Home News Dharmasthala Case: ಹಿಟಾಚಿ ಮೂಲಕ ಉತ್ಖನನ ಆರಂಭಿಸಿದ SIT, ಮೊದಲ ಪಾಯಿಂಟ್‌ನಲ್ಲೇ ಮತ್ತೆ ಅಗೆತ

Dharmasthala Case: ಹಿಟಾಚಿ ಮೂಲಕ ಉತ್ಖನನ ಆರಂಭಿಸಿದ SIT, ಮೊದಲ ಪಾಯಿಂಟ್‌ನಲ್ಲೇ ಮತ್ತೆ ಅಗೆತ

Hindu neighbor gifts plot of land

Hindu neighbour gifts land to Muslim journalist

Dharmasthala Case: ಮಾಸ್ಕ್‌ ಮ್ಯಾನ್‌ ಜುಲೈ 28 ರಂದು ನಡೆದ ಸ್ಥಳ ಮಹಜರು ವೇಳೆ ನೇತ್ರಾವತಿ ನದಿ ದಡದ 13 ಸ್ಥಳಗಳನ್ನು ಗುರುತಿಸಿದ್ದು, ಸದ್ಯ ಗುರುತು ಮಾಡಿದ ಸ್ಥಳದಲ್ಲಿ ಉತ್ಖನನ ಆರಂಭ ಮಾಡಿರುವ ಎಸ್‌ಐಟಿಗೆ ಯಾವುದೇ ಕಳೇಬರಹ ದೊರಕಿಲ್ಲ ಎನ್ನಲಾಗಿದೆ.

ಆದರೆ ಮಾಸ್ಕ್‌ ಮ್ಯಾನ್‌ ಇದೇ ಸ್ಥಳದಲ್ಲಿ ಶವ ಇದೆ ಎಂದು ಸ್ಪಷ್ಟವಾಗಿ ಹೇಳುತ್ತಿರುವುದರಿಂದ ಇನ್ನಷ್ಟು ಆಳವಾಗಿ ಹಾಗೂ ಅಕ್ಕಪಕ್ಕದ ಸ್ಥಳವನ್ನು ಅಗೆಯಲು ಎಸ್‌ಐಟಿ ನಿರ್ಧಾರ ಮಾಡಿದ್ದು, ಹಾಗಾಗಿ ಹಿಟಾಚಿ ಮೂಲಕ ಕಾರ್ಯಾಚರಣೆಗೆ ಮುಂದಾಗಿದ್ದು, ಘಟನಾ ಸ್ಥಳಕ್ಕೆ ಹಿಟಾಚಿ ಬಂದಿದೆ.

ಮೊದಲನೇ ಮಾರ್ಕಿಂಗ್‌ ಜಾಗದಲ್ಲೇ ಕ್ಲಿಯರ್‌ ಆಗಿ ಅಗೆಯಲು ಸೂಚಿಸಲಾಗಿದೆ. ಎರಡು ಹಾಗೂ ಮೂರನೇ ಪಾಯಿಂಟ್‌ಗಳನ್ನು ಅಗೆಯಲು ಹೋಗಿಲ್ಲ. ಒಂದನೇ ಪಾಯಿಂಟ್‌ ಜಾಗದಲ್ಲೇ ಆಳವಾಗಿ ಅಗೆದು, 12 ಅಡಿ ಆಳವಾದರೂ ಅಗೆಯುವ ಪ್ಲ್ಯಾನ್‌ ಮಾಡಲಾಗಿದೆ.

ಮಾಸ್ಕ್‌ಮ್ಯಾನ್‌ ಹೇಳುವವರೆಗೂ ಮತ್ತಷ್ಟು ಅಡಿ ಉತ್ಖನನ ಮಾಡಲು ಹಿಟಾಚಿ ಮೂಲಕ ಕಾರ್ಯ ನಡೆಯಲಿದೆ.

ಇದನ್ನೂ ಓದಿ: Covid vaccination: ಕೋವಿಡ್-19 ಲಸಿಕೆಗಳು – ವಿಶ್ವದಾದ್ಯಂತ ಸುಮಾರು 25.33 ಲಕ್ಷ ಜನರ ಜೀವಗಳನ್ನು ಉಳಿಸಿವೆ: ಅಧ್ಯಯನ