Home News ಸರ್ ಮತಪಟ್ಟಿ ಪರಿಷ್ಕರಣೆ: ಉತ್ತಮ ಬಿಎಲ್‌ಒಗೆ ಸಿನಿಮಾ ಟಿಕೆಟ್, ಸಫಾರಿ ಇನ್ನಿತರ ಬಂಪರ್ ಆಫರ್!

ಸರ್ ಮತಪಟ್ಟಿ ಪರಿಷ್ಕರಣೆ: ಉತ್ತಮ ಬಿಎಲ್‌ಒಗೆ ಸಿನಿಮಾ ಟಿಕೆಟ್, ಸಫಾರಿ ಇನ್ನಿತರ ಬಂಪರ್ ಆಫರ್!

Hindu neighbor gifts plot of land

Hindu neighbour gifts land to Muslim journalist

ಲಕ್ನೋ: ಸರ್ ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಶೀಲನೆ (ಎಸ್‌ಐಆರ್)ಯಲ್ಲಿ ಮತದಾರರಿಗೆ ಅರ್ಜಿ ತಲುಪಿಸಲು ಉತ್ತಮ ಕಾಠ್ಯಕ್ಷಮತೆ ತೋರುವ ಬಿಎಲ್‌ಒಗಳಿಗೆ ಬಹುಮಾನ ನೀಡುವುದಾಗಿ ಉತ್ತರಪ್ರದೇಶದ ಪಿಲಿಭೀತ್ ಜಿಲ್ಲಾ ಡಳಿತ ಘೋಷಿಸಿದೆ.

ಗರಿಷ್ಠ ಪ್ರಮಾಣದ ಡಿಜಿಟಲ್ ಫಾರ್ಮ್ ಭರ್ತಿ ಮಾಡುವ ಬಿಎಲ್‌ಒಗೆ ಸಫಾರಿ ಮಾಡಲು ಟಿಕೆಟ್, ಕುಟುಂಬಕ್ಕೆ ಭೋಜನ ಕೂಟ, ಸಿನಿಮಾ ಟಿಕೆಟ್ ಮುಂತಾಗಿ ನೀಡುವುದಾಗಿ ಅಲ್ಲಿನ ಜಿಲ್ಲಾಡಳಿತ ಘೋಷಿಸಲಾಗಿದೆ. ಜತೆಗೆ ಪ್ರಶಂಸಾ ಪತ್ರವನ್ನೂ ನೀಡುವುದಾಗಿ ಅದು ಹೇಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪರಿಷ್ಕರಣೆ ಮಾಡುವ ಗುರಿಯನ್ನು ಹಾಕಿಕೊಂಡಿದೆ ಜಿಲ್ಲಾಡಳಿತ.