Home News Mangaluru: ಮಂಗಳೂರಿಗೆ ಬಂತು ಸ್ಪೆಷಲ್‌ ಆಕ್ಷನ್‌ ಫೋರ್ಸ್‌: ಗೃಹ ಸಚಿವರಿಂದ ಚಾಲನೆ

Mangaluru: ಮಂಗಳೂರಿಗೆ ಬಂತು ಸ್ಪೆಷಲ್‌ ಆಕ್ಷನ್‌ ಫೋರ್ಸ್‌: ಗೃಹ ಸಚಿವರಿಂದ ಚಾಲನೆ

Dr. G parameshwar
Image source- Times of india

Hindu neighbor gifts plot of land

Hindu neighbour gifts land to Muslim journalist

Mangaluru: ಮಂಗಳೂರಿನಲ್ಲಿ ಕೋಮು ಸಂಘರ್ಷವನ್ನು ತಡೆಗಟ್ಟಲು ʼಸ್ಪೆಷಲ್‌ ಆಕ್ಷನ್‌ ಫೋರ್ಸ್‌ʼ ಇಂದು ಅಸ್ತಿತ್ವಕ್ಕೆ ಬಂದಿದೆ. ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ನೂತನ ಸ್ಟ್ರೈಕಿಂಗ್‌ ಫೋರ್ಸ್‌ಗೆ ಚಾಲನೆ ನೀಡಿದರು.

ಕೋಮುದಳ್ಳುರಿಗೆ ಸಿಲುಕಿದ್ದ ಮಂಗಳೂರಿಗೆ ನೂತನ ಪೊಲೀಸ್‌ ಪಡೆ ಬಂದಿದೆ. ರಾಜ್ಯ ಸರಕಾರ ಕೊಟ್ಟ ಮಾತಿನಂತೆ ಕೋಮು ಸಂಘರ್ಷದ ನೆಲದಲ್ಲಿ ಹೊಸ ತಂಡವನ್ನು ರೆಡಿ ಮಾಡಿದೆ. ಸ್ಪೆಷಲ್‌ ಆಕ್ಷನ್‌ ಫೋರ್ಸ್‌ ಎಂಬ ಪೊಲೀಸ್‌ ಪಡೆ ಇಂದಿನಿಂದ ಅಸ್ತಿತ್ವಕ್ಕೆ ಬರಲಿದೆ.

ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಫೋರ್ಸ್‌ ಕಾರ್ಯಾಚರಣೆ ನಡೆಯಲಿದೆ. ಈ ತಂಡದಲ್ಲಿ 248 ಸಿಬ್ಬಂದಿ ಒಳಗೊಂಡ ಮೂರು ಕಂಪನಿ ಕಾರ್ಯಾಚರಣೆಗೆ ಸಿದ್ಧವಾಗಿದೆ. 80 ಸಿಬ್ಬಂದಿ ಪ್ರತಿ ಕಂಪನಿಯಲ್ಲಿ ಇರಲಿದ್ದಾರೆ.