Home News Varanasi: ನಮಾಜ್ ವೇಳೆ ಹನುಮಾನ್ ಚಾಲೀಸ್ ಪಠಿಸಿದ ವಿದ್ಯಾರ್ಥಿಗಳು – ಏಳು ಮಂದಿ ಪೊಲೀಸ್ ವಶಕ್ಕೆ

Varanasi: ನಮಾಜ್ ವೇಳೆ ಹನುಮಾನ್ ಚಾಲೀಸ್ ಪಠಿಸಿದ ವಿದ್ಯಾರ್ಥಿಗಳು – ಏಳು ಮಂದಿ ಪೊಲೀಸ್ ವಶಕ್ಕೆ

Hindu neighbor gifts plot of land

Hindu neighbour gifts land to Muslim journalist

Varanasi: ಉತ್ತರ ಪ್ರದೇಶದ ವಾರಣಾಸಿಯ(Varanasi) ಕಾಲೇಜಿನ ಆವರಣದಲ್ಲಿರುವ ಮಸೀದಿಯೊಂದರಲ್ಲಿ ನಮಾಜ್(Namaz) ಮಾಡುತ್ತಿದ್ದ ವೇಳೆ ಹನುಮಾನ್ ಚಾಲೀಸಾ(Hanuman Chalisa Row) ಪಠಣ ಮಾಡಿದ ಆರೋಪದ ಮೇಲೆ ಏಳು ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿರುವ ಮಾಹಿತಿ ವರದಿ ಆಗಿದೆ.

ಹೌದು, ಉತ್ತರ ಪ್ರದೇಶದ ವಾರಣಾಸಿಯ ಕಾಲೇಜೊಂದರ ಆವರಣದಲ್ಲಿರುವ ಮಸೀದಿಗೆ ಬಂದು ಹೊರಗಿನವರು ನಮಾಜ್‌ ಮಾಡಿದ ಕಾರಣಕ್ಕಾಗಿ ಅಲ್ಲಿನ ವಿದ್ಯಾರ್ಥಿಗಳು ಆಕ್ರೋಶಗೊಂಡು ತಾವು ಜೋರಾಗಿ ಹನುಮಾನ್‌ ಚಾಲೀಸಾ ಪಠಣ ಮಾಡಿದ ಪರಿಣಾಮ ಏಳು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಮಾಜ್‌ ಹೆಸರಿನಲ್ಲಿ ಹೊರಗಿನವರು ಮಸೀದಿ ಇರುವ ಕಾಲೇಜು ಆವರಣಕ್ಕೆ ಬರುವುದನ್ನು ಪ್ರತಿಭಟಿಸಿ ಹನುಮಾನ್ ಚಾಲೀಸಾ ಪಠಣ ಮಾಡಲಾಯಿತು ಎಂದು ಉದಯ ಪ್ರತಾಪ್ ಕಾಲೇಜಿನ ವಿದ್ಯಾರ್ಥಿ ನಾಯಕ ವಿವೇಕಾನಂದ ಸಿಂಗ್ ಹೇಳಿದ್ದಾರೆ. ಕಾಲೇಜು ಆವರಣದ ಮಸೀದಿ ಬಳಿ ಇಲ್ಲಿನ ವಿದ್ಯಾರ್ಥಿಗಳು ನಮಾಜ್ ಮಾಡಿದರೆ ನಮಗೆ ಯಾವುದೇ ಆಕ್ಷೇಪವಿಲ್ಲ. ಆದರೆ ನಮಾಜ್ ಹೆಸರಿನಲ್ಲಿ ಹೊರಗಿನವರು ಕಾಲೇಜು ಆವರಣ ಪ್ರವೇಶಿಸುವುದನ್ನು ನಾವು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.

ಮಾಹಿತಿ ಪ್ರಕಾರ, ಕಾಲೇಜು ಆವರಣದಲ್ಲಿರುವ ಮಸೀದಿ ಬಳಿ ಹನುಮಾನ್ ಚಾಲೀಸಾ ಪಠಿಸಲು ವಿದ್ಯಾರ್ಥಿಗಳು ಹಠ ಹಿಡಿದಿದ್ದರು ಎಂದು ವಾರಣಾಸಿ ಕ್ಯಾಂಟ್ ಪ್ರದೇಶದ ಹೆಚ್ಚುವರಿ ಪೊಲೀಸ್ ಆಯುಕ್ತರಾದ(ACP) ವಿದುಷ್ ಸಕ್ಸೇನಾ ತಿಳಿಸಿದ್ದಾರೆ.