

Hijab: ಹಿಜಾಬ್ ವಿವಾದ ಅಲ್ಲಲ್ಲಿ ತಲೆಯುತ್ತಿದೆ. ಹೀಗಿರುವಾಗ ದಮೋಹ್ ನ ಗಂಗಾ ಜಮುನಾ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿನಿಯರಿಗೂ ಹಿಜಾಬ್ ರೀತಿಯ ವಸ್ತ್ರ ಕಡ್ಡಾಯ ಮಾಡಿದ ವಿವಾದವೊಂದು ಭುಗಿಲೆದ್ದಿದೆ. ಈ ಕುರಿತು ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ರಾಜ್ಯ ಸರ್ಕಾರ ಈ ಕುರಿತು ತನಿಖೆಗೆ ಆದೇಶಿಸಿದೆ.
ಅದಲ್ಲದೆ ಇತ್ತೀಚೆಗೆ ಶಾಲೆಯ ಫಲಿತಾಂಶ ಕುರಿತು ಹಾಕಲಾದ ಬ್ಯಾನರ್‌ನಲ್ಲಿ ಹಲವೂ ಹಿಂದೂ ವಿದ್ಯಾರ್ಥಿನಿಯರೂ ತಲೆಗೆ ಹಿಜಾಬ್ (Hijab) ರೀತಿಯ ವಸ್ತ್ರ ಧರಿಸಿದ್ದು ಕಂಡುಬಂದಿದೆ. ಮೊದಲಿಗೆ ಈ ಆರೋಪದ ಕುರಿತು ತನಿಖೆ ನಡೆಸಿದ್ದ ಜಿಲ್ಲಾ ಶಿಕ್ಷಣಾಧಿಕಾರಿಗಳು ಈ ಕುರಿತು ಯಾವುದೇ ದೂರು ಬಂದಿಲ್ಲ ಎಂದು ವರದಿ ನೀಡಿದ್ದರು. ಆದರೆ ಪ್ರಕರಣ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಈ ಕುರಿತು ತನಿಖೆ ನಡೆಸಲು ಗೃಹ ಸಚಿವ ನರೋತ್ತಮ ಮಿಶ್ರಾ (Narottam mishra) ಆದೇಶಿಸಿದ್ದಾರೆ.

ಈ ನಡುವೆ ಶಾಲೆಯ ಮಾಲೀಕ ಮುಶ್ತಾಖ್ ಖಾನ್ (Mushtakh Khan) ಪ್ರತಿಕ್ರಿಯೆ ನೀಡಿ, ಹಿಜಾಬ್ (Hijab) ರೀತಿಯ ಶಿರವಸ್ತ್ರ ಕೂಡಾ ಶಾಲೆಯ ಸಮವಸ್ತ್ರದ ಭಾಗವಾಗಿದೆ. ಈ ಬಗ್ಗೆ ನಾವು ಯಾರೂ ಮೇಲೂ ಒತ್ತಡ ಹೇರಿಲ್ಲ ಎಂದಿದ್ದಾರೆ.
ಸದ್ಯ ಗಂಗಾಜಮುನಾ ಶಾಲೆ ವಿವಾದ ಆರಂಭವಾದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಬುಧವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ನೀಡಿದರು. ಶಿಕ್ಷಣಾಧಿಕಾರಿ ನಡೆಸಿದ ತನಿಖೆ ತಪ್ಪು ಎಂದು ಅವರು ತನಿಖಾಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ.
ಅದಲ್ಲದೆ ಶಾಲೆಯ ಮಾನ್ಯತೆ ರದ್ದುಪಡಿಸುವಂತೆಯೂ ಜನರು ಒತ್ತಾಯಿಸಿದ್ದಾರೆ. ಜಿಲ್ಲಾ ಶಿಕ್ಷಣಾಧಿಕಾರಿ ಮೇಲೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಜ್ಞಾಪಕ ಪತ್ರ ಸಲ್ಲಿಸಲು ಬಂದಿದ್ದವರಲ್ಲಿ ಒಬ್ಬರಾದ ಮಾಂಟಿ ರಾಕ್ವಾರ್, ಹಿಂದೂ ಧರ್ಮದ ಹೆಣ್ಣು ಮಕ್ಕಳನ್ನು ಉದ್ದೇಶಪೂರ್ವಕವಾಗಿ ಹಿಜಾಬ್ ಧರಿಸಲು ಒತ್ತಾಯಿಸಲಾಗುತ್ತಿದೆ, ಅಂತಹವರಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.
ಇದನ್ನು ಓದಿ: LPG Cylinder: ಭರ್ಜರಿ ಇಳಿಕೆ ಕಂಡ LPG ಗ್ಯಾಸ್ ; ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 83.5 ರೂ. ಇಳಿಕೆ !













