Home News Coconut Rate: ಗಗನಕ್ಕೇರಿದ ತೆಂಗಿನಕಾಯಿ ದರ – ಗರಿ ರೋಗದಿಂದ ಕಡಿಮೆಯಾದ ತೆಂಗಿನಕಾಯಿ ಇಳುವರಿ

Coconut Rate: ಗಗನಕ್ಕೇರಿದ ತೆಂಗಿನಕಾಯಿ ದರ – ಗರಿ ರೋಗದಿಂದ ಕಡಿಮೆಯಾದ ತೆಂಗಿನಕಾಯಿ ಇಳುವರಿ

Hindu neighbor gifts plot of land

Hindu neighbour gifts land to Muslim journalist

Coconut Rate: ಮಳೇಗಾಲ ಆರಂಭವಾದರೂ ಎಳನೀರಿನ ಡಿಮ್ಯಾಂಡ್ ಕಮ್ಮಿಯಾಗಿಲ್ಲ. ಅದರ ಜೊತೆಗೆ ಕೊಬ್ಬರಿ ರೇಟ್ ಕೂಡ ದಿನಿಂದ ದಿನಕ್ಕೆ ಏರುತ್ತಲೇ ಇದೆ. ಇದೀಗ ಎಳನೀರು, ಕೊಬ್ಬರಿಗೆ ಭರ್ಜರಿ ರೇಟ್ ಬೆನ್ನಲ್ಲೆ ತೆಂಗಿನಕಾಯಿ ದರ ಕೂಡ ಗಗನಕ್ಕೇರಿದೆ. ಗರಿ ರೋಗದಿಂದಾಗಿ ತೆಂಗಿನಕಾಯಿ ಇಳುವರಿ ಕಡಿಮೆಯಾದ ಹಿನ್ನೆಲೆಯಲ್ಲಿ ತೆಂಗಿನಕಾಯಿ ದರ ಏರಿಕೆ ಕಂಡಿದೆ.

ಕೆಜಿ ತೆಂಗಿನಕಾಯಿ ದರ 65 ರಿಂದ 75 ಕ್ಕೆ ಏರಿಕೆ ಕಂಡಿದ್ದು, ಕಳೆದ‌ ಹತ್ತು ದಿನಗಳಿಂದ ಒಂದೇ ಬಾರಿ ತೆಂಗಿನಕಾಯಿ ದರ ಏರಿಕೆ ಕಂಡಿದೆ. ಯಶವಂತಪುರ ಎಪಿಎಂಸಿಯಲ್ಲಿ ಕೆಜಿ ತೆಂಗಿನಕಾಯಿ ದರ 75 ರೂ ಆದ್ರೆ, ತಳ್ಳುವ ಗಾಡಿಯಲ್ಲಿ ಒಂದು ತೆಂಗಿನಕಾಯಿ ದರ 60ರೂಗೆ ಏರಿದೆ. ಎಲ್ಲೆಡೆ ನುಸಿ ರೋಗ ಆವರಿಸಿರುವುದರಿಂದ ತೆಂಗಿನಕಾಯಿ ಇಳುವರಿ ಕುಸಿತ ಕಂಡಿದೆ.

ತಮಿಳುನಾಡು ಸೇರಿದಂತೆ, ಕನಕಪುರ, ಚನ್ನಪಟ್ಟಣ, ಅರಸಿಕೆರೆ, ತುಮಕೂರು ಭಾಗದಿಂದ ತೆಂಗಿನಕಾಯಿ ಬರ್ತಿದೆ. ಒಂದು ವೇಳೆ ಪಕ್ಕದ ರಾಜ್ಯ ತಮಿಳುನಾಡಿನಿಂದ ಬರ್ತಿರುವ ತೆಂಗನಕಾಯಿ ಕಡಿಮೆ ಆದ್ರೆ ಮತ್ತೆ ದರ ಏರಿಕೆ ಹೆಚ್ಚುವ ಸಾಧ್ಯತೆಯಿದೆ. ವರಮಹಾಲಕ್ಷ್ಮಿ ಹಬ್ಬದ ವೇಳೆ ತೆಂಗಿನಕಾಯಿ ದರ ಶತಕ ದಾಟುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ:Hosuru: ಶಾಲಾ ಬಸ್‌ ಮತ್ತು ಲಾರಿ ನಡುವೆ ಸಿಲುಕಿ ಆಟೋ ಅಪ್ಪಚ್ಚಿ: ಆಟೋ ಚಾಲಕ ಪಾರು