Home News BJP: 8 ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದ ರಾಜ್ಯ ಬಿಜೆಪಿ!!

BJP: 8 ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದ ರಾಜ್ಯ ಬಿಜೆಪಿ!!

Hindu neighbor gifts plot of land

Hindu neighbour gifts land to Muslim journalist

BJP: ಕೆಲವು ತಿಂಗಳ ಹಿಂದಷ್ಟೇ ರಾಜ್ಯ ಬಿಜೆಪಿಯು ಸುಮಾರು 23 ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿತ್ತು. ಇದರಲ್ಲಿ ಕೆಲವು ಜಿಲ್ಲೆಗಳ ಅಧ್ಯಕ್ಷರ ನೇಮಕ ಹಲವು ನಾಯಕರಿಗೆ ಅಸಮಾಧಾನವನ್ನು ಉಂಟು ಮಾಡಿತ್ತು. ಬಳಿಕ ಕೆಲವು ಜಿಲ್ಲೆಗಳ ನೇಮಕ ಆದೇಶವನ್ನು ತಡೆಹಿಡಿಯಲಾಗಿತ್ತು. ಇದೀಗ ಬಿಜೆಪಿಯೂ ಎಂಟು ಜಿಲ್ಲೆಗೆ ಜಿಲ್ಲಾ ಘಟಕದ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಮೊದಲು ನೇಮಕ ಮಾಡಿದ್ದವರ ಪೈಕಿ ಮೂರು ಜಿಲ್ಲೆಗಳ ಅಧ್ಯಕ್ಷರನ್ನು ಬದಲಾವಣೆ ಮಾಡಿದೆ.

ಹೌದು, ಎಂಟು ಜಿಲ್ಲೆಗಳಿಗೆ ಬಿಜೆಪಿ ನೂತನ ಅಧ್ಯಕ್ಷರನ್ನು ನೇಮಕ ಮಾಡಿದೆ. ಮಂಡ್ಯ (ಇಂದ್ರೇಶ್‌), ಗದಗ (ರಾಜು ಕುರಡಗಿ), ಬಾಗಲಕೋಟೆ (ಎಸ್.ಟಿ. ಪಾಟೀಲ), ವಿಜಯಪುರ (ಗುರುಲಿಂಗಪ್ಪ ಅಂಗಡಿ), ರಾಯಚೂರು (ವೀರನಗೌಡ ಲೆಕ್ಕಿಹಾಳ), ಮಧುಗಿರಿ (ಚಿದಾನಂದ ಗೌಡ) ರಾಮನಗರ (ಆನಂದ್ ಸ್ವಾಮಿ), ಬೆಂಗಳೂರು ಗ್ರಾಮಾಂತರಕ್ಕೆ (ರಾಮಕೃಷ್ಣಪ್ಪ) ನೇಮಕ ಮಾಡಲಾಗಿದೆ.

ಇನ್ನೂ ಎರಡು ತಿಂಗಳ ಹಿಂದಷ್ಟೆ ಆಯ್ಕೆಯಾಗಿದ್ದ ಕೆಲವರ ನೇಮಕಾತಿಯನ್ನು ತಡೆಹಿಡಿಯಲಾಗಿತ್ತು. ವಿಜಯಪುರದ ಆರ್‌.ಎಸ್‌.ಪಾಟೀಲ, ಮಧುಗಿರಿಯ ಬಿ.ಸಿ. ಹನುಮಂತೇಗೌಡ, ಬೆಂಗಳೂರು ಗ್ರಾಮಾಂತರದ ರಾಮಕೃಷ್ಣಪ್ಪ ಅವರನ್ನು ಬದಲಾಯಿಸಿ, ಹೊಸಬರಿಗೆ ಅವಕಾಶ ನೀಡಲಾಗಿದೆ.