

ಶಿವಮೊಗ್ಗ: ಸಾಗರದ ಐತಿಹಾಸಿಕ ಮಾರಿಕಾಂಬಾ ದೇವಿ ಜಾತ್ರೆಗೆ ಫೆ.3 ರಿಂದ ಫೆ.10 ರವರೆಗೆ ಯಶವಂತಪುರದಿಂದ ತಾಳಗುಪ್ಪಕ್ಕೆ ಹಾಗೂ ತಾಳಗುಪ್ಪದಿಂದ ಯಶವಂತಪುರಕ್ಕೆ ಚಲಿಸಲಿದೆ. ಸಂಸದ ಬಿ.ವೈ ರಾಘವೇಂದ್ರ ಅವರು ಈ ರೈಲು ಸೇವೆಯಲ್ಲಿ ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದ್ದಾರೆ.
ಸಾಗರ ಕಡೆಗೆ
ರೈಲು ಸಂಖ್ಯೆ 06585 (ಯಶವಂತಪುರ-ತಾಲಗುಪ್ಪ): ಫೆ.3,5,8,10 ರಂದು ಯಶವಂತಪುರದಿಂದ ರಾತ್ರಿ 10.45 ಕ್ಕೆ ಹೊರಟು ಬೆಳಗ್ಗೆ 5.05 ಗಂಟೆಗೆ ತಾಳಗುಪ್ಪ ತಲುಪಲಿದೆ.
ರೈಲು ಸಂಖ್ಯೆ 06587 (ಯಶವಂತಪುರ-ತಾಳಗುಪ್ಪ): ಫೆ.6 ರಂದು ಯಶವಂತಪುರದಿಂದ ರಾತ್ರಿ 10.45 ಕ್ಕೆ ಹೊರಟು ಬೆಳಗ್ಗೆ 5.05 ಗಂಟೆಗೆ ತಾಳಗುಪ್ಪ ತಲುಪಲಿದೆ.
ರೈಲು ಸಂಖ್ಯೆ 16581 (ಯಶವಂತಪುರ – ತಾಳಗುಪ್ಪ): ಫೆ.3, ಫೆ.5, ಫೆ.8, ಫೆ.10ರಂದು ಯಶವಂತಪುರದಿಂದ ರಾತ್ರಿ 12.15ಕ್ಕೆ ಹೊರಟು ಬೆಳಗ್ಗೆ 9 ಗಂಟೆಗೆ ತಾಳಗುಪ್ಪ ತಲುಪಲಿದೆ.
ಯಶವಂತಪುರ ಕಡೆಗೆ
ರೈಲು ಸಂಖ್ಯೆ 06586 (ತಾಳಗುಪ್ಪ – ಯಶವಂತಪುರ): ಫೆ.4, ಫೆ.6, ಫೆ.9, ಫೆ.11ರಂದು ತಾಳಗುಪ್ಪದಿಂದ ಬೆಳಗ್ಗೆ 9.30ಕ್ಕೆ ಹೊರಟು ಸಂಜೆ 5.15ಕ್ಕೆ ಯಶವಂತಪುರ ತಲುಪಲಿದೆ.
ರೈಲು ಸಂಖ್ಯೆ 06588 (ತಾಳಗುಪ್ಪ – ಯಶವಂತಪುರ): ಫೆ.7ರಂದು ಬೆಳಗ್ಗೆ 9.30ಕ್ಕೆ ತಾಳಗುಪ್ಪದಿಂದ ಹೊರಟು ಸಂಜೆ 5.15ಕ್ಕೆ ಯಶವಂತಪುರ ತಲುಪಲಿದೆ.
ರೈಲು ಸಂಖ್ಯೆ 16582 (ತಾಳಗುಪ್ಪ – ಯಶವಂತಪುರ): ಫೆ.3, ಫೆ.5, ಫೆ.8, ಫೆ.10ರಂದು ರಾತ್ರಿ 10ಗಂಟೆಗೆ ತಾಳಗುಪ್ಪದಿಂದ ಹೊರಟು ಬೆಳಗ್ಗೆ 4.45ಕ್ಕೆ ಯಶವಂತಪುರ ತಲುಪಲಿದೆ.













