Home News Vijayapura: ಪಹಣಿಯಲ್ಲಿ ವಕ್ಫ್‌ ಹೆಸರು ಹಾಕಿದ ಜಿಲ್ಲಾಧಿಕಾರಿಗೆ ರೈತರಿಂದ ʼಸ್ಲೀಪ್‌ ಟಾರ್ಚರ್‌ʼ !

Vijayapura: ಪಹಣಿಯಲ್ಲಿ ವಕ್ಫ್‌ ಹೆಸರು ಹಾಕಿದ ಜಿಲ್ಲಾಧಿಕಾರಿಗೆ ರೈತರಿಂದ ʼಸ್ಲೀಪ್‌ ಟಾರ್ಚರ್‌ʼ !

Hindu neighbor gifts plot of land

Hindu neighbour gifts land to Muslim journalist

Vijayapura: ತಾತ ಮುತ್ತಾತನ ಕಾಲದಿಂದಲೂ ತಮ್ಮ ಪಾಲಿಗೆ ಬಂದ ಜಮೀನಿನಲ್ಲಿ ನೆಮ್ಮದಿಯಿಂದ ಉಳುಮೆ ಮಾಡಿಕೊಂಡು ಬದುಕುತ್ತಿದ್ದ ರೈತರ ಪಹಣಿಯಲ್ಲಿ ವಕ್ಫ್‌ ಹೆಸರನ್ನು ಓರ್ವ ಸಚಿವರೊಬ್ಬರ ಸೂಚನೆಯ ಮೇರೆಗೆ ಸೇರಿಸಿದ್ದ ವಿಜಯಪುರ ಜಿಲ್ಲಾಧಿಕಾರಿಗೆ ಅಲ್ಲಿನ ರೈತರು ಸ್ಲೀಪ್‌ ಟಾರ್ಚರ್‌ ನೀಡಿರುವ ಕುರಿತು ವರದಿಯಾಗಿದೆ.

ವಿಜಯಪುರ ಡಿಸಿ ಆಫೀಸ್‌ ಎದುರು ರೈತರು ವಕ್ಫ್‌ ಸರ್ವೆ ವಿರೋಧಿಸಿ ಕರಾಳ ದೀಪಾವಳಿ ಆಚರಣೆ ಮಾಡಿದ್ದಾರೆ. ಪೊಲೀಸರು ರೈತರಲ್ಲಿ ಪ್ರತಿಭಟನೆ ಬಿಡುವಂತೆ ಭಾರೀ ಮನವೊಲಿಕೆ ಮಾಡಿದ್ದಾದರೂ ಯಾವುದೇ ಪ್ರಯೋಜನವಾಗಲಿಲ್ಲ.

ಪೊಲೀಸ್‌ vs ರೈತರ ನಡುವೆ ಡಿಸಿ ಕಚೇರಿ ಎದುರು ಭಾರೀ ದೊಡ್ಡ ಹೈಡ್ರಾಮವೇ ನಡೆದಿದ್ದು, ಹೀಗಾಗಿ ಜಿಲ್ಲಾಧಿಕಾರಿ ಕಚೇರಿಯ ಬಾಗಿಲನ್ನು ಮಧ್ಯರಾತ್ರಿಯೇ ತೆರೆಯಲಾಗಿದೆ.

ಡಿಸಿ ಕಚೇರಿಯಿಂದ ತಂದ ರೈತರ ಪಹಣಿಯಿಂದ ವಕ್ಫ್‌ ಹೆಸರು ಕೈ ಬಿಡಲು ಮಾಡಿದ ಆದೇಶ ಪ್ರತಿಯನ್ನು ತೋರಿಸಿದರೂ ರೈತರು ತಮ್ಮ ಪ್ರತಿಭಟನೆ ನಿಲ್ಲಿಸಿದೆ, ಈ ಆದೇಶ ಪ್ರತಿಯನ್ನು ನೀವೇ ಇಟ್ಟುಕೊಳ್ಳಿ, ಪಹಣಿಯಿಂದ ವಕ್ಫ್‌ ಹೆಸರು ಕೈಬಿಟ್ಟ ದಾಖಲೆಯನ್ನು ತೋರಿಸಿ ಎಂದು ಪಟ್ಟು ಹಿಡಿದು ಕುಳಿತುಬಿಟ್ಟರು.

ಈ ಸಂದರ್ಭದಲ್ಲಿ ರೈತರು ಹಾಗೂ ಪೊಲೀಸರ ನಡುವೆ ಭಾರೀ ಮಟ್ಟದಲ್ಲಿ ಮಾತಿನ ಚಕಮಕಿ ನಡೆದಿದೆ. ನಂತರ ಸ್ಥಳಕ್ಕೆ ಬಂದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆನ್ನೂರು, ಪ್ರತಿಭಟನೆಯನ್ನು ಕೈಬಿಡಲು ಸೂಚಿಸಿದದಾರೆ. ಆದರೆ ಎಡಿಸಿ ಮಾತಿಗೂ ರೈತರು ಜಗ್ಗಲಿಲ್ಲ. ಪಹಣಿಯಿಂದ ವಕ್ಫ್‌ ಹೆಸರು ಕೈ ಬಿಡಲು ಇಂಡಿ ಎ.ಸಿ. ಮಾಡಿದ ಆದೇಶ ಪ್ರತಿಯನ್ನು ರೈತರಿಗೆ ಎಡಿಸಿ ತೋರಿಸಿದ್ದಾರೆ. ಆದರೆ ರೈತರು ಅಲ್ಲಿ ಕೂಡಾ ತೋರಿಸೋದಾದರೆ ಪಹಣಿಯಲ್ಲಿ ವಕ್ಫ್‌ ಹೆಸರು ತೆಗೆದಿರೋ ದಾಖಲೆ ತೋರಿಸಿ, ಇದೆಲ್ಲ ಬೇಡ , ನಮ್ಮ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಗಲಾಟೆ ಮಾಡಿದ್ದಾರೆ.

ಅಲ್ಲದೇ ಮಧ್ಯರಾತ್ರಿ ಅಲ್ಲಿ ನೆರೆದಿದ್ದ ಎಲ್ಲಾ ರೈತರು ಡಿಸಿ ಕಚೇರಿ ಬಾಗಿಲಿನ ಎದುರಿನಲ್ಲಿಯೇ ಹಾಸಿಗೆ ಹಾಕಿ ಮಲಗಿದ್ದಾರೆ. ನಂತರ ಪೊಲೀಸರು ಪ್ರತಿಭಟನೆಯ ಸ್ಥಳ ಬದಲಾಯಿಸಲು ಸೂಚಿಸಿದ್ದಾರೆ. ಆದರೆ ರೈತರು ಬೆಳಗ್ಗೆ 6 ಗಂಟೆಯವರೆಗೆ ಇಲ್ಲಿಂದ ತೆರಳಲ್ಲ ಎಂದು ಪಟ್ಟು ಹಿಡಿದು ಕೂತು ಬಿಟ್ಟಿದ್ದರು. ಪೊಲೀಸರ ಒತ್ತಡಕ್ಕೆ ರೈತರು ಎಳ್ಳಷ್ಟೂ ಜಗ್ಗಲಿಲ್ಲ