Home News Sonu Nigam: ಸೋನು ನಿಗಮ್ ಮೇಲೆ ಕಲ್ಲುತೂರಾಟ – ಲಕ್ಷಾಂತರ ಜನರ ಮುಂದೆ ಕೈಮುಗಿದು ಬೇಡಿಕೊಂಡ...

Sonu Nigam: ಸೋನು ನಿಗಮ್ ಮೇಲೆ ಕಲ್ಲುತೂರಾಟ – ಲಕ್ಷಾಂತರ ಜನರ ಮುಂದೆ ಕೈಮುಗಿದು ಬೇಡಿಕೊಂಡ ಗಾಯಕ

Hindu neighbor gifts plot of land

Hindu neighbour gifts land to Muslim journalist

Sonu Nigam:ಭಾರತ ಕಂಡ ಅತ್ಯಂತ ಶ್ರೇಷ್ಠ ಗಾಯಕರಲ್ಲಿ ಸೋನು ನಿಗಮ್ ಕೂಡ ಒಬ್ಬರು. ಇವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಎಲ್ಲೆಡೆ ಸಂಗೀತ ಅಭಿಮಾನಿಗಳು ಇವರನ್ನು ಆರಾಧಿಸುತ್ತಾರೆ. ಆದರೆ ಇದೀಗ ಸೋನು ನಿಗಮ್ ವೇದಿಕೆಯಲ್ಲಿ ಹಾಡು ಹಾಡುವಾಗ ಕೆಲವರು ಕಲ್ಲುತೂರಾಟ ನಡೆಸಿದ್ದು, ಗಾಯಕ ಸೋನು ನಿಗಮ್ ಅವರು ಕೈಮುಗಿದು ಬೇಡಿಕೊಂಡಂತಹ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.

ಹೌದು, ಆಹ್ವಾನದ ಮೇರೆಗೆ ಸೋನು ನಿಗಮ್ ದೆಹಲಿಯ ತಾಂತ್ರಿಕ ವಿಶ್ವವಿದ್ಯಾಲಯದ ಎಂಜಿಫೆಸ್ಟ್ 2025ಕ್ಕೆ ಹಾಡು ಹಾಡಲು ಹೋಗಿದ್ದರು. ಕಾಲೇಜ್‌ನ ಕಾರ್ಯಕ್ರಮವಾದ ಕಾರಣ ಅನೇಕ ವಿದ್ಯಾರ್ಥಿಗಳು ಬಂದು ಸೇರಿದ್ದರು. ಆದರೆ ಇದೇ ಸಮಯದಲ್ಲಿ ವಿದ್ಯಾರ್ಥಿಗಳ ಒಂದು ಬಣ ವೇದಿಕೆಯತ್ತ ನಿರಂತರವಾಗಿ ಕಲ್ಲು ಮತ್ತು ಬಾಟಲಿಗಳನ್ನು ಎಸೆದಿದೆ. ವಾತಾವರಣಕ್ಕೆ ಭಂಗ ತರುವಂತ ಕೆಲಸ ಮಾಡಿದೆ.

ಆದರೆ ಈ ಸಂದರ್ಭದಲ್ಲಿ ಕೊಂಚವೂ ಬೇಸರ ಹಾಗೂ ಸಿಟ್ಟನ್ನು ಮಾಡಿಕೊಳ್ಳದ ಸೋನು ನಿಗಮ್ ಅವರು ಸಮಚಿತ್ತದಿಂದ ಪರಿಸ್ಥಿತಿಯನ್ನು ನಿಭಾಯಿಸಿದರು. ನಾನು ನಿಮಗೋಸ್ಕರ ಹಾಡು ಹಾಡಲು ಇಲ್ಲಿಯವರೆಗೆ ಬಂದಿದ್ದೇನೆ, ನಿಮಗೆ ನನ್ನ ಹಾಡುಗಳು ಇಷ್ಟವಾಗಿಲ್ಲ ಅಂದರೂ ಪರವಾಗಿಲ್ಲ ದಯವಿಟ್ಟು ಹೀಗೆಲ್ಲ ಮಾಡಬೇಡಿ ಎಂದು ಮನವಿಯನ್ನು ಮಾಡಿಕೊಂಡರು.ಆ ನಂತರ ಕೆಲ ಹೊತ್ತು ಅಲ್ಲಿಯೇ ನಿಂತು ಪರಿಸ್ಥಿತಿ ಸುಧಾರಿಸಿದ ನಂತರ ಬೇಸರ ಮಾಡಿಕೊಳ್ಳದೇ ಮತ್ತೆ ಹಾಡುಗಳನ್ನು ಹಾಡಿದರು.

ಸದ್ಯ ಕಾಲೇಜಿನಲ್ಲಿ ಸೋನು ನಿಗಮ್ ಹಾಡುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಬಹುತೇಕರು ವಿದ್ಯಾರ್ಥಿಗಳ ವರ್ತನೆಯನ್ನು ಖಂಡಿಸಿದ್ದಾರೆ. ಕೋಟ್ಯಂತರ ಜನರ ಹೃದಯವನ್ನು ತನ್ನ ಕಂಠದಿಂದ ಗೆದ್ದ ಗಾಯಕನಿಗೆ ಈ ರೀತಿ ಅವಮಾನ ಮಾಡಬಾರದಿತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ವಿಶ್ವ ವಿದ್ಯಾಲಯದ ಆಡಳಿತ ಮಂಡಳಿಯ ವಿರುದ್ಧ ಕೂಡ ಆಕ್ರೋಶವನ್ನು ಹೊರಹಾಕಿದ್ದಾರೆ.