Home News ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್‌ನ ನೂತನ ಅಧ್ಯಕ್ಷರಾಗಿ ಶಶಿಕುಮಾ‌ರ್ ರೈ ಬಾಲ್ಯೊಟ್ಟು ಅವಿರೋಧ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್‌ನ ನೂತನ ಅಧ್ಯಕ್ಷರಾಗಿ ಶಶಿಕುಮಾ‌ರ್ ರೈ ಬಾಲ್ಯೊಟ್ಟು ಅವಿರೋಧ ಆಯ್ಕೆ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್‌ನ ನೂತನ ಅಧ್ಯಕ್ಷರಾಗಿ ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಶಶಿಕುಮಾ‌ರ್ ರೈ ಬಾಲ್ಯೊಟ್ಟು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ನೀಲಯ್ಯ ಎಂ ಅಗರಿ ಆಯ್ಕೆಯಾಗಿದ್ದಾರೆ.

ಸೋಮವಾರ ಯೂನಿಯನ್‌ನ ಕಚೇರಿಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾ‌ರ್ ಉಪಸ್ಥಿತಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.

ನಿರ್ದೇಶಕರ ಅವಿರೋಧ ಆಯ್ಕೆ

ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಎಲ್ಲ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ.

ಮಂಗಳೂರು ತಾಲೂಕಿನ ಫ್ಯಾಕ್ಸ್ ಸಂಘಗಳ ಕ್ಷೇತ್ರದಿಂದ ನೀಲಯ ಎಂ. ಅಗರಿ, ಬಂಟ್ವಾಳ ತಾಲೂಕು ಫ್ಯಾಕ್ಸ್ ಸಹಕಾರ ಸಂಘಗಳ ಕ್ಷೇತ್ರದಿಂದ ಬಿ. ಪದ್ಮಶೇಖರ ಜೈನ್ ಪುತ್ತೂರು ತಾಲೂಕು ಫ್ಯಾಕ್ಸ್ ಸಹಕಾರ ಸಂಘಗಳ ಕ್ಷೇತ್ರದಿಂದ ಶಶಿಕುಮಾ‌ರ್ ರೈ ಬಾಲ್ಗೊಟ್ಟು, ಸುಳ್ಯ ತಾಲೂಕು ಫ್ಯಾಕ್ಸ್ ಸಹಕಾರ ಸಂಘಗಳ ಕ್ಷೇತ್ರದಿಂದ ವಿಷ್ಣು ಭಟ್ ಬಿ. ಬೆಳ್ತಂಗಡಿ ತಾಲೂಕು ಫ್ಯಾಕ್ಸ್ ಸಹಕಾರ ಸಂಘಗಳ ಕ್ಷೇತ್ರದಿಂದ ಸತೀಶ್ ಕೆ., ಮಂಗಳೂರು ತಾಲೂಕಿನ ಮೂಡುಬಿದಿರೆ – ಮುಲ್ಕಿ ಫಿರ್ಕಾ ಫ್ಯಾಕ್ಸ್ ಸಹಕಾರ ಸಂಘಗಳ ಕ್ಷೇತ್ರದಿಂದ ಜೊಯ್ಸಸ್‌ ವಿಲೈಡ್ ಡಿಸೋಜ, ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ ಸುಧಾಕರ ಪಿ. ಶೆಟ್ಟಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಹಕಾರಿ ಕ್ಷೇತ್ರದಿಂದ ಮಂಜುನಾಥ್.ಎನ್. ಎಸ್, ಮಹಿಳಾ ಸಹಕಾರಿ ಸಂಘಗಳ ಕ್ಷೇತ್ರದಿಂದ ಸವಿತಾ ಎನ್. ಶೆಟ್ಟಿ, ಪಟ್ಟಣ ಸಹಕಾರಿ ಬ್ಯಾಂಕ್, ಪತ್ತಿನ ಸಹಕಾರಿ ಸಂಘಗಳ ಕ್ಷೇತ್ರದಿಂದ ಡಾ. ಎಸ್. ಆರ್. ಹರೀಶ್ ಆಚಾರ್ಯ, ಮೀನುಗಾರಿಕಾ ಸಹಕಾರ ಸಂಘಗಳು, ಕೈಗಾರಿಕಾ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ. ಸಂಜೀವ ಪೂಜಾರಿ, ಜಿಲ್ಲೆಯ ಮಾರಾಟ ಸಹಕಾರಿ ಸಂಘಗಳ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಹಕಾರ ಬ್ಯಾಂಕುಗಳ ಕ್ಷೇತ್ರದಿಂದ ಪ್ರವೀಣ್ ಗಿಲ್ಬರ್ಟ್ ಪಿಂಟೊ ಹಾಗೂ ಇತರ ಎಲ್ಲಾ ಸಹಕಾರ ಸಂಘಗಳ ಕ್ಷೇತ್ರದಿಂದ ಚಿತ್ತರಂಜನ್‌ ಬೋಳಾರ್ ಇವರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರ ಚುನಾವಣೆಯ ಸಂದರ್ಭ ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್.ಎಚ್.ಎನ್, ಎಸ್‌ಸಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ವಿನಯಕುಮಾರ ಸೂರಿಂಜೆ ಉಪಸ್ಥಿತರಿದ್ದರು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಇವರು ಚುನಾವಣಾ ಪ್ರಕ್ರಿಯೆ ನಡೆಸಿದರು.