Home News Shivananda Mutt: ಮತ್ತೊಂದು ಸ್ವಾಮೀಜಿಯ ಕಾಮಪುರಾಣ ಬಯಲು: ಮಹಿಳೆಯೊಬ್ಬರಿಂದ ಬೆತ್ತಲೆ ಮಸಾಜ್

Shivananda Mutt: ಮತ್ತೊಂದು ಸ್ವಾಮೀಜಿಯ ಕಾಮಪುರಾಣ ಬಯಲು: ಮಹಿಳೆಯೊಬ್ಬರಿಂದ ಬೆತ್ತಲೆ ಮಸಾಜ್

Hindu neighbor gifts plot of land

Hindu neighbour gifts land to Muslim journalist

Shivananda Mutt: ಸ್ವಾಮೀಜಿಗಳು ದೇವರ ಸ್ವರೂಪ ಎಂದು ಹೇಳಲಾಗುತ್ತೆ. ಆದರೆ ಇತ್ತೀಚಿಗೆ ಕೆಲವು ಸ್ವಾಮೀಜಿಗಳ ನಿಜ ರೂಪ ಬಯಲಾಗುತ್ತಿದೆ. ಅಂತೆಯೇ ಇದೀಗ ಮತ್ತೊಬ್ಬ ಸ್ವಾಮೀಜಿಯ ಅಸಲಿ ಮುಖ ಬೀದಿಗೆ ಬಂದಿದೆ.

ಹೌದು, ಕವಲಗೇರಿ ಮಠದ ಶಿವಾನಂದ ಮಠದ (Kavalageri Shivananda Mutt) ಸರಸ್ವತಿ ಸ್ವಾಮೀಜಿಯ ಕಾಮಪುರಾಣ ಬಯಲಾಗಿದೆ. ಮಠದ ಆವರಣದಲ್ಲೇ ಮಹಿಳೆಯೊಬ್ಬರಿಂದ ಮಸಾಜ್‌ ಮಾಡಿಸಿಕೊಂಡಿರುವ ವಿಡಿಯೋ ವೈರಲ್‌ ಆಗಿದೆ.

ಮಹಿಳೆಯ ಜೊತೆ ಬೆತ್ತಲೆಯಾಗಿ ಸ್ನಾನ ಮಾಡಿಸಿಕೊಂಡು ಮೈಯಲ್ಲಾ ಮಸಾಜ್ ಮಾಡಿಸಿಕ್ಕೊಂಡಿದ್ದಾರೆ. ಗ್ರಾಮಸ್ಥರ ಮುಂದೆ ಸನ್ಯಾಸಿಯಂತೆ ಪೋಸ್‌ ಕೊಡ್ತಿದ್ದ ಸರಸ್ವತಿ ಸ್ವಾಮಿಗೆ 60 ವರ್ಷವಾದ್ರೂ ಚಪಲ ಮಾತ್ರ ಕಡಿಮೆಯಾಗಿಲ್ಲ. ಗ್ರಾಮಸ್ಥರ ಆಧ್ಯಾತ್ಮಿಕ ಕೇಂದ್ರವಾಗಿದ್ದ ಮಠವನ್ನೇ ಸರಸ್ವತಿ ಸ್ವಾಮಿ ಮಸಾಜ್ ಪಾರ್ಲರ್ ಆಗಿ ಮಾಡಿಕೊಂಡಿದ್ದು ಭಕ್ತರ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವನ್ನುಂಟು ಮಾಡಿದೆ.

ವಿಡಿಯೋ ವೈರಲ್‌ (Video Viral) ಆಗ್ತಿದ್ದಂತೆ ಇದರಿಂದ ಸ್ಥಳೀಯರು ಸ್ವಾಮೀಜಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ಬೆನ್ನಲ್ಲೇ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ರಾ ಅನ್ನೋ ಆರೋಪವೂ ಕೇಳಿಬಂದಿದೆ.ಸುಮಾರು 5 ಜನರ ಗುಂಪು ಈ ವಿಡಿಯೋವನ್ನಿಟ್ಟುಕೊಂಡು ಸ್ವಾಮೀಜಿಯನ್ನ ಬ್ಲಾಕ್‌ಮೇಲ್ ಮಾಡಿ 20 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿತ್ತು. ಗ್ರಾಮದ ವ್ಯಕ್ತಿಯೊಬ್ಬರ ಸಮ್ಮುಖದಲ್ಲಿ 10 ಲಕ್ಷಕ್ಕೆ ಡೀಲ್ ಓಕೆ ಆಗಿತ್ತು. ಬಳಿಕ ಸ್ವಾಮೀಜಿ ವಿಡಿಯೋ ಡಿಲೀಟ್‌ ಮಾಡುವಂತೆ ಹೇಳಿ ಮಠಕ್ಕೆ ಕರೆಸಿಕೊಂಡು 7 ಲಕ್ಷ ರೂಪಾಯಿ ಕೊಟ್ಟಿದ್ದಾರೆ. ಬಾಕಿ 3 ಲಕ್ಷ ಹಣ ಬಂದಿಲ್ಲ ಅಂತ ವಿಡಿಯೋ ವೈರಲ್‌ ಮಾಡಿದ್ದಾರೆ.

ಸದ್ಯ ವಿಡಿಯೋ ಮಾಡಿ ಹಣ ವಸೂಲಿ ಮಾಡಿದ ಗ್ಯಾಂಗ್ ವಿರುದ್ಧ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಸ್ವಾಮೀಜಿ ದೂರು ದಾಖಲಿಸಿದ್ದಾರೆ. ವಿಡಿಯೋ ಇಟ್ಟುಕ್ಕೊಂಡು ಬ್ಲ್ಯಾಕ್ ಮೇಲ್ ಮಾಡಿರುವ ಐವರ ವಿರುದ್ಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಲು ಮುಂದಾಗಿದ್ದಾರೆ.