Home latest ಶತ್ರು ಸಂಹಾರಕ್ಕೆ ತಯಾರಾಗಿದ್ದ ಸೈನಿಕನಿಗೆ ಎದುರಾಯ್ತು ನಾಗರಹಾವು | ಮುಂದೆ ಆಗಿದ್ದು?

ಶತ್ರು ಸಂಹಾರಕ್ಕೆ ತಯಾರಾಗಿದ್ದ ಸೈನಿಕನಿಗೆ ಎದುರಾಯ್ತು ನಾಗರಹಾವು | ಮುಂದೆ ಆಗಿದ್ದು?

Hindu neighbor gifts plot of land

Hindu neighbour gifts land to Muslim journalist

ಸೈನಿಕನೊಬ್ಬ ಕಾಡಿನಲ್ಲಿ ಹೋಗುತ್ತಿರುವಾಗ ನಾಗರಹಾವು ತಲೆ ಎತ್ತಿ ನಿಂತಿದ್ದು ಈ ವೇಳೆ ವೀರ ಸೈನಿಕ ಅತ್ಯಂತ ಮಾರಕ ಹಾವಿಗೂ ಹೆದರದೆ ಆತ ಮಾಡಿದ ಕಾರ್ಯ ನೋಡಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ.

ಅಪಾಯಕಾರಿ ಹಾವು ತನ್ನ ಬಂದಾಗಲೂ ವೀರ ಯೋಧ ಕುಗ್ಗದೆ ಅದಕ್ಕೂ ಯಾವುದೇ ತೊಂದರೆಯನ್ನು ನೀಡದೆ ಹಿಡಿದಿದ್ದಾರೆ. ಈ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಭಾರತೀಯ ಸೇನೆಯ ಯೋಧನೊಬ್ಬ ತನ್ನ ಶತ್ರುಗಳ ವಿರುದ್ಧ ಹೋರಾಡಲು ತಯಾರಿ ನಡೆಸುತ್ತಾ ಕಾಡಿನಲ್ಲಿ ತೆವಳುತ್ತಾ ಹೋಗುತ್ತಿರುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು.

ವಿಡಿಯೋದಲ್ಲಿ ಇರುವಂತೆ, ಸೈನಿಕ ಗನ್ ಹಿಡಿದುಕೊಂಡು ಕಾಡಿನಲ್ಲಿ ತೆವಲುತ್ತಾ ಹೋಗುತ್ತಿರುವಾಗ ಸ್ವಲ್ಪ ಹೆಡೆ ಬಿಚ್ಚಿ ದಾಳಿಗೆ ಸಜ್ಜಾಗಿದ್ದ ನಾಗರ ಹಾವನ್ನು ನೋಡುತ್ತಾನೆ. ಅಷ್ಟಕ್ಕೂ ಎದೆಗುಂದದ ಆ ವೀರ ಸೈನಿಕ ಹಾವಿನ ತಲೆಯ ಮೇಲೆ ತನ್ನ ಕೈಯನ್ನು ಕೊಂಡೊಯ್ಯುತ್ತಾನೆ. ನಂತರ ನಿಧಾನವಾಗಿ ಕೈಯನ್ನು ಕೆಳಗೆ ತರುತ್ತಾ ಅದು ಮುಖವನ್ನು ಹಿಡಿಯುತ್ತಾನೆ. ತದನಂತರ ಒಂದು ಕೈಯಲ್ಲಿ ನಾಗರ ಹಾವು ಇನ್ನೊಂದು ಕೈಯಲ್ಲಿ ಬಂದೂಕನ್ನು ಹಿಡಿದುಕೊಂಡು ತೆವಲುತ್ತಲೇ ಮುಂದೆ ಸಾಗುವುದನ್ನು ನೋಡಬಹುದು. ಯಾವುದೇ ನಿರ್ಭೀತಿಯಿಂದ ಹಾವಿನ ತಲೆಯ ಮೇಲೆ ಕೈ ಹಾಕುವ ಆ ಸೈನಿಕನು ಹಾವು ಹಿಡಿಯುವ ತರಬೇತಿಯನ್ನೂ ಪಡೆದಿರುವಂತೆ ಕಾಣುತ್ತದೆ.

ವಿಡಿಯೋವನ್ನು official_viralclips ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ವೈರಲ್ ಪಡೆದಿದೆ. ಹಾವನ್ನು ಹಿಡಿಯುವ ಈ ಯೋಧನ ವಿಡಿಯೋ ಇತರೆ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ.