

Indian Railway : ರೈಲ್ವೆ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆಯು ಶಾಕಿಂಗ್ ನ್ಯೂಸ್ ನೀಡಿದ್ದು, ಇನ್ಮುಂದೆ ಲಗೇಜ್ ಕೊಂಡು ಹೋದರೆ ಶುಲ್ಕವನ್ನು ಹಾಕಲಾಗುವುದು ಎಂದು ಇಲಾಖೆಯು ತಿಳಿಸಿದೆ.
ಹೌದು, ಪ್ರಯಾಣಿಕರು ತಮ್ಮ ರೈಲು ಪ್ರಯಾಣದ ಸಮಯದಲ್ಲಿ ನಿಗದಿತ ಲಗೇಜ್ ಮಿತಿಗಿಂತ ಹೆಚ್ಚಿನದನ್ನು ಸಾಗಿಸಿದರೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ರೈಲ್ವೆ ಸ್ಪಷ್ಟಪಡಿಸಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಈ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದು, ರೈಲು ಪ್ರಯಾಣದ ಲಗೇಜ್ ಮಿತಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಯಾಣಿಕರಿಗೆ ಅವರ ವರ್ಗದ ಆಧಾರದ ಮೇಲೆ ಈಗಾಗಲೇ ನಿಗದಿತ ಉಚಿತ ಲಗೇಜ್ ಭತ್ಯೆ ಇದೆ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತವನ್ನ ಸಾಗಿಸುವುದಕ್ಕೆ ಶುಲ್ಕ ವಿಧಿಸಲಾಗುತ್ತದೆ ಎಂದು ವಿವರಿಸಿದ್ದಾರೆ.
ಅಲ್ಲದೆ ಎರಡನೇ ದರ್ಜೆಯ ಪ್ರಯಾಣಿಕರು 35 ಕೆಜಿ ವರೆಗೆ ಸಾಮಾನುಗಳನ್ನು ಉಚಿತವಾಗಿ ಸಾಗಿಸಲು ಅವಕಾಶವಿದೆ. ಈ ಮೊತ್ತಕ್ಕಿಂತ ಹೆಚ್ಚಿನದನ್ನು ಸಾಗಿಸುವ ಪ್ರಯಾಣಿಕರು 70 ಕೆಜಿ ವರೆಗೆ ಸಾಮಾನುಗಳನ್ನು ಸಾಗಿಸಬಹುದು, ಆದರೆ ಅವರಿಗೆ ಶುಲ್ಕ ವಿಧಿಸಲಾಗುತ್ತದೆ. ಆದಾಗ್ಯೂ, ಸ್ಲೀಪರ್ ದರ್ಜೆಯ ಪ್ರಯಾಣಿಕರಿಗೆ ಸ್ವಲ್ಪ ಹೆಚ್ಚಿನ ಉಚಿತ ಭತ್ಯೆ ಇರುತ್ತದೆ. ಅವರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ 40 ಕೆಜಿ ವರೆಗೆ ಸಾಮಾನುಗಳನ್ನು ಸಾಗಿಸಬಹುದು ಎಂದಿದ್ದಾರೆ.













