Home News C M Siddaramaiah: ಪ್ರಧಾನಿ ಮೋದಿಯನ್ನು ಎದುರಿಸು ತಾಕತ್ತು ಇಡೀ ದೇಶದಲ್ಲಿ ಇರೋದು ಆ ಒಬ್ಬ...

C M Siddaramaiah: ಪ್ರಧಾನಿ ಮೋದಿಯನ್ನು ಎದುರಿಸು ತಾಕತ್ತು ಇಡೀ ದೇಶದಲ್ಲಿ ಇರೋದು ಆ ಒಬ್ಬ ನಾಯಕನಿಗೆ ಮಾತ್ರ ಎಂದ ಸಿದ್ದರಾಮಯ್ಯ – ಯಾರದು?

Hindu neighbor gifts plot of land

Hindu neighbour gifts land to Muslim journalist

C M Siddaramaiah: ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸಲು ಇಡೀ ದೇಶದಲ್ಲಿ ಸಮರ್ಥರಾದ ನಾಯಕರೆಂದರೆ ಅವರೊಬ್ಬರು ಮಾತ್ರ. ಬೇರೆ ಯಾರಿಂದಲೂ ಮೋದಿಯನ್ನು ಮಣಿಸಲು ಸಾಧ್ಯವಿಲ್ಲ ಎಂದ ಸಿಎಂ ಸಿದ್ದರಾಮಯ್ಯನವರು(CM Siddaramaiah) ಹೇಳಿದ್ದಾರೆ. ಹಾಗಿದ್ದರೆ ಯಾರವರು?

ಹೌದು, ದೇಶದಲ್ಲಿ ಪ್ರಧಾನಿ ಮೋದಿಯನ್ನು(PM Modi) ಮಣಿಸುವ ಏಕೈಕ ನಾಯಕನೆಂದರೆ ಅದು ರಾಹುಲ್ ಗಾಂಧಿ(Rahul Gandhi). ಬೇರೆ ಯಾರಿಂದಲೂ ಅದು ಸಾಧ್ಯವಿಲ್ಲ. ಹೀಗಾಗಿ ರಾಹುಲ್ ಗಾಂಧಿ ಯವರು ವಿಪಕ್ಷ ನಾಯಕ(Opposition Leader) ಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ನರೇಂದ್ರ ಮೋದಿಯವರನ್ನು ಎದುರಿಸಲು ರಾಹುಲ್ ಗಾಂಧಿ ಸೂಕ್ತ ವ್ಯಕ್ತಿ. ರಾಹುಲ್ ಗಾಂಧಿಯವರು ಲೋಕಸಭಾ ವಿರೋಧ ಪಕ್ಷದ ಸ್ಥಾನವನ್ನು ಸ್ವೀಕರಿಸಬೇಕು, ಬಿಜೆಪಿ ಹಾಗೂ ನರೇಂದ್ರ ಮೋದಿ ಯವರನ್ನು ಎದುರಿಸಬೇಕಾದರೆ ನೀವೇ ವಿರೋಧಪಕ್ಷದ ನಾಯಕರಾಗಬೇಕೆಂದು ಕಾರ್ಯಕಾರಿಣಿ ಸಮಿತಿ ಹಾಗೂ ನಾನೂ ಒತ್ತಾಯ ಮಾಡಿದ್ದೆ. ಹೀಗಾಗಿ ರಾಹುಲ್ ವಿಪಕ್ಷನಾಯಕನಾಗಲು ನಾನೇ ಕಾರಣ. ರಾಹುಲ್ ಗಾಂಧಿ ಯವರು ಈ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು. ನಾನು ಅವರಿಗೆ ತುಂಬಿ ಹೃದಯದ ಅಭಿನಂದನೆಗಳನ್ನು ತಿಳಿಸಬಯಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.