Home News Yatindra : ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದು ರಾಜ್ಯಕ್ಕೆ, ಕಾಂಗ್ರೆಸ್ ಗೆ ಅನಿವಾರ್ಯ – ಮತ್ತೊಂದು ವಿವಾದ...

Yatindra : ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದು ರಾಜ್ಯಕ್ಕೆ, ಕಾಂಗ್ರೆಸ್ ಗೆ ಅನಿವಾರ್ಯ – ಮತ್ತೊಂದು ವಿವಾದ ಎಬ್ಬಿಸಿದ ಯತೀಂದ್ರ

Hindu neighbor gifts plot of land

Hindu neighbour gifts land to Muslim journalist

Yatindra: ಸಿದ್ದರಾಮಯ್ಯ ಅವರು ರಾಜಕೀಯದ ಕೊನೆಗಾಲದಲ್ಲಿದ್ದಾರೆ ಎಂದು ಹೇಳಿರುವ ಮೂಲಕ ರಾಜ್ಯದಲ್ಲಿ ವಿವಾದವನ್ನು ಎಬ್ಬಿಸಿದ್ದ ಯತಿಂದ್ರ ಸಿದ್ದರಾಮಯ್ಯ ಅವರು ಇದೀಗ ಮತ್ತೊಂದು ಹೇಳಿಕೆ ನೀಡುವುದರ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಹೌದು, ಮೈಸೂರಿನಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಅವರು, ಸಿದ್ದರಾಮಯ್ಯ (CM Siddaramaiah) ಸಿಎಂ ಆಗಿರುವುದು ರಾಜ್ಯಕ್ಕೆ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಅನಿವಾರ್ಯ. ರಾಜ್ಯಕ್ಕೆ ಸಿದ್ದರಾಮಯ್ಯ ಸಿಎಂ ಆಗಿರುವುದು ಅನಿವಾರ್ಯ. ಬಹುತೇಕ ಕಾಂಗ್ರೆಸ್ ಪಕ್ಷದ ಶಾಸಕರ ಅಭಿಪ್ರಾಯ ಇದೇ ಆಗಿದೆ. ಶಾಸಕರು, ಸಚಿವರು ಎಲ್ಲರೂ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಇರಬೇಕು ಎಂದಿದ್ದಾರೆ.

ಯಾರೇ ಸಿಎಂ ಆಗಬೇಕಾದರೂ ಹೈಕಮಾಂಡ್ ಒಪ್ಪಿಗೆ ಬೇಕು. ಸಿದ್ದರಾಮಯ್ಯ ಮುಂದುವರಿಯಬೇಕಾದರೂ ಕೂಡ ಒಪ್ಪಿಗೆ ಅನಿವಾರ್ಯ . ಮಾತನ್ನ ನನ್ನ ತಂದೆ ಸಿದ್ದರಾಮಯ್ಯ ಹಲವು ಬಾರಿ ಹೇಳಿದ್ದಾರೆ ಎಂದು ನುಡಿದ ಯತೀಂದ್ರ, ರಾಜ್ಯದಲ್ಲಿ ಮುನಿಯಪ್ಪ ಸಿಎಂ ಆಗುವ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಮಂದಿ ಆಕಾಂಕ್ಷಿಗಳಿದ್ದಾರೆ. ಅವರೆಲ್ಲರಿಗೂ ಸಿಎಂ ಆಗಬೇಕು ಅನ್ನೋ ಆಸೆ ಇದೆ. ಅದನ್ನ ನಾವು ತಪ್ಪು ಅಂತ ಹೇಳಲು ಸಾಧ್ಯವಿಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ. ಇದೀಗ ಯತೀಂದ್ರ ಅವರ ಹೊಸ ಹೇಳಿಕೆ ಮತ್ತೆ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ.