Home News SSLC Result 2025 : ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ದ.ಕ ಜಿಲ್ಲೆ ಪ್ರಥಮ! ಕಲಬುರಗಿ ಕೊನೆ...

SSLC Result 2025 : ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ದ.ಕ ಜಿಲ್ಲೆ ಪ್ರಥಮ! ಕಲಬುರಗಿ ಕೊನೆ ಸ್ಥಾನ

SSLC Result

Hindu neighbor gifts plot of land

Hindu neighbour gifts land to Muslim journalist

SSLC Result: 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಶೇ.66.1 ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕೆ 8% ಫಲಿತಾಂಶ ಹೆಚ್ಚಳವಾಗಿದ್ದು, ಬಾಲಕಿಯರೇ ಈ ಬಾರಿ ಮೇಲುಗೈ ಸಾಧಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ (91.12%) ಪಡೆದುಕೊಂಡಿದೆ. ಉಡುಪಿ ಜಿಲ್ಲೆ (89.96) ಎರಡನೇ ಸ್ಥಾನ ಪಡೆದುಕೊಂಡಿದೆ. ಉತ್ತರ ಕನ್ನಡ (83.19%) ಮೂರನೇ ಸ್ಥಾನ ಪಡೆದುಕೊಂಡಿದೆ.

SSLC ಫಲಿತಾಂಶದಲ್ಲಿ ಈ ಬಾರಿ ಹೆಣ್ಣು ಮಕ್ಕಳು ಶೇ.74ರಷ್ಟು ಪಾಸಾಗಿದ್ದು, ಗಂಡು ಮಕ್ಕಳು ಶೇ. 58,07 ರಷ್ಟು ಪಾಸಾಗಿದ್ದಾರೆ. ಹಾಗಾಗಿ ಈ ಬಾರಿ ಕೂಡಾ ಹೆಣ್ಣುಮಕ್ಕಳು ಮೇಲುಗೈ ಸಾಧಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ಶೇ.66.14 ರಷ್ಟು ಫಲಿತಾಂಶ ಬಂದಿದೆ. 22 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 625 ಕ್ಕೆ 625 ಅಂಕಗಳನ್ನು ಇವರು ಪಡೆದಿದ್ದಾರೆ.

ಮೊಬೈಲ್‌ನಲ್ಲೂ ರಿಸಲ್ಟ್‌ ಲಭ್ಯ!
ವಿದ್ಯಾರ್ಥಿಗಳು ಮೊಬೈಲ್‌ ಫೋನ್‌ನಲ್ಲಿ KAR 10 ಎಂದು ಬರೆದು ಸ್ಪೇಸ್‌ ಕೊಟ್ಟು ನೋಂದಣಿ ಸಂಖ್ಯೆಯನ್ನು ನಮೂದಿಸಿ 56263 ಸಂದೇಶ ಕಳುಹಿಸಿ. ಸ್ವಲ್ಪ ಸಮಯದ ನಂತರ ಅದೇ ಮೊಬೈಲ್‌ಗೆ ಫಲಿತಾಂಶ ಬರುತ್ತದೆ.

ಎಸ್​ಎಸ್​​ಎಲ್​​ಸಿ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ನೋಡುವ ರೀತಿ ಇಲ್ಲಿದೆ;

https://karresults.nic.in/ ಮತ್ತು kseab.karnataka.gov.in ಭೇಟಿ ನೀಡಿ.

‘SSLC ಫಲಿತಾಂಶ 2025’ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.

SSLC ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ಸಬ್​ಮೀಟ್​ ಮೇಲೆ ಕ್ಲಿಕ್ ಮಾಡಿ.

ನಂತರ ವಿಷಯವಾರು ಅಂಕಗಳೊಂದಿಗೆ ಫಲಿತಾಂಶ ಪ್ರದರ್ಶನಗೊಳ್ಳುತ್ತದೆ.

ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು