Home News D K Suresh: ಮುಂದಿನ ಚುನಾವಣೆಗಳಿಗೆಲ್ಲಾ ಸಿದ್ದರಾಮಯ್ಯನವರದ್ದೇ ನೇತೃತ್ವ, ಅಧಿಕಾರ ಹಸ್ತಾಂತರ ಊಹಾಪೋಹ – ಡಿಕೆ...

D K Suresh: ಮುಂದಿನ ಚುನಾವಣೆಗಳಿಗೆಲ್ಲಾ ಸಿದ್ದರಾಮಯ್ಯನವರದ್ದೇ ನೇತೃತ್ವ, ಅಧಿಕಾರ ಹಸ್ತಾಂತರ ಊಹಾಪೋಹ – ಡಿಕೆ ಸುರೇಶ್ ಅಚ್ಚರಿ ಹೇಳಿಕೆ

Hindu neighbor gifts plot of land

Hindu neighbour gifts land to Muslim journalist

D K Suresh : ಮುಂದಿನ ಎಲ್ಲಾ ಚುನಾವಣೆಗಳು ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆಯಲಿದೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಅವರು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಎಷ್ಟು ದಿನ ಮುಖ್ಯಮಂತ್ರಿಯಾಗಿ ಇರುತ್ತಾರೋ ಅಷ್ಟೂ ದಿನ ಅವರೇ ಮುಖ್ಯಮಂತ್ರಿ, ನಾಯಕತ್ವ ಬದಲಾವಣೆ, ಅಧಿಕಾರ ಹಸ್ತಾಂತರ ವಿಚಾರವಾಗಿ ನಡೆಯುತ್ತಿರುವ ಚರ್ಚೆಗಳೆಲ್ಲವೂ ಊಹಾಪೋಹ. ಮಾಧ್ಯಮಗಳಲ್ಲಿನ ಚರ್ಚೆಗಳು ಪಕ್ಷದ ಮುಂದೆ ಇಲ್ಲ. ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಅವರ ನೇತೃತ್ವದಲ್ಲೇ ಪಕ್ಷ ಕಟ್ಟುತ್ತಿದ್ದೇವೆ’ ಎಂದರು.

ಅಲ್ಲದೆ ಸಿದ್ದರಾಮಯ್ಯ ಅವರಿಗೆ ವಯಸ್ಸಾಗಿಲ್ಲ.ಮುಂದಿನ ಎಲ್ಲಚುನಾವಣೆಗಳು ಅವರ ನೇತೃತ್ವದಲ್ಲೇ ನಡೆಯಲಿವೆ. ಮುಂದೆಯೂ ಅವರೇ ಮುಖ್ಯಮಂತ್ರಿಯಾಗಿರಬಹುದು’ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.