Home latest Shocking News: ವಿದ್ಯಾರ್ಥಿಯ ಸ್ಕೂಲ್ ಬ್ಯಾಗ್ ನಿಂದ ಹೆಡೆ ಎತ್ತಿ ನಿಂತಿತು ನಾಗರಹಾವು!!!ಅಷ್ಟಕ್ಕೂ ಹಾವು ಶಾಲೆಬ್ಯಾಗ್...

Shocking News: ವಿದ್ಯಾರ್ಥಿಯ ಸ್ಕೂಲ್ ಬ್ಯಾಗ್ ನಿಂದ ಹೆಡೆ ಎತ್ತಿ ನಿಂತಿತು ನಾಗರಹಾವು!!!ಅಷ್ಟಕ್ಕೂ ಹಾವು ಶಾಲೆಬ್ಯಾಗ್ ನೊಳಗೆ ಬಂದದ್ದು ಹೇಗೆ?

Hindu neighbor gifts plot of land

Hindu neighbour gifts land to Muslim journalist

Shocking News: ಪೋಷಕರೇ ಎಚ್ಚರ!! ನಿಮ್ಮ ಸಣ್ಣ ನಿರ್ಲಕ್ಷ್ಯ ಧೋರಣೆ ಮಕ್ಕಳ ಜೀವಕ್ಕೆ ಕುತ್ತು ತರಬಹುದು!! ಅರೇ ಇದೇನಿದು ವಿಚಾರ ಅಂತೀರಾ? ಹಾಗಿದ್ರೆ, ನೀವು ಈ ಕಹಾನಿ ತಿಳಿಯಲೇಬೇಕು. ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಬಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯ ಬ್ಯಾಗ್ ನಲ್ಲಿ(School Bag)ನಾಗರಹಾವು(Snake)ಪತ್ತೆಯಾಗಿದೆ.

 

ಎಂದಿನಂತೆ ಎರಡನೇ ತರಗತಿ ವಿದ್ಯಾರ್ಥಿ ಭವನ್ ಶುಕ್ರವಾರ ಬೆಳಗ್ಗೆ ಶಾಲೆಗೆ ಆಗಮಿಸಿದ್ದು, ಶಿಕ್ಷಕರು ಪಾಠ ಓದಲು ಪುಸ್ತಕ ತೆಗೆಯುವಂತೆ ಮಕ್ಕಳಿಗೆ ತಿಳಿಸಿದ್ದು, ಹೀಗಾಗಿ, ಭುವನ್ ಬ್ಯಾಗ್ ತೆರೆದ ಸಂದರ್ಭ ಬ್ಯಾಗಿನಲ್ಲಿ ನಾಗರಹಾವು ಮಲಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಬಾಲಕ ಪಕ್ಕದಲ್ಲಿ ಕುಳಿತಿದ್ದ ಸಹಪಾಠಿ ಮಣಿಕಂಠನಿಗೆ ಹಾವನ್ನು ತೋರಿಸಿದ್ದಾನೆ.

 

ತಕ್ಷಣವೇ ಮಣಿಕಂಠ ಬ್ಯಾಗ್ ನ ಜಿಪ್ ಎಳೆದು ಶಿಕ್ಷಕರಿಗೆ (Teachers)ಮಾಹಿತಿ ನೀಡಿದ್ದು, ಶಿಕ್ಷಕರು ಕೂಡಲೇ ಬ್ಯಾಗ್ ಅನ್ನು ಕೊಠಡಿಯಿಂದ ಹೊರಗೆ ತಂದು ತೆಗೆದು ನೋಡಿದಾಗ ನಾಗರಹಾವು ಇರುವುದು ಗೊತ್ತಾಗಿದ್ದು, ಕೂಡಲೇ ಪೋಷಕರನ್ನು ಕರೆಸಿ ಬ್ಯಾಗ್ ನಲ್ಲಿದ್ದ ನಾಗರಹಾವನ್ನು ಸಮೀಪದ ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.