Home News Smruthi Mandana : ಸ್ಮೃತಿ ಮಂದಾನಾಗೆ ಮತ್ತೆ ಶಾಕ್ – ತಂದೆಯ ಬೆನ್ನಲ್ಲೇ ಬಾವಿ ಪತಿಗೂ...

Smruthi Mandana : ಸ್ಮೃತಿ ಮಂದಾನಾಗೆ ಮತ್ತೆ ಶಾಕ್ – ತಂದೆಯ ಬೆನ್ನಲ್ಲೇ ಬಾವಿ ಪತಿಗೂ ಅನಾರೋಗ್ಯ!!

Hindu neighbor gifts plot of land

Hindu neighbour gifts land to Muslim journalist

Smruthi Mandana : ಭಾರತದ ತಾರೆ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರ ಮನೆಯಲ್ಲಿ ಒಂದು ದುರಂತ ಘಟನೆ ನಡೆದಿದೆ. ಅವರ ತಂದೆಗೆ ಹೃದಯಾಘಾತವಾಗಿದ್ದು ಇದರಿಂದಾಗಿ ನಿನ್ನೆ ನಡೆಯಬೇಕಿದ್ದ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ವಿವಾಹವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಈ ಬೆನ್ನಲ್ಲೇ ಸ್ಮೃತಿ ಮಂದನಾಗಿ ಮತ್ತೆ ಶಾಕ್ ಎದುರಾಗಿದ್ದು ತಂದೆಯ ಬೆನ್ನಲ್ಲೇ ಬಾವಿಪತಿಗೂ ಕೂಡ ಆರೋಗ್ಯ ಕೈಕೊಟ್ಟಿದೆ.

ಹೌದು, ಇದೀಗ ಸ್ಮೃತಿ ಅವರ ಭಾವಿ ಪತಿ ಪಲಾಶ್ ಮುಚ್ಚಲ್ ಅವರ ಆರೋಗ್ಯ ಕೂಡ ಹದಗೆಟ್ಟಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು ಎಂದು ತಿಳಿದುಬಂದಿದೆ. ವೈರಲ್ ಸೋಂಕು ಮತ್ತು ಹೆಚ್ಚಿದ ಅಸಿಡಿಟಿಯಿಂದಾಗಿ ಪಲಾಶ್ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಹೋಗಬೇಕಾಯಿತು ಎಂದು NDTVಗೆ ಮೂಲಗಳು ದೃಢಪಡಿಸಿವೆ. ಆದಾಗ್ಯೂ, ಸಮಸ್ಯೆ ಗಂಭೀರವಾಗಿರಲಿಲ್ಲ. ಚಿಕಿತ್ಸೆ ಪಡೆದ ನಂತರ, ಪಲಾಶ್ ಈಗಾಗಲೇ ಆಸ್ಪತ್ರೆಯಿಂದ ಹೋಟೆಲ್‌ಗೆ ತೆರಳಿದ್ದಾರೆ ಎನ್ನಲಾಗಿದೆ.

ಇನ್ನೂ ಪ್ರಸ್ತುತ, ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಅವರ ವಿವಾಹ ಸಂಭ್ರಮವು ಅವರ ತವರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆಯುತ್ತಿದೆ. ಮೂರು ದಿನಗಳಿಂದ ಸಾಂಗ್ಲಿಯಾದ್ಯಂತ ಸಡಗರ ಮನೆ ಮಾಡಿದೆ. ಶನಿವಾರ ರಾತ್ರಿ ಹಲ್ದಿ ಕಾರ್ಯಕ್ರಮವೂ ಕೊನೆಗೊಂಡಿತು. 2019 ರಿಂದ ಪ್ರೀತಿಸುತ್ತಿದ್ದ ದಂಪತಿಗಳು ಮದುವೆಯಾಗಲು ಮತ್ತು ತ್ರಿಕೋನ ಬಂಧದೊಂದಿಗೆ ಒಂದಾಗಲು ತಡವಾಗಿದೆ ಎಂದು ಭಾವಿಸಿದಾಗ ಈ ದುರಂತ ಘಟನೆ ನಡೆದಿದೆ. ಇದು ಎಲ್ಲರನ್ನೂ ಆಘಾತಕ್ಕೆ ದೂಡಿದೆ.