Home News Gurmeet Choudhary:ಇದ್ದಕ್ಕಿದ್ದಂತೆ ಕುಸಿದು ಬಿದ್ದ ವ್ಯಕ್ತಿ, ತಕ್ಷಣ ಸಿಪಿಆರ್ ಕೊಟ್ಟು ಬದುಕಿಸಿದ ಖ್ಯಾತ ನಟ!!

Gurmeet Choudhary:ಇದ್ದಕ್ಕಿದ್ದಂತೆ ಕುಸಿದು ಬಿದ್ದ ವ್ಯಕ್ತಿ, ತಕ್ಷಣ ಸಿಪಿಆರ್ ಕೊಟ್ಟು ಬದುಕಿಸಿದ ಖ್ಯಾತ ನಟ!!

Gurmeet Choudhary

Hindu neighbor gifts plot of land

Hindu neighbour gifts land to Muslim journalist

Tv Actor Gurmeet Choudhary Gives Cpr: ರಾಮಾಯಣ’ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರ ಮಾಡಿದ್ದ ನಟ ಗುರ್ಮೀತ್ ಚೌಧರಿ ಅವರು ನಿಜ ಜೀವನದಲ್ಲಿ ಕೂಡ ದೇವರಂತೆ ಜೀವ ಉಳಿಸಿದ ಘಟನೆ ವರದಿಯಾಗಿದೆ.ನಟ ಗುರ್ಮೀತ್ ಚೌಧರಿ ಅವರು ಪ್ರಜ್ಞೆ ಕಳೆದುಕೊಂಡ ವ್ಯಕ್ತಿಯೊಬ್ಬರಿಗೆ ಸಿಪಿಆರ್ ನೀಡಿ (Tv Actor Gurmeet Choudhary Gives Cpr)ಜೀವ ರಕ್ಷಣೆ ಮಾಡಿದ ಘಟನೆ ನಡೆದಿದೆ.

ಖ್ಯಾತ ಕಿರುತೆರೆ ನಟ ಗುರ್ಮೀತ್ ಚೌಧರಿ (Gurmeet Choudhary)ಅವರು ರೀಲ್ ಲೈಫ್‌ನಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲಿಯು ಕೂಡ ಹೀರೋ ಆಗಿದ್ದಾರೆ.ಇತ್ತೀಚಿನ ವರ್ಷಗಳಲ್ಲಿ ಯುವಜನರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿದ್ದು,ಆದರೆ ಸರಿಯಾದ ಸಮಯಕ್ಕೆ ಸಿಪಿಆರ್( cardiopulmonary resuscitation)ಕೊಟ್ಟಲ್ಲಿ ಆ ವ್ಯಕ್ತಿ ಬದುಕುಳಿಯುವ ಸಂಭವ ಹೆಚ್ಚು ಎನ್ನಲಾಗುತ್ತದೆ. ಇದೇ ರೀತಿ , ಗುರ್ಮೀತ್ ಚೌಧರಿ ಕುಸಿದು ಬಿದ್ದ ವ್ಯಕ್ತಿಗೆ ಸಿಪಿಆರ್ ನೀಡಿ ಜೀವ ಉಳಿಸುವ ಪುಣ್ಯ ಕಾರ್ಯ ಮಾಡಿದ್ದಾರೆ.

ನಟ ಮುಂಬೈ ನಗರದಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದಿದ್ದನ್ನು ಗಮನಿಸಿ ನಟ ಗುರ್ಮೀತ್ ಚೌಧರಿ ಅವರು ಪ್ರಜ್ಞೆ ಕಳೆದುಕೊಂಡ ವ್ಯಕ್ತಿಗೆ ಸಿಪಿಆರ್ ನೀಡಿದ್ದು, ಗುರ್ಮೀತ್ ಚೌಧರಿ ಅವರು ಪ್ರಜ್ಞೆ ಕಳೆದುಕೊಂಡ ವ್ಯಕ್ತಿಯ ಹಾರ್ಟ್‌ ಅನ್ನು ಪಂಪ್ ಮಾಡುವ ಮೂಲಕ ಜೀವ ಉಳಿಸುವ ಮಹತ್ಕಾರ್ಯ ಮಾಡಿದ್ದಾರೆ. ಇದರ ಜೊತೆಗೆ ಅಲ್ಲಿದ್ದವರಿಗೆ ಕುಸಿದ ವ್ಯಕ್ತಿಯ ಅವರ ಪಾದವನ್ನು ಉಜ್ಜಲು ಹೇಳಿ ಆಬಳಿಕ ಆ ವ್ಯಕ್ತಿಯನ್ನು ಆಂಬುಲೆನ್ಸ್ ವ್ಯವಸ್ಥೆ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ಗುರ್ಮೀತ್ ಅವರು ಸಿಪಿಆರ್ ನೀಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಿರುತೆರೆ ನಟನ ಮಾನವೀಯತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.