Home News Shobha Karandlaje: ಸಿಎಂ ಅಪರಾಧಿ: ರಾಜಿನಾಮೆ ಕೊಟ್ಟು ತನಿಖೆ ಎದುರಿಸಲಿ – ಶೋಭ ಕರಂದ್ಲಾಜೆ

Shobha Karandlaje: ಸಿಎಂ ಅಪರಾಧಿ: ರಾಜಿನಾಮೆ ಕೊಟ್ಟು ತನಿಖೆ ಎದುರಿಸಲಿ – ಶೋಭ ಕರಂದ್ಲಾಜೆ

Hindu neighbor gifts plot of land

Hindu neighbour gifts land to Muslim journalist

Shobha Karandlaje: ಮೂಡ ಹಗರಣದಲ್ಲಿ(MUDA Scam) ಸಿಎಂ ಸಿದ್ದರಾಮಯ್ಯನವರ(CM Siddaramayiah) ಅಪರಾಧಿ(Culprit) ಅನ್ನೋದು ಸಾಬೀತಾಗಿದೆ. ರಾಜ್ಯಪಾಲರ ಪ್ರಾಸಿಕ್ಯೂಷನ್ ಕೊಟ್ರಿದ್ರೋ ಅದನ್ನು ಹೈಕೋರ್ಟ್(High Court) ಎತ್ತಿ ಹಿಡಿದಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನವದೆಹಲಿಯಲ್ಲಿ(New Delhi) ಮೂಡಾ ಹಗರಣದ ಹೈಕೋರ್ಟಿನ ಆದೇಶದ(Court Order) ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಮೊದಲು ದಲಿತರ ಜಮೀನು ಪಡೆದಿದ್ದು, ನಂತರ ಅವರ ಮನೆಯವರ ಮಾಡಿದ್ದು ತಪ್ಪು. ತದನಂತರ ಸಿದ್ದರಾಮಯ್ಯ ಪತ್ನಿಗೆ ಸೈಟ್ ಪಡೆಯಲು ಪೂರ್ವ ಅನ್ವಯ ಮಾಡಿದ್ರು. ಜಮೀನು ಕೊಟ್ಟಿರೋದು ಹಳ್ಳಿಯಲ್ಲಿ. ಆದರೆ ಸೈಟ್ ಪಡೆದಿದ್ದು ಪ್ರತಿಷ್ಠಿತ ಜಾಗದಲ್ಲಿ. ಸಿದ್ದರಾಮಯ್ಯ ಅವರು ಎಲ್ಲಾ ಸಂದರ್ಭದಲ್ಲಿ ಸಂವಿಧಾನದ ಹುದ್ದೆಯಲ್ಲಿದ್ರು ಎಂದರು.

ಈ ಪ್ರಕರಣವನ್ನು ಲೋಕಾಯುಕ್ತ ಮುಂದೆ ತನಿಖೆ ಮಾಡಬೇಕಾಗಬಹುದು. ಲೋಕಾಯುಕ್ತ ಮುಚ್ಚಿದವರು ಈಗ ಲೋಕಾಯುಕ್ತ ವೀಕ್ ಮಾಡಬಹುದು. ಹಾಗಾಗಿ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಲೋಕಾಯುಕ್ತ ತನಿಖೆ ಬೇಡ ಅಂತ ನಾವು ಹೇಳೋದಿಲ್ಲ. ಬದಲಿಗೆ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಇರುವುದು ಬೇಡ. ರಾಜೀನಾಮೆ ಕೊಟ್ಟು ತನಿಖೆ ಹೆದರಿಸಲಿ ಎಂದರು.