Home News Sowjanya Secrets: ಶುರುವಾಗುತ್ತಿದೆ ಹೊಸ ಧಾರಾವಾಹಿ -ಸೌಜನ್ಯ ಸೀಕ್ರೆಟ್ಸ್ ! ಬಿಳಿ ರಣಹದ್ದುಗಳಿವೆ ಎಚ್ಚರಿಕೆ !!!

Sowjanya Secrets: ಶುರುವಾಗುತ್ತಿದೆ ಹೊಸ ಧಾರಾವಾಹಿ -ಸೌಜನ್ಯ ಸೀಕ್ರೆಟ್ಸ್ ! ಬಿಳಿ ರಣಹದ್ದುಗಳಿವೆ ಎಚ್ಚರಿಕೆ !!!

Sowjanya Secrets

Hindu neighbor gifts plot of land

Hindu neighbour gifts land to Muslim journalist

ಸೌಜನ್ಯ ಸೀಕ್ರೆಟ್ಸ್ !

ಬಿಳಿ ರಣಹದ್ದುಗಳಿವೆ ಎಚ್ಚರಿಕೆ !!!

ಇದು ರಕ್ತ ಸಿಕ್ತ ಕಥನ. ಎಂದೂ ತೀರದ ರಕ್ತ ದಾಹ. ಹಸಿ ಹಸಿಯಾಗಿ ನೆತ್ತರು ಜಿನುಗುತ್ತಿರುವಂತೆಯೇ ಘಟಿಸಿಹೋದ ವಿದ್ಯಮಾನಗಳನ್ನು ನಿಮ್ಮೆದುರು ತೆರೆದಿಡಲು ಇದೊಂದು ಸಣ್ಣ ಪ್ರಯತ್ನ.ಈವರೆಗೆ ಸೌಜನ್ಯಾ ಹತ್ಯಾ ಕುರಿತಾದ ನೀವು ಕಂಡು ಕೇಳರಿಯದ ವಿಷಯಗಳನ್ನು ವಿವರ ಮತ್ತು ಸೈಂಟಿಫಿಕ್ ವಿವರಗಳನ್ನೊಳಗೊಂಡ ಸುದೀರ್ಘ ಕಥೆ ನಿಮ್ಮೆದುರು ಬರಲಿದೆ.

ಗೆಳೆಯರೇ, ದಕ್ಷಿಣ ಕನ್ನಡದ ಪ್ರತಿಕ್ಷಣದ ಬೇಡಿಕೆಯಾಗಿರುವ ಸೌಜನ್ಯ ಹೋರಾಟಕ್ಕೆ ಹೊಸಕನ್ನಡ ಪತ್ರಿಕೆಯು ಬೆಂಬಲವನ್ನು ಈ ಮೂಲಕ ಘೋಷಿಸುತ್ತಿದೆ. ಧರ್ಮಸ್ಥಳ ಗ್ರಾಮದಲ್ಲಿ ಹಲವು ದಶಕಗಳಿಂದ ಆಗಿರುವ ಅತ್ಯಾಚಾರ, ಸರಣಿ ಕೊಲೆಗಳ ಸರಮಾಲೆ, ಅಸಹಜ ಸಾವುಗಳ ಅನಂತ ದೌರ್ಜನ್ಯ ಮುಂತಾದುವುಗಳ ಬಗ್ಗೆ ಹತ್ತಿರದಿಂದ ನೋಡಿ ತಿಳಿದ ಕಾರಣದಿಂದ, ಈಗ ನಡೆಯುತ್ತಿರುವ ಸೌಜನ್ಯ ಪ್ರಕರಣದ ಹೋರಾಟವು ಹಲವು ಶತಮಾನಗಳ ನಿಲ್ಲದ ಹಿಂಸೆಗೆ ಒಂದು ಬಲವಾದ ಪುಲ್ ಸ್ಟಾಪ್ ಹಾಕಬಲ್ಲದು ಅನ್ನುವ ಆಶಾಭಾವನೆಯೊಂದಿಗೆ ಪತ್ರಿಕೆಯು ಹೋರಾಟಕ್ಕೆ ಬೆಂಬಲವನ್ನು ಕೊಡುತ್ತಿದೆ.

ಸೌಜನ್ಯ ಪ್ರಕರಣ ಒಟ್ಟಾರೆಯಾಗಿ ಏನು, ಏನಾಗಿತ್ತು ಅಲ್ಲಿ, ಆಕೆಗಿಂತಲೂ ಹಿಂದೆ ಅದೇ ನೇತ್ರಾವತಿಯ ನಿಭಿಡ ಕಾಡುಗಳಲ್ಲಿ ಕಾಡ ಪೊದೆಗಳ ಬುಡಕ್ಕೆ ಆಹಾರವಾದವರು ಯಾರು? ಹಿಂದೆ ಅಲ್ಲಿ ಎನಾಗಿತ್ತು, ಈಗ ಏನಾಗುತ್ತಿದೆ……ಇಂತಹ ಹಲವು ಸಂಗತಿಗಳ ಜತೆಗೆ ಐತಿಹಾಸಿಕವಾಗಿ ಹೇಳುತ್ತಾ ಬಂದಿರುವ ಸುಳ್ಳುಗಳ ಅನಾವರಣದ ಕಥೆಯೇ – ಸೌಜನ್ಯ ಸೀಕ್ರೆಟ್ಸ್ ! ಬಿಳಿ ರಣಹದ್ದುಗಳಿವೆ ಎಚ್ಚರಿಕೆ !!!Sowjanya Secrets

ಈಗಾಗಲೇ ಬಹಳಷ್ಟು ಜನರಿಗೆ ಸತ್ಯ ಗೊತ್ತಿದ್ದರೂ, ಅಲ್ಲಲ್ಲಿ, ಹಲವಾರು ಯೂ ಟ್ಯೂಬ್ ಗಳ ಮೂಲಕ ಸತ್ಯದರ್ಶನವಾಗಿದ್ದರೂ, ಎಲ್ಲಾ ಕಥೆಯೂ ಸಮಗ್ರವಾಗಿ ಒಂದೇ ಕಡೆ ಧಾರಾವಾಹಿಗಳ ರೂಪದಲ್ಲಿ ಬರುತ್ತಿರುವುದು ಇದೇ ಮೊದಲು. ಸತ್ಯ ಅಪ್ರಿಯವಾಗಿರುತ್ತದೆ, ಆದರೆ ನಾವು ಸತ್ಯವನ್ನು ನಿಮಗೆ ಕಥೆಯ ರೂಪದಲ್ಲಿ ಹೇಳುವ ಕಾರಣದಿಂದ, ವಿಷಯ ಕಹಿಯಾದರೂ, ಓದು ಸರಾಗವಾಗಲಿದೆ. ನೀವೆಲ್ಲ ಇಷ್ಟಪಟ್ಟು ಓದುವಂತೆ ಕಥೆಯನ್ನು ನಿಮಗೆ ಕಟ್ಟಿ ಕೊಡಬೇಕೆನ್ನುವುದು ನಮ್ಮ ಉದ್ದೇಶ. ಇನ್ನು ಕೆಲವೇ ದಿನಗಳಲ್ಲಿ ಶುರುವಾಗಲಿದೆ ಈ ಕ್ರೈಮ್ ಸಸ್ಪೆನ್ಸ್ ಥ್ರಿಲ್ಲರ್ !!
ಓದಿದ ಖುಷಿಗಿಂತಲೂ, ಹೋರಾಟದ ಮನೋಭಾವ ನಿಮ್ಮಲ್ಲಿ ಮೂಡಿದರೆ, ಅಷ್ಟಕ್ಕೇ ನಮ್ಮ ಪ್ರಯತ್ನ ಧನ್ಯ !