Home News ಸೆಕ್ಯೂರಿಟಿ ಗಾರ್ಡ್ ಸಿಡಿಲು ಬಡಿತದಿಂದ ಜಸ್ಟ್ ಸೆಕ್ಯೂರ್ | ವೈರಲ್ ಆದ ವೀಡಿಯೋ ಎಂತಹವರನ್ನೂ ಒಮ್ಮೆಗೆ...

ಸೆಕ್ಯೂರಿಟಿ ಗಾರ್ಡ್ ಸಿಡಿಲು ಬಡಿತದಿಂದ ಜಸ್ಟ್ ಸೆಕ್ಯೂರ್ | ವೈರಲ್ ಆದ ವೀಡಿಯೋ ಎಂತಹವರನ್ನೂ ಒಮ್ಮೆಗೆ ಬೆಚ್ಚಿಬಿಳಿಸುವಂತಿದೆ !!

Hindu neighbor gifts plot of land

Hindu neighbour gifts land to Muslim journalist

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಹಾಗೆಯೇ ಇದೀಗ ಎಲ್ಲರನ್ನು ಬೆಚ್ಚಿಬೀಳಿಸುವ ವೀಡಿಯೋವೊಂದು ವೈರಲ್ ಆಗಿದೆ. ಇಂಡೋನೇಷ್ಯಾದಲ್ಲಿ ವ್ಯಕ್ತಿಯೊಬ್ಬ ಸಿಡಿಲು ಬಡಿತದಿಂದ ಜಸ್ಟ್ ಮಿಸ್ ಆಗಿದ್ದು, ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ. ನೋಡುಗರನ್ನು ಬೆಚ್ಚಿ ಬೀಳಿಸುವ ವೀಡಿಯೋ ವೈರಲ್ ಆಗಿದೆ.

ಉತ್ತರ ಜಕಾರ್ತಾದ ಕರಾವಳಿ ಪಟ್ಟಣ ಸಿಲಿನ್ಸಿಂಗ್‍ನಲ್ಲಿ ಈ ಭಯಾನಕ ಘಟನೆ ನಡೆದಿದೆ. ಅಬ್ದುಲ್ ರೋಸಿದ್ (35) ಸಿಡಿಲು ಬಡಿತಕ್ಕೆ ಒಳಗಾದ ವ್ಯಕ್ತಿ.

ಸೆಕ್ಯುರಿಟಿ ಗಾರ್ಡ್ ಆಗಿರುವ ಅಬ್ದುಲ್, ಸಿಲಿನ್ಸಿಂಗ್‍ನಲ್ಲಿರುವ ಅಂಗಳದಲ್ಲಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ರೋಸಿದ್‍ಗೆ ಸಿಡಿಲು ಬಡೆಯುವ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೀಡಿಯೋವನ್ನು ಯೂಟ್ಯೂಬ್ ಚಾನೆಲ್ ಮೀಡಿಯಾ ಸ್ಟಾರ್ಟ್‍ನಲ್ಲಿ ಹಂಚಿಕೊಳ್ಳಲಾಗಿದೆ.

ಅಬ್ದುಲ್, ಕಾರ್ಖಾನೆಯ ಪಾಕಿರ್ಂಗ್ ಸ್ಥಳದಲ್ಲಿ ಛತ್ರಿ ಹಿಡಿದು ಮಳೆಯಲ್ಲಿ ಗಸ್ತು ತಿರುಗುತ್ತಿದ್ದಾಗ ಸಿಡಿಲು ಬಡಿದಿದೆ. ಆಗ ವ್ಯಕ್ತಿ ನೆಲದ ಮೇಲೆ ಕುಸಿದು ಬೀಳುತ್ತಾನೆ. ಈ ವೇಳೆ ಸಹೋದ್ಯೋಗಿಗಳು ಸ್ಥಳಕ್ಕೆ ಧಾವಿಸಿ ಅಬ್ದುಲ್‍ನನ್ನು ತಕ್ಷಣ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸುತ್ತಾರೆ. ಸಣ್ಣಪುಟ್ಟ ಗಾಯಗಳಾಗಿದ್ದ ಅಬ್ದುಲ್ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.