

BPL Card: ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ದಾರರಿಗೆ ಶಾಕ್ ನೀಡಿದ್ದು ರಬರಿ 44 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲು ಆದೇಶ ಹೊರಡಿಸಿದೆ. ಹಾಗಂತ ಇದು ಬೇಕಾಬಿಟ್ಟಿ ಮಾಡಿರುವ ಕಾರ್ಯವಲ್ಲ. ಅನರ್ಹರಾಗಿದ್ದುಕೊಂಡು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಈ ಬಿಸಿ ಮುಟ್ಟುತ್ತದೆ.
ಹೌದು, ರಾಷ್ಟ್ರೀಯ ಆಹಾರ ಕಾಯ್ದೆ ಉಲ್ಲಂಘಿಸಿರುವ ಮತ್ತು ಅನರ್ಹ ಪಡಿತರ ಚೀಟಿ ಪತ್ತೆ ಸಲುವಾಗಿ ಖಾಸಗಿ (ಥರ್ಡ್ ಪಾರ್ಟಿ) ಸಮೀಕ್ಷೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ರಾಜ್ಯದಲ್ಲಿ 44 ಲಕ್ಷ ಅನರ್ಹ ಪಡಿತರ ಫಲಾನುಭವಿಗಳು ಇದ್ದಾರೆ ಎಂದು ಪತ್ತೆಹಚ್ಚಿ ಕಾರ್ಡ್ ರದ್ದುಪಡಿಸಲು ರಾಜ್ಯ ಸರ್ಕಾರ ಥರ್ಡ್ ಪಾರ್ಟಿ ಸರ್ವೇಗೆ ನಿರ್ಧರಿಸಿದೆ.
2011ರ ಜನ ಸಂಖ್ಯೆ ದತ್ತಾಂಶದ ಪ್ರಕಾರ ರಾಜ್ಯದಲ್ಲಿ 11,99,700 ಅಂತ್ಯೋದಯ (ಎಎವೈ) 4,01, 93,130 ಸ್ವೀಕೃತದಾರರ ಮಿತಿ ನಿಗದಿ ಮಾಡಿದೆ. ಆದಾಗ್ಯೂ ರಾಜ್ಯದಲ್ಲಿ ಆದ್ಯತಾ ಕುಟುಂಬ (ಪಿಎಚ್‌ಎಚ್) ಮತ್ತು ಎಎವೈ 44 ಲಕ್ಷಕ್ಕೂ ಹೆಚ್ಚು ಇರುವುದು ಕಂಡುಬಂದಿದೆ. ಹೀಗಾಗಿ ಕೂಡಲೇ ಈ ಅನರ್ಹರನ್ನು ಪತ್ತೆ ಹಚ್ಚಿ ಅವರ ಕಾರ್ಡ್ಗಳನ್ನು ರದ್ದು ಮಾಡಲು ಸರ್ಕಾರ ನಿರ್ಧರಿಸಿದೆ.













