Home News Shivamogga: ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾದ ಬಾಕ್ಸ್ ಪ್ರಕರಣಕ್ಕೆ ರೋಚಕ ತಿರುವು – ಖದೀಮರ ಪ್ಲಾನ್...

Shivamogga: ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾದ ಬಾಕ್ಸ್ ಪ್ರಕರಣಕ್ಕೆ ರೋಚಕ ತಿರುವು – ಖದೀಮರ ಪ್ಲಾನ್ ಕೇಳಿದ್ರೆ ನೀವೂ ಶಾಕ್ ಆಗ್ತೀರಾ !!

Shivamogga

Hindu neighbor gifts plot of land

Hindu neighbour gifts land to Muslim journalist

Shimoga Railway Station : ಶಿವಮೊಗ್ಗದ (Shimoga)ರೈಲ್ವೆ ನಿಲ್ದಾಣದ (Shivamogga Railway Station) ಬಳಿ‌ ಪತ್ತೆಯಾದ ಎರಡು ಅನುಮಾನಾಸ್ಪದ ಬಾಕ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ಮಾಹಿತಿಗಳು ಹೊರಬಿದ್ದಿವೆ. ಶಿವಮೊಗ್ಗದ ರೈಲು ನಿಲ್ದಾಣದ ಪಾರ್ಕಿಂಗ್ ಲಾಟ್ನಲ್ಲಿ ನವೆಂಬರ್ 05ರಂದು ಎರಡು ಅನಾಮಧೇಯ ಬಾಕ್ಸ್ (Box)ಪತ್ತೆಯಾಗಿದೆ. ಇದರ ಜೊತೆಗೆ, ಬಾಕ್ಸ್ ಮೇಲೆ ಮೇಡ್ ಇನ್ ಬಾಂಗ್ಲಾದೇಶ ಮತ್ತು ಫುಡ್ ಗ್ರೈನ್ಸ್ ಆ್ಯಂಡ ಶುಗರ್ಸ್ ಎಂದು ಬರೆಯಲಾಗಿತ್ತು.

ಬೃಹತ್ ಬಾಕ್ಸ್ಗಳು ಪತ್ತೆಯಾದ ಪೊಲೀಸರು ತನಿಖೆ ನಡೆಸಿ ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದಲ್ಲಿ ಭದ್ರಾವತಿ ಮೂಲದ ನಸ್ರುಲ್ಲಾ ಹಾಗೂ ತಿಪಟೂರಿನ ಜಬೀವುಲ್ಲಾ ಎಂಬ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಸದ್ಯ ಪೊಲೀಸರ ವಿಚಾರಣೆ ವೇಳೆ ಬಾಕ್ಸ್ ಹಿಂದಿನ ರಹಸ್ಯ ಬಯಲಾಗಿದೆ. ಅಕ್ರಮದ ಬಾಕ್ಸ್ನಲ್ಲಿ ಕಂತೆ, ಕಂತೆ ಹಣವಿದ್ದು, ಆ ಬಾಕ್ಸ್ ನಿಮ್ಮದಾಗಿಸಿಕೊಳ್ಳಲು 5 ಲಕ್ಷ ಹಣ ನೀಡಿ ನಂತರ ಬಾಕ್ಸ್ ತೆಗೆದುಕೊಂಡು ಹೋಗಿ ಎಂದು ಉದ್ಯಮಿಯೊಬ್ಬರಿಗೆ ಕಿಡಿಗೇಡಿಗಳು ಯಾಮರಿಸಿದ್ದಾರೆ.

ತಿಪಟೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ಎಂಬುವವರನ್ನು ಸಂಪರ್ಕಿಸಿದ ಆರೋಪಿಗಳು ಹಣ ಮಾಡಬೇಕೆಂಬ ದುರುದ್ದೇಶದಿಂದ ನಮಗೆ ಹಣ ತುಂಬಿದ ಬಾಕ್ಸ್ಗಳು ದೊರೆತಿದ್ದು, ನಿಮಗೆ ಈ ಹಣ ಬೇಕಾದರೆ ಮೊದಲು ಎರಡೂವರೆ ಲಕ್ಷ ಹಣವನ್ನು ತಮ್ಮ ಖಾತೆಗೆ ಜಮಾ ಮಾಡುವಂತೆ ಹೇಳಿದ್ದಾರೆ. ಇದನ್ನು ನಂಬಿದ ರಮೇಶ್ ಹಣವನ್ನು ಕಳಿಸಿದ್ದಾರೆ. ಇದಾದ ಬಳಿಕ ಕೂಡ ಆರೋಪಿಗಳು ಹಣ ನೀಡಿಲ್ಲ. ಈ ನಿಟ್ಟಿನಲ್ಲಿ ರಮೇಶ್ ಆರೋಪಿಗಳಿಗೆ ಕರೆ ಮಾಡಿ ತಾನು ಕೊಟ್ಟ ಹಣವನ್ನು ವಾಪಾಸ್ ಕೊಡುವಂತೆ ಮನವಿ ಮಾಡಿದ್ದಾರೆ.

ಆರೋಪಿಗಳು ಹಣ ಬೇಕಾದರೆ ಮತ್ತೆ ಎರಡೂವರೆ ಲಕ್ಷ ಹಣ ಹಾಕುವಂತೆ ತಿಳಿಸಿದ್ದಾರೆ. ಹೀಗೆ ಒಟ್ಟು ಐದು ಲಕ್ಷ ಹಣವನ್ನೂ ಉದ್ಯಮಿಯಿಂದ ಆರೋಪಿಗಳು ಪೀಕಿಸಿದ್ದಾರೆ. ಇದಾದ ಬಳಿಕ ಹಣ ಬೇಕಾದರೆ ಶಿವಮೊಗ್ಗಕ್ಕೆ ಬಾ ಎಂದು ಕರೆಸಿಕೊಂಡು ರೈಲ್ವೆ ನಿಲ್ದಾಣದ ಬಳಿ ಹಣದ ಪೆಟ್ಟಿಗೆಯಿದೆ ಎಂದು ಬಾಕ್ಸ್ ತೋರಿಸಿದ್ದಾರೆ. ಬಾಕ್ಸ್ ನೋಡುತ್ತಿದ್ದಂತೆ ಅನುಮಾನಗೊಂಡ ರಮೇಶ್ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆರೋಪಿಗಳು ಬಾಕ್ಸ್ನಲ್ಲಿ ಉಪ್ಪಿನ ಚೀಲ ತುಂಬಿ ಪ್ಯಾಕ್ ಮಾಡಿಟ್ಟಿದ್ದರು ಎಂದು ತನಿಖೆಯಿಂದ ಬಯಲಾಗಿದೆ. ಸದ್ಯ, ಪೊಲೀಸರು ತುಮಕೂರಿನಲ್ಲಿ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಹಣ ಗಳಿಕೆಗಾಗಿ ಬಾಕ್ಸ್ಗಳಲ್ಲಿ ಉಪ್ಪು ತುಂಬಿ ಹಣವಿದೆ ಎಂದು ಉದ್ಯಮಿಗೆ ಆರೋಪಿಗಳು ವಂಚಿಸಿರುವ ವಿಚಾರ ಬೆಳಕಿಗೆ ಬಂದಿದೆ.

 

ಇದನ್ನು ಓದಿ: Gruhalakshmi Yojana: ಗೃಹಲಕ್ಷ್ಮೀ ಹಣ ಬಾರದವರಿಗೆ ಬೊಂಬಾಟ್ ಸುದ್ದಿ- ನಿಮ್ಮ ಕೈಸೇರೋದು 2,000 ಅಲ್ಲ ಬರೋಬ್ಬರಿ 6,000 !! ಆದ್ರೆ ಈ ಕೆಲಸ ಮಾಡಿದ್ರೆ ಮಾತ್ರ