Home News Sleepr Bus: ಕರ್ನೂಲ್ ಬಸ್ ದುರಂತ ಎಫೆಕ್ಟ್ – ದೇಶಾದ್ಯಂತ ಸ್ಲೀಪರ್ ಬಸ್ ಬ್ಯಾನ್?

Sleepr Bus: ಕರ್ನೂಲ್ ಬಸ್ ದುರಂತ ಎಫೆಕ್ಟ್ – ದೇಶಾದ್ಯಂತ ಸ್ಲೀಪರ್ ಬಸ್ ಬ್ಯಾನ್?

Hindu neighbor gifts plot of land

Hindu neighbour gifts land to Muslim journalist

Sleepur Bus: ಸ್ಲೀಪರ್ ಬಸ್ಗಳಲ್ಲಿ ದಿನದಿಂದ ದಿನಕ್ಕೆ ಆಗುತ್ತಿರುವ ಅಪಘಾತಗಳನ್ನು, ಅಗ್ನಿ ಅವಘಡಗಳನ್ನು ಗಮನಿಸಿರುವ ಜನರು ದೇಶಾದ್ಯಂತ ಸ್ಲೀಪರ್ ಬಸ್ ಗಳನ್ನು ಬ್ಯಾನ್ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ

ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ಸ್ಲೀಪರ್ ಬಸ್ ಒಂದು ಬೆಂಕಿಗೆ ಆಹುತಿಯಾಗಿ ಇಪ್ಪತ್ತಕ್ಕೂ ಹೆಚ್ಚು ಜನರು ಜೀವಂತ ಸುಟ್ಟು ಬಸ್ಮವಾದ ಘಟನೆ ಎಂದಿಗೂ ಮರೆಯಲು ಅಸಾಧ್ಯ. ಇದರ ಬೆನ್ನಲ್ಲೇ ರಾಜಸ್ಥಾನದ ಜೈಪುರ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಅಪಘಾತದಲ್ಲಿ ಮೂವರು ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಇದೀಗ ಈ ಬೆನ್ನಲ್ಲೇ ಈ ಘಟನೆಯಿಂದ ಎಚ್ಚೆತ್ತಿರುವ ಕೆಲವು ಸಂಘಟನೆಗಳು ಸ್ಲೀಪರ್ ಬಸ್ ಗಳನ್ನು ಬ್ಯಾನ್ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಹೌದು, ಖಾಸಗಿ ಟ್ರಾವೆಲ್ ಬಸ್‌ಗಳಲ್ಲಿ ಸಂಭವಿಸುವ ಸರಣಿ ಅಪಘಾತಗಳ ಹಿನ್ನೆಲೆಯಲ್ಲಿ, ಜನರು ಪ್ರಯಾಣಿಸಲು ಭಯಪಡುತ್ತಿದ್ದಾರೆ. ಆದರೆ ಸರ್ಕಾರಗಳು ಈ ಘಟನೆಗಳ ಬಗ್ಗೆ ಏಕೆ ಗಮನ ಹರಿಸುತ್ತಿಲ್ಲ?.. ಮಾಲೀಕರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಸುರಕ್ಷತಾ ಕ್ರಮಗಳನ್ನು ಏಕೆ ತೆಗೆದುಕೊಳ್ಳುತ್ತಿಲ್ಲ? ಎಂಬ ಪ್ರಶ್ನೆಗಳು ಎದ್ದಿವೆ.. ಈ ಸಂದರ್ಭದಲ್ಲಿ, ಇಂಡಿಯನ್ ಆಯಿಲ್‌ನ ಮಾಜಿ ಅಧ್ಯಕ್ಷ ಶ್ರೀಕಾಂತ್ ಎಂ ವೈದ್ಯ ಅವರು ದೇಶದಲ್ಲಿ ಸ್ಲೀಪರ್ ಬಸ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಈ ಬಗ್ಗೆ ಶ್ರೀಕಾಂತ್ ಎಂ ವೈದ್ಯ ಲಿಂಕ್ಡ್‌ಇನ್‌ನಲ್ಲಿ ಮಾತನಾಡಿ, “ಭಾರತದಲ್ಲಿ ಸ್ಲೀಪರ್ ಬಸ್‌ಗಳು ಅನೇಕ ಕುಟುಂಬಗಳ ಜೀವನವನ್ನು ನಾಶಮಾಡಿವೆ. ಕಳೆದ ಕೆಲವು ವರ್ಷಗಳಲ್ಲಿ ಸಂಭವಿಸಿದ ಬೆಂಕಿ ಅಪಘಾತಗಳ ಸರಣಿ ಇದಕ್ಕೆ ಪುರಾವೆಯಾಗಿದೆ. ಇದು ಸಂಪೂರ್ಣವಾಗಿ ಬೇಜವಾಬ್ದಾರಿ ಬಸ್ ವಿನ್ಯಾಸದ ಪರಿಣಾಮವಾಗಿದೆ.. ಇತ್ತೀಚೆಗೆ, ಬಸ್ ಅಪಘಾತಗಳಲ್ಲಿ 41 ಜನರು ಸಾವನ್ನಪ್ಪಿದ್ದಾರೆ. ಕರ್ನೂಲ್‌ನಲ್ಲಿ 19 ಮತ್ತು ರಾಜಸ್ಥಾನದ ಗ್ರಾಮೀಣ ಪ್ರದೇಶದಲ್ಲಿ 20 ಜನರು. ಕಳೆದ 10 ವರ್ಷಗಳಲ್ಲಿ, ಸ್ಲೀಪರ್ ಬಸ್‌ಗಳಲ್ಲಿ ಸಂಭವಿಸಿದ ಬೆಂಕಿ ಅಪಘಾತಗಳಲ್ಲಿ 130 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇದು ದುರದೃಷ್ಟವಲ್ಲ. ಇದು ದೊಡ್ಡ ವಿನ್ಯಾಸ ದೋಷ. ಸ್ಲೀಪರ್ ಬಸ್‌ಗಳು ಜನದಟ್ಟಣೆ, ಅಕ್ರಮ ವಿದ್ಯುತ್ ಸಂಪರ್ಕಗಳು ಮುಂತಾದ ಹಲವಾರು ಕಾರಣಗಳಿಂದ ಪ್ರಯಾಣಿಕರನ್ನು ಅಪಾಯಕ್ಕೆ ಸಿಲುಕಿಸುತ್ತಿವೆ. ಭಾರತದಲ್ಲಿ ಪ್ರಸ್ತುತ ರೂಪದಲ್ಲಿ ಸ್ಲೀಪರ್ ಬಸ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸುವುದು ಒಂದೇ ಪರಿಹಾರ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.