ತಿಳಿದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹಾಗೂ ಸಚಿವ ದಿನೇಶ್‌ ಗುಂಡೂರಾವ್‌ ಅವರ ಜೊತೆ ಮಾತಾಡಿಲ್ಲ. ಈ ಕುರಿತು ಚರ್ಚಿಸಿ ಹೆಚ್ಚಿನ ವಿವರ ಪಡೆಯುವುದಾಗಿ ಹೇಳಿದ್ದಾರೆ.

2022 ರಲ್ಲಿ ಫಾಜಿಲ್‌ ಹತ್ಯೆಯ ನಂತರ ರಾಜ್ಯ ಸರಕಾರ 25 ಲಕ್ಷ ಪರಿಹಾರ ಹಣವನ್ನು ನೀಡಿತ್ತು. ಅದರಲ್ಲಿ ಐದು ಲಕ್ಷ ರೂ.ಗಳನ್ನು ಸುಹಾಸ್‌ ಶೆಟ್ಟಿಯನ್ನು ಕೊಲ್ಲಲು ಹಂತಕರಿಗೆ ಪಾವತಿ ಮಾಡಲಾಗಿದೆಯೇ ಎಂದು ಪೊಲೀಸ್‌ ತನಿಖೆಯಿಂದ ತಿಳಿದು ಬರಬೇಕಿದೆ.