Home News AI: ಜೈಲಲ್ಲಿ ನಟ ದರ್ಶನ್ ಭೇಟಿಯಾಗಿ ಹಣ್ಣು ಕೊಟ್ಟ ಶಿವಣ್ಣ, ಸುದೀಪ್, ಯಶ್!!

AI: ಜೈಲಲ್ಲಿ ನಟ ದರ್ಶನ್ ಭೇಟಿಯಾಗಿ ಹಣ್ಣು ಕೊಟ್ಟ ಶಿವಣ್ಣ, ಸುದೀಪ್, ಯಶ್!!

Hindu neighbor gifts plot of land

Hindu neighbour gifts land to Muslim journalist

AI: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಜಾಮೀನು ರದ್ದಾದ ಬಳಿಕ ಮತ್ತೆ ಪರಪ್ಪನ ಅಗ್ರಹಾರವನ್ನು ಸೇರಿಕೊಂಡಿದ್ದಾರೆ. ಇದೀಗ ದರ್ಶನ್ ಜೈಲು ಪಾಲಾಗಿ ನೂರು ದಿನಗಳು ಕಳೆದಿವೆ. ಈ ನಡುವೆ ಅನೇಕ ನಟ- ನಟಿಯರು ದರ್ಶನವರನ್ನು ಭೇಟಿಯಾಗಿ ಸಮಾಧಾನ ಮಾಡಿದ್ದಾರೆ. ಹೀಗಿರುವಾಗ ನಟ ದರ್ಶನ್ ಅವರನ್ನು ಜೈಲಲ್ಲಿ ಖ್ಯಾತ ನಟರಾದ ಯಶ್, ಸುದೀಪ್, ಮತ್ತು ಶಿವಣ್ಣ ಭೇಟಿ ಮಾಡಿ ಹಣ್ಣು ನೀಡಿದ್ದಾರೆ ಎನ್ನಲಾಗುತ್ತಿದೆ. 

 ಶಿವಣ್ಣ, ಸುದೀಪ್ ಮತ್ತು ಯಶ್ ಅವರು ನಟ ದರ್ಶನ್ ಗೆ ಹಣ್ಣುಕೊಟ್ಟು ಸಮಾಧಾನ ಹೇಳಿರುವುದು ನಿಜ. ಆದರೆ ಅದು ನಿಜ ಜೀವನದಲ್ಲಿ ಅಲ್ಲ. ಬದಲಿಗೆ ಎ ಐ ವಿಡಿಯೋದಲ್ಲಿ. ಯಸ್, ದರ್ಶನ್‌ ಅವರಿಗೆ ಒಂದು ಕಾಲದಲ್ಲಿ ಆಪ್ತವಾಗಿದ್ದ ಕಿಚ್ಚ ಸುದೀಪ್‌ (Kiccha Sudeep), ಶಿವರಾಜ್‌ ಕುಮಾರ್‌ (Shiva Rajkumar) ಹಾಗೂ ನಟ ಯಶ್‌ (Yash) ದರ್ಶನ್ ಅವರನ್ನು ನೋಡಲು ಜೈಲಿಗೆ ಭೇಟಿ ಮಾಡಿರುವ ವಿಡಿಯೋ ವೈರಲ್‌ ಆಗಿದೆ.! ಸುದೀಪ್‌, ಶಿವಣ್ಣ, ಯಶ್‌ ಅವರು ಹಣ್ಣು ಹಂಪಲುಗಳನ್ನು ದರ್ಶನ್‌ ಅವರಿಗೆ ನೀಡಿದ್ದಾರೆ. ಇದಾದ ಬಳಿಕ ಅವರ ಜತೆ ಕೆಲವೊಂದಿಷ್ಟು ಸಮಯ ಕಳೆದಿದ್ದು, ಕೇರಂ ಆಡಿ ಒಟ್ಟಿಗೆ ಊಟ ಮಾಡಿದ್ದಾರೆ. ಕೊನೆಗೆ ಬೈ ಹೇಳಿ ಜೈಲಿನಿಂದ ಹೊರಟಿದ್ದಾರೆ.

ಜೈಲಿನಲ್ಲಿ ಒಬ್ಬ ಖೈದಿಯನ್ನು ಭೇಟಿ ಮಾಡಲು ಸ್ನೇಹಿತರ ಹೋದರೆ ಏನೆಲ್ಲ ಅನುಭವ ಆಗುತ್ತದೆ. ಅವರು ಒಟ್ಟಿಗೆ ಹೇಗೆಲ್ಲ ಕಾಣಬಹುದು ಎಂಬ ಪರಿಕಲ್ಪನೆಯನ್ನು ಇಲ್ಲಿ ಎಐನಿಂದ ಸೃಷ್ಟಿಸಲಾಗಿದೆ. ಸಾಕಷ್ಟು ಮೆಚ್ಚುಗೆ ಕಾಮೆಂಟ್‌ಗಳು ಈ ವಿಡಿಯೋಗೆ ಬಂದಿವೆ. ಒಂದೇ ದಿನದಲ್ಲಿ 2.74 ಲಕ್ಷ ಲೈಕ್ಸ್‌ಗಳು, ನೂರಾರು ಕಾಮೆಂಟ್‌ಗಳು ಬಂದಿವೆ.

https://www.instagram.com/reel/DRjN39SknOA/?igsh=MWIycTh2emFyM3hwOA==