Home News Lions Club: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ – ಲಯನ್ಸ್ ಕ್ಲಬ್‌ನಿಂದ...

Lions Club: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ – ಲಯನ್ಸ್ ಕ್ಲಬ್‌ನಿಂದ ಅಡಿಕೆ ತೋಟದ ಶುಚಿತ್ವ

Hindu neighbor gifts plot of land

Hindu neighbour gifts land to Muslim journalist

Lions Club: ಲಯನ್ಸ್ ಕ್ಲಬ್ ಸುಳ್ಯ, ಶ್ರೀ ವಿಷ್ಣು ಯುವಕ ಮಂಡಲ ಕೊಡಿಯಾಲಬೈಲು, ಶ್ರೀ ವರಲಕ್ಷ್ಮಿ ಯುವತಿ ಮಂಡಲ ಕೊಡಿಯಾಲಬೈಲು ಇವುಗಳ ಸಹಭಾಗಿತ್ವದಲ್ಲಿ ಉಬರಡ್ಕ ಮಿತ್ತೂರು ಗ್ರಾಮದ ಕೊಡಿಯಾಲಬೈಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.03 ರಂದು ಸಾರ್ವಜನಿಕ ಶ್ರಮದಾನ ನಡೆಸಲಾಯ್ತು.

ಲಯನ್ಸ್ ಕ್ಲಬ್ ವತಿಯಿಂದ ನಿರ್ಮಿಸಲಾದ ಅಡಿಕೆ ತೋಟವನ್ನು ಶುಚಿತ್ವಗೊಳಿಸುವುದರೊಂದಿಗೆ ಶಾಲಾ ಸುತ್ತಲೂ ಶುಚಿತ್ವಗೊಳಿಸಲಾಯಿತು.

ಶ್ರಮದಾನದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಮತ್ತು ಸರ್ವ ಸದಸ್ಯರು, ಶ್ರೀವಿಷ್ಣು ಯುವಕ ಮಂಡಲದ ಅಧ್ಯಕ್ಷ ರಾಧಾಕೃಷ್ಣ ಬೇರ್ಪಡ್ಕ ಮತ್ತು ಸರ್ವ ಸದಸ್ಯರುಗಳು, ಶ್ರೀವರಲಕ್ಷ್ಮೀ ಯುವತಿ ಮಂಡಲ ಅಧ್ಯಕ್ಷೆ ಪದ್ಮಾವತಿ ಕೊಡಿಯಾಲಬೈಲು ಹಾಗೂ ಸರ್ವ ಸದಸ್ಯರುಗಳು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ಬೇಬಿ, ಹಾಗು ಸರ್ವ ಸದಸ್ಯರುಗಳು, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪುರುಷೋತ್ತಮ ಅಮೈ,ಹಾಗೂ ಸರ್ವಸದಸ್ಯರು,ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸವಿತಾ ಹಾಗೂ ಸಹ ಶಿಕ್ಷಕರು ಶ್ರಮದಾನದಲ್ಲಿ ಭಾಗವಹಿಸಿದರು.